- ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ವಿವರ – Public Information Officer – Click to View PDF File
- ಮೈಸೂರು ನಗರಾಬಿವೃದ್ದಿ ಪ್ರಾಧಿಕಾರ – ಸಾರ್ವಜನಿಕ ಸಂಪರ್ಕ ಅಧಿಕಾರಿಗಳ ವಿವರ
- RTI Form
- Organization Chart
ಮಾಹಿತಿ ಲಭ್ಯತೆ
ಸಾರ್ವಜನಿಕರಿಗೆ ಮತ್ತು ಬಳಕೆದಾರರಿಗೆ ಮಾಹಿತಿ ಮತ್ತು ಸಂಪರ್ಕ ನೀಡುವ ಸಲುವಾಗಿ ಮುಡಾವು ಪರಿಣಾಮಕಾರಿ ಮತ್ತು ಅತ್ಯುನ್ನತ ಮಾರ್ಗಗಳನ್ನು ರಚಿಸಿದೆ:
- ಎಲ್ಲಾ ಯೋಜನೆಗಳು, ನಿಯಮಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಮೊದಲೇ ಮುದ್ರಿತವಾದ ಬ್ರೌಷರ್ ಇತ್ಯಾದಿ.
- ಕಡಿಮೆ ವೆಚ್ಚದಲ್ಲಿ ಮೊದಲೇ ವಿವರಿಸಲ್ಪಟ್ಟ ದಾಖಲೆಗಳ ವ್ಯವಹಾರಗಳ ದಾಖಲೆಗಳನ್ನು ನೀಡುವುದು.
- ಪ್ರಮುಖ ದಿನಪತ್ರಿಕೆಗಳಲ್ಲಿ ಸಾರ್ವಜನಿಕ ಸೂಚನೆ ನೀಡುವುದು.
- ಪರಿಣಾಮಕಾರಿಯಾದ ವಿಚಾರಣಾ ವಿಭಾಗ ತೆರೆದು ಸಲಹೆಗಾರರ ನೇಮಕ ಮಾಡುವುದು.
- ಮಾಹಿತಿಯ ಪ್ರಚಾರಕ್ಕಾಗಿ ಮುದ್ರಣ ಮತ್ತು ದೃಷ್ಯ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು.
ಸಾರ್ವಜನಿಕ ಕುಂದುಕೊರತೆ
- ಸಾರ್ವಜನಿಕರಿಗೆ ಆಗುವ ಕಿರಿಕಿರಿ ತಪ್ಪಿಸುವ ಸಲುವಾಗಿ ಮುಡಾವು ಪರಿಣಾಮಕಾರಿಯಾದ ಸಾರ್ವಜನಿಕ ಕುಂದುಕೊರತೆ ವಿಭಾಗ ಸ್ಥಾಪಿಸುವುದು, ಸಾರ್ವಜನಿಕರಿಗೆ ನೆರವಾಗುವ ಭರವಸೆ ನೀಡಿದೆ.
- ಪ್ರಧಾನ ಕಚೇರಿಗಳಲ್ಲಿ ನೈತಿಕ ಸಮಿತಿ ರಚಿಸಿ ಅಧಿಕಾರಿಗಳ ವಿರುದ್ಧ ನೀಡಿರುವ ದೂರುಗಳ ಬಗ್ಗೆ ಕ್ರಮ ತೆಗೆದುಕೊಳ್ಳಲು ಕಾಲ ಮಿತಿ ರಚಿಸುವುದು.
- ನಿರ್ಮಾಣ ಹಂತ, ಸೇವೆಗಳು ಮತ್ತು ಸೌಲಭ್ಯಗಳಿಗೆ ಸಂಬಂಧಿಸಿದಂತೆ ಗುಣಮಟ್ಟ ನಿಯಂತ್ರಣ ಮತ್ತು ಪರಿಶೀಲನಾ ಸಮಿತಿ ರಚಿಸಿ, ಸಾರ್ವಜನಿಕರ ಎಲ್ಲಾ ಕುಂದುಕೊರತೆಗಳ ಸಂಬಂಧಿಸಿದ ದೂರುಗಳನ್ನು ನಿವಾರಿಸುವುದು.
- ಹೆಚ್ಚುವರಿ ಮುಖ್ಯ ಆಡಳಿತಾಗಾರ ಮತ್ತು ಇಓ ಮೂಲಕ ತ್ವರಿತಗತಿಯಲ್ಲಿ ಸಾರ್ವಜನಿಕರ ದೂರುಗಳ ವಿಚಾರಣೆ ನಡೆಸುವುದು..
- ಪ್ರಧಾನ ಕಚೇರಿಯಲ್ಲಿ ಹಿರಿಯ ಅಧಿಕಾರಿಯನ್ನು ನೇಮಕ ಮಾಡಿ, ಪರಿಶೀಲನೆ ಮತ್ತು ತ್ವರಿತಗತಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಮಾಡುವುದು.
- ನಿಗದಿತ ಸಮಯದಲ್ಲಿ ಸಾರ್ವಜನಿಕರ ಕುಂದುಕೊರತೆ ಬಗೆಹರಿಯದಿದ್ದರೆ ಹಿರಿಯ ಅಧಿಕಾರಿಗಳೇ ಸಾರ್ವಜನಿಕರಿಗೆ ಸಿಗುವಂತೆ ಮಾಡುವುದು.
ಗ್ರಾಹಕರ ಭಾದ್ಯತೆಗಳು
- ಈ ಸೇವೆಗಳನ್ನು ನಿರೀಕ್ಷಿಸುವವರಿಂದ ಪರಿಣಾಮಕಾರಿಯಾದ ಹೊಣೆಗಾರಿಕೆ ಮತ್ತು ಭಾಧ್ಯತೆಗಳ ವಿಸರ್ಜನೆ ಮಾಡುವುದು.
- ಮಧ್ಯವರ್ತಿಗಳಿಂದ ಯಾವುದೇ ಸೇವೆ ಪಡೆಯದೇ ಇರುವುದು.
- ಲಂಚದ ಮೂಲಕ ಯಾವುದೇ ಉದ್ಯೋಗಿಯಿಂದ ನೆರವನ್ನು ಕೇಳಬಾರದು.
- ಮಂಜೂರಾತಿ ಸಂದರ್ಭದಲ್ಲಿ ನೀಡಲಾಗುವ ಎಲ್ಲಾ ಷರತ್ತುಗಳನ್ನು ಪಾಲಿಸುವುದು ಮತ್ತು ಮಂಜೂರಾದ ಸ್ಥಳದ ನಿರ್ವಹಣೆಯನ್ನು ನೋಡಿಕೊಳ್ಳುವುದು.
- ಮಂಜೂರಾದ ಯೋಜನೆ ಪ್ರಕಾರವೇ ಕಟ್ಟಡದ ನಿರ್ಮಾಣ ಮಾಡಬೇಕು.
- ಯಾವುದೇ ಅನಧಿಕೃತ ನಿರ್ಮಾಣಗಳಿಗೆ ಅವಕಾಶ ನೀಡಬಾರದು.
- ಸಾರ್ವಜನಿಕ ಆಸ್ತಿಯನ್ನು ಒತ್ತುವರಿ ಮಾಡಬಾರದು.
- ಅನಧಿಕೃತ ಮತ್ತು ಮಂಜೂರಾಗದ ಕಾಲೋನಿ ನಿರ್ಮಾಣ ಮಾಡುವವರಿಂದ ನಿವೇಶನ ಖರೀದಿ ಮಾಡಬಾರದು.
- ಸಾರ್ವಜನಿಕ ಮೂಲಸೌಕರ್ಯ ಮತ್ತು ಷರತ್ತುಗಳ ಜಾರಿ ವಿಷಯದಲ್ಲಿ ಎಲ್ಲಾ ರೀತಿಯ ಸಹಕಾರ ಮತ್ತು ಬೆಂಬಲ ನೀಡುವುದು.
ಸಮುದಾಯಕ್ಕೆ ಉತ್ತಮ ರೀತಿಯ ಸೇವೆ ನೀಡುವ ಸಲುವಾಗಿ ಮುಡಾ ಎಲ್ಲಾ ರೀತಿ ಸಲಹೆ ಮತ್ತು ಪ್ರತಿಕ್ರಿಯೆಗಳನ್ನು ಸ್ವಾಗತಿಸುತ್ತದೆ.
ದಯಮಾಡಿ ಯಾವುದೇ ಅಳುಕಿಲ್ಲದೇ ಬರೆಯಿರಿ:
ಮುಡಾ ಆಯುಕ್ತ
commissioner@mudamysore.gov.in
Officer’s Details :: Click to View PDF File