Mysuru UDA App

ಸಂಖ್ಯೆ ಮೈನಪ್ರಾ/ಆಆಸಶಾ/2021-22 17.09.2021

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಬಹಳ ವರ್ಷಗಳ ನಂತರ ಮನೆಗಳನ್ನು ನಿರ್ಮಿಸಿ ವಸತಿ ರಹಿತರಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಅದರಂತೆ ಪ್ರಾಧಿಕಾರದಿಂದ ರಚಿತವಾದ ಬಡಾವಣೆಗಳಾದ ವಿಜಯನಗರ ಮತ್ತು ದಟ್ಟಗಳ್ಳಿ ಬಡಾವಣೆಯಲ್ಲಿ ಎರಡು ಕೊಠಡಿ ಮನೆಗಳು ಹಾಗೂ ಸಾತಗಳ್ಳಿ ಬಡಾವಣೆಗಳಲ್ಲಿ ಒಂದು ಕೊಠಡಿಯ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿರುತ್ತದೆ.

ಬೇಡಿಕೆ ಸಮೀಕ್ಷೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾಗುವ ಆಸಕ್ತಿಯನ್ನಾಧರಿಸಿ ಇನ್ನು ಹೆಚ್ಚಿನ ಮನೆಗಳನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ಬೇಡಿಕೆ ಸಮೀಕ್ಷೆಯಲ್ಲಿ ಆನ್‍ಲೈನ್ (Mysuru UDA -ಮೊಬೈಲ್ ಆಪ್) ಮೂಲಕ ಮತ್ತು ಆಫ್‍ಲೈನ್ ಮೂಲಕ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ಕೋರಿದೆ.

(ಡಾ.ನಟೇಶ್ ಡಿ ಬಿ)
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

Skip to content