e-Auction Notification of Corner / Intermediate Sites & Houses in prominent locations.
Developed by Mysore Urban Development Authority
- ಇ-ಹರಾಜನ್ನು ತೆರೆಯುವ ಹಾಗೂ ನೇರ ಬಿಡ್ಡಿಂಗ್ ಆರಂಭಿಸುವ ದಿನಾಂಕ: 26.09.2022 ರ ಭಾರತೀಯ ಕಾಲಮಾನ 18.00 ಗಂಟೆಯ ನಂತರ
- ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿ ವ್ಯಕ್ತಪಡಿಸಲು ಕೊನೆಯ ದಿನಾಂಕ: 12.10.2022 ರ ಭಾರತೀಯ ಕಾಲಮಾನ 18.00 ಗಂಟೆವರೆಗೆ
- ಕ್ರ.ಸಂ.1 ರಿಂದ 50 ರವರೆಗೆ ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ: 15.10.2022 ರ ಭಾರತೀಯ ಕಾಲಮಾನ 18.00 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).
- ಕ್ರ.ಸಂ.51 ರಿಂದ 100 ರವರೆಗೆ ಇ-ಹರಾಜು ಮುಕ್ತಾಯಗೊಳ್ಳಲು ಕೊನೆಯ ದಿನಾಂಕ: 17.10.2022 ರ ಭಾರತೀಯ ಕಾಲಮಾನ 18.00 ಗಂಟೆಗೆ (ಡೆಲ್ಟಾ ಟೈಮ್ 5.00 ನಿಮಿಷ).
View PDF in Kannada | English
View on Google Maps :: Sl No 1 – 50 | Sl No 51 – 98
ಇ-ಹರಾಜಿನ ಷರತ್ತು ಮತ್ತು ನಿಯಮ ನಿಬಂಧನೆಗಳು ಕೆಳಕಂಡಂತಿವೆ.
- ಹರಾಜಿನಲ್ಲಿ ಪಾಲ್ಗೊಳ್ಳುವವರು ಭಾರತೀಯ ಪ್ರಜೆಯಾಗಿರಬೇಕು, ಭಾರತ ದೇಶದಲ್ಲಿ ನೋಂದಣಿಯಾಗಿರುವ ಪಾಲುದಾರ ಸಂಸ್ಥೆ/ಲಿಮಿಟೆಡ್ ಕಂಪೆನಿಗಳು/ಟ್ರಸ್ಟ್‍ಗಳು ಭಾಗವಹಿಸಬಹುದಾಗಿದೆ.
- ಇ-ಹರಾಜಿನಲ್ಲಿ ಭಾಗವಹಿಸಲಿಚ್ಚಿಸುವವರು ಇ-ಹರಾಜಿಗೆ ಸಂಬಂಧಿಸಿದ ಮಾಹಿತಿಯನ್ನು https://www.eproc.karnataka.gov.in ವೆಬ್‍ಸೈಟ್‍ನಲ್ಲಿ ಲಾಗಿನ್ ಆಗಿ ಮುಖಪುಟದ ಸಿಟಿಜನ್ ವಿಭಾಗದಲ್ಲಿ ಲಭ್ಯವಿರುವ Simplified e-auction user guide ನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ.
- ಹರಾಜಿನಲ್ಲಿ ಪಾಲ್ಗೊಳ್ಳುವವರು https://www.eproc.karnataka.gov.in ವೆಬ್‍ಸೈಟ್ ನಿಂದ ನಿಗಧಿತ ಮಾದರಿ ಸಹಿಯ ನಮೂನೆ (ಇದರಲ್ಲಿ ಅರ್ಜಿದಾರರ ಹೆಸರು ಮತ್ತು ತಂದೆಯ ಹೆಸರನ್ನು ಕನ್ನಡ ಹಾಗೂ ಅಂಗ್ಲ ಭಾಷೆಯಲ್ಲಿ ನಮೂದಿಸುವುದು) ಹಾಗೂ ಸಂಪರ್ಕದ ಮಾಹಿತಿಯ ನಮೂನೆಯನ್ನು ಡೌನ್‍ಲೋಡ್ ಮಾಡಿಕೊಂಡು, ವಿವರಗಳನ್ನು ಭರ್ತಿ ಮಾಡಿ, ವೆಬ್‍ಸೈಟ್‍ನಲ್ಲಿ ಅಪಲೋಡ್ ಮಾಡಬೇಕಾಗಿರುತ್ತದೆ.
- ಇ-ಹರಾಜಿನ ಮೂಲಕ ನಿವೇಶನವನ್ನು ಜಂಟಿಯಾಗಿ ಖರೀದಿಸುವವರು ಜಂಟಿಯಾಗಿ ದಾಖಲೆಗಳನ್ನು ಇ-ಹರಾಜಿನ ಪೋರ್ಟಲ್‍ನಲ್ಲಿ ಅಪಲೋಡ್ ಮಾಡಬೇಕು.
- ಹರಾಜಿಗೊಳಪಡಿಸಿರುವ ನಿವೇಶನಗಳು ಎಲ್ಲಿ ಹೇಗೆ ಇವೆಯೋ ಅದೇ ಸ್ಥಿತಿಯಲ್ಲಿ ಯಶಸ್ವಿ ಬಿಡ್ಡುದಾರರಿಗೆ ಹಂಚಿಕೆ ಮಾಡಲಾಗುವುದು, ಹರಾಜಿನಲ್ಲಿ ಹಂಚಿಕೆಯಾದ ನಿವೇಶನಗಳಿಗೆ ಬದಲಿ ನಿವೇಶನ ನೀಡಲು ನಿಯಮಾವಳಿಯಲ್ಲಿ ಅವಕಾಶವಿರುವುದಿಲ್ಲ.
- ಪ್ರತಿ ನಿವೇಶನದ ಹರಾಜಿನಲ್ಲಿ ಕನಿಷ್ಠ ಇಬ್ಬರು ಬಿಡ್ಡುದಾರರು ಭಾಗವಹಿಸಬೇಕಾಗಿರುತ್ತದೆ. ಒಬ್ಬರೇ ಬಿಡ್ಡುದಾರರು ಇದ್ದಲ್ಲಿ ಅಂತಹ ಬಿಡ್ಡನ್ನು ತಿರಸ್ಕರಿಸಲಾಗುವುದು.
- ಇ-ಹರಾಜಿನ ಅಂತಿಮ ದಿನಾಂಕದ ಅಂತಿಮ ಸಮಯ/ಕ್ಷಣದಲ್ಲಿ ಪ್ರಗತಿಯಲ್ಲಿರುವ ಬಿಡ್ಡುಗಳಿಗೆ ಪ್ರತಿ ಬಿಡ್ಡಿಗೆ 5 ನಿಮಿಷ ಡೆಲ್ಟಾ ಟೈಂ ಇದ್ದು, ಉದಾ: ಹರಾಜು ಅಂತ್ಯವಾಗುವ ವೇಳೆ 18.00 ಆಗಿದ್ದು, ನೀವು 17.57 ಕ್ಕೆ ಬಿಡ್ ಮಾಡಿದಾಗ 18.02 ರವರೆಗೆ ಅವಧಿ ವಿಸ್ತರಣೆಯಾಗುತ್ತದೆ. ಇದು ಅಂತಿಮವಾಗುವವರೆಗೆ ವಿಸ್ತರಣೆಯಾಗುತ್ತಾ ಹೋಗುತ್ತದೆ.
- ರೂ.1.00 ಕೋಟಿಗಿಂತ ಕಡಿಮೆ ಮೌಲ್ಯದ ನಿವೇಶನಗಳಿಗೆ ಕನಿಷ್ಠ ಬಿಡ್ ಏರಿಕೆ ಮೊತ್ತ ರೂ.10,000/- ಮತ್ತು ರೂ.1.00 ಕೋಟಿ ಹಾಗೂ ಮೇಲ್ಪಟ್ಟ ಮೌಲ್ಯದ ನಿವೇಶನಗಳಿಗೆ ರೂ.1,00,000/-ಗಳಾಗಿರುತ್ತದೆ.
- ಅತ್ಯಧಿಕ ಮೊತ್ತದ ಬಿಡ್ಡುದಾರರು ಬಿಡ್ ಅಂಗೀಕೃತವಾದ ಬಗ್ಗೆ https://www.eproc.karnataka.gov.in ವೆಬ್‍ಸೈಟ್‍ನಲ್ಲಿ ಲಾಗಿನ್ ಆಗಿ ಪರಿಶೀಲಿಸಿಕೊಂಡು ಬಿಡ್ ಮೌಲ್ಯದ ಶೇ.25 ರಷ್ಟು ಹಣವನ್ನು ಅವರ ಸ್ವಂತ ಬ್ಯಾಂಕ್ ಖಾತೆಯಿಂದಲೇ ಆರ್.ಟಿ.ಜಿ.ಎಸ್/ಎನ್.ಇ.ಎಫ್.ಟಿ ಅಥವಾ ಡಿ.ಡಿ ಮೂಲಕ (ಇ.ಎಂ.ಡಿ. ರೂ.3.00 ಲಕ್ಷ ಅಥವಾ ರೂ.1.00 ಲಕ್ಷ ಹೊರತು ಪಡಿಸಿ) ಬಿಡ್ಡು ಅಂಗೀಕರಿಸಿದ 72 ಗಂಟೆಯೊಳಗಾಗಿ ಖಾತೆದಾರರು ಆಯುಕ್ತರು, ಮೈ.ನ.ಪ್ರಾ, ಮೈಸೂರು ರವರ ಹೆಸರಿನಲ್ಲಿರುವ Commissioner MUDA Mysore, HDFC Bank Limited, Account No.50100366959511 (IFSC Code No. HDFC0003733) OR Commissioner MUDA Mysore, Bank of Baroda, Account No.89260100004660 (IFSC Code No. BARB0VJMUDA, 5ನೇ ಅಕ್ಷರ ಸೊನ್ನೆ ಆಗಿರುತ್ತದೆ), ಖಾತೆಗೆ ವರ್ಗಾವಣೆ/ಪಾವತಿ ಮಾಡಬಹುದಾಗಿರುತ್ತದೆ ಹಾಗೂ ಡಿ.ಡಿ.ಯನ್ನು ಸಹ ಪಡೆದು ಸಲ್ಲಿಸಬಹುದಾಗಿರುತ್ತದೆ. ಶೇಕಡ 25 ರಷ್ಟು ಹಣ ಪಾವತಿಸಿದ ಬಗ್ಗೆ ದಾಖಲಾತಿ ಒದಗಿಸುವ ಸಂದರ್ಭದಲ್ಲಿ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರವನ್ನು ಸಲ್ಲಿಸುವುದು. ಯಶಸ್ವಿ ಬಿಡ್ಡುದಾರರು ಬಿಡ್ ಮೊಬಲಗಿನ ಶೇಕಡ 25 ಭಾಗ ಹಣ ಪಾವತಿಸಲು ವಿಫಲರಾದಲ್ಲಿ ಇ.ಎಂ.ಡಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
- ಹರಾಜಿಗೆ ಪ್ರಕಟಿಸಿದ ನಿವೇಶನಗಳನ್ನು ಯಾವುದೇ ಕಾರಣ ನೀಡದೇ ಹರಾಜು ಅವಧಿಯ ಯಾವುದೇ ಸಮಯದಲ್ಲಿ ಹಿಂಪಡೆಯುವ ಹಕ್ಕನ್ನು ಮೈ.ನ.ಪ್ರಾ. ಕಾಯ್ದಿರಿಸಿಕೊಂಡಿದೆ.
- ಹರಾಜಾದ ನಿವೇಶನಗಳನ್ನು 1991ರ ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ (ಮೂಲೆ ಮತ್ತು ವಾಣಿಜ್ಯ ನಿವೇಶನಗಳ ಹಂಚಿಕೆ) ನಿಯಮ ಕಲಂ 6(2) ರನ್ವಯ ಅಂತಿಮ ಬಿಡ್ಡನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಆಯುಕ್ತರು, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ, ಮೈಸೂರು ರವರು ಹೊಂದಿರುತ್ತಾರೆ.
- ಇ-ಹರಾಜಿನಲ್ಲಿ ವಿಫಲರಾದವರಿಗೆ ಹರಾಜು ಅಂತಿಮಗೊಂಡ ನಂತರ ಇ.ಎಂ.ಡಿ ಮೊತ್ತವನ್ನು ತಿತಿತಿ.eಠಿಡಿoಛಿ.ಞಚಿಡಿಟಿಚಿಣಚಿಞಚಿ.gov.iಟಿ ರವರು ನೇರವಾಗಿ ಬ್ಯಾಂಕ್ ಖಾತೆಗೆ ಮರುಪಾವತಿ ಮಾಡಲು ಕ್ರಮವಹಿಸುತ್ತಾರೆ.
- ಬಿಡ್ಡುದಾರರಿಗೆ ಬಿಡ್ಡಿನಲ್ಲಿ ಅಂತಿಮಗೊಂಡ ನಿವೇಶನಗಳನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಒಟ್ಟು ವಿಸ್ತೀರ್ಣದಲ್ಲಿ ಕಡಿಮೆ ಇದ್ದಲ್ಲಿ ಪಾವತಿಸಲ್ಪಟ್ಟಿರುವ ಹೆಚ್ಚುವರಿ ಮೊತ್ತವನ್ನು ಮರುಪಾವತಿಸಲಾಗುವುದು ಹಾಗೂ ಹೆಚ್ಚುವರಿ ವಿಸ್ತೀರ್ಣವಿದ್ದಲ್ಲಿ, ಸದರಿ ವಿಸ್ತೀರ್ಣಕ್ಕೆ ಹೆಚ್ಚುವರಿ ಹಣ ಪಾವತಿಸಲು ತಿಳುವಳಿಕೆ ನೀಡಲಾಗುವುದು. ಇದಕ್ಕೆ ಬಿಡ್ಡುದಾರರು ಒಪ್ಪದಿದ್ದಲ್ಲಿ ಸದರಿಯವರು ಪಾವತಿಸಿರುವ ಶೇ.25 ರಷ್ಟು ಮೊಬಲಗನ್ನು ಮುಟ್ಟಗೋಲು ಹಾಕಿಕೊಂಡು ಹರಾಜನ್ನು ರದ್ದುಗೊಳಿಸಲಾಗುವುದು.
- “ಬಿಡ್ಡುದಾರರು ಬಿಡ್ ಮೊಬಲಗಿನ ಶೇಕಡ 75 ರಷ್ಟು ಹಣವನ್ನು ಅವರ ಸ್ವಂತ ಬ್ಯಾಂಕ್ ಖಾತೆಯಿಂದಲೇ ಪಾವತಿಸಿದ ನಂತರ ಹಣ ಪಾವತಿಸಿರುವ ರಸೀದಿ ಪ್ರತಿಯೊಂದಿಗೆ ಕ್ರಯಪತ್ರ ಕೋರಿ ಅರ್ಜಿ ಸಲ್ಲಿಸುವುದು.”
- ಬಿಡ್ಡುದಾರರಿಗೆ ಬಿಡ್ಡು ಮೊತ್ತದ ಉಳಿಕೆ ಶೇ.75 ರಷ್ಟು ಮೊತ್ತ ಪಾವತಿಸಲು ಬಡ್ಡಿ ರಹಿತವಾಗಿ ಹರಾಜು ಸ್ಥಿರೀಕರಣ ಪತ್ರ ಸ್ವೀಕರಿಸಿದ ದಿನಾಂಕದಿಂದ 45 ದಿವಸಗಳು ಅವಕಾಶವಿದ್ದು, ನಂತರದ 90 ದಿನಗಳ ಅವಧಿಗೆ ಶೇ.18 ರ ಬಡ್ಡಿ ದರದಲ್ಲಿ ಹಾಗೂ ತದನಂತರದ 30 ದಿನಗಳ ಅವಧಿಗೆ ಶೇ.21 ರ ಬಡ್ಡಿ ದರದಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಪಾವತಿಸಲು ಅವಕಾಶವಿರುತ್ತದೆ.
- ಹರಾಜು ಪ್ರಕಟಣೆಯಲ್ಲಿ ನೀಡಿರುವ ರೇಖಾಂಶ ಮತ್ತು ಅಕ್ಷ್ಷಾಂಕಗಳು ಕೆಲವೊಮ್ಮೆ ಕೈತಪ್ಪಿನಿಂದ ನಿಖರವಾಗಿ ನಿವೇಶನವನ್ನು ಗುರುತಿಸದೇ ಇದ್ದ ಪಕ್ಷದಲ್ಲಿ ಪ್ರಕಟಣೆಯಲ್ಲಿ ನೀಡಿರುವ ಸಂಬಂಧಪಟ್ಟ ಅಭಿಯಂತರರನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಬಹುದಾಗಿದೆ. ರೇಖಾಂಶ ಮತ್ತು ಅಕ್ಷ್ಷಾಂಕಗಳು ವ್ಯತ್ಯಸವಾಗಿರುವುದಾಗಿ ತಿಳಿಸಿ ಪಾವತಿಸಿರುವ ಹಣವನ್ನು ಮರುಪಾವತಿ ಕೋರಿದ್ದಲ್ಲಿ ಮರುಪಾವತಿಸಲು ಅವಕಾಶವಿರುವುದಿಲ್ಲ.
- ನಿವೇಶನಗಳ ಸ್ಥಳ ಮಾಹಿತಿ, ಅಭಿಮುಖ, ರಸ್ತೆ ಅಳತೆ ಇನ್ನಿತರೆ ವಿವರಗಳನ್ನು https://www.eproc.karnataka.gov.in ಅಥವಾ www.mudamysore.gov.in ವೆಬ್‍ಸೈಟ್‍ನಿಂದ ತಿಳಿದುಕೊಳ್ಳಬಹುದಾಗಿರುತ್ತದೆ ಅಥವಾ ದೂರವಾಣಿ ಸಂಖ್ಯೆ- 0821-2421629 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿರುತ್ತದೆ.
- “ನಿವೇಶನಗಳ ಸ್ಥಳದ (ಐoಛಿಚಿಣioಟಿ) ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಸಂಪರ್ಕಿಸಬೇಕಾದ ಅಭಿಯಂತರರ ವಿವರ –
ಅ) ವಲಯ ಕಛೇರಿ-1 – 1. ಶ್ರೀರಾಂಪುರ 2ನೇ ಮತ್ತು 3ನೇ ಹಂತ – ಶ್ರೀ.ಪ್ರಸಾದ್, ಸ.ಅ., ಮೊಬೈಲ್ ನಂ.9880434585,
2. ಹಂಡುವಿನಹಳ್ಳಿ (ನಂಜನಗೂಡು), ನಂಜನಗೂಡು ಬಸವನಗುಡಿ ಬ್ಲಾಕ್, ಬೆಸ್ತರ್ ಬ್ಲಾಕ್ – ಶ್ರೀ. ಲೋಕೇಶ್, ಸ.ಅ., ಮೊಬೈಲ್ ನಂ.9972431398.
ಆ) ವಲಯ ಕಛೇರಿ-3 – ವಿಜಯನಗರ 4ನೇ ಹಂತ – ಶ್ರೀ. ನಂದೀಶ್, ಸ.ಅ., ಮೊಬೈಲ್ ನಂ..9845153643.
ಈ) ವಲಯ ಕಛೇರಿ-4- ಹೆಬ್ಬಾಳು 1ನೇ ಮತ್ತು 2ನೇ ಹಂತ ಬಡಾವಣೆ- ಶ್ರೀ.ಪುಟ್ಟನಾಗರಾಜು, ಸ.ಅ., ಮೊಬೈಲ್ ನಂ.9886975792.
ಉ) ವಲಯ ಕಛೇರಿ-5ಬಿ – ದೇವನೂರು 1, 2 & 3ನೇ ಹಂತ – ಶ್ರೀ. ರಾಜಶೇಖರ್, ಕಿ.ಅ., ಮೊಬೈಲ್ ನಂ.9880929640,
ಊ) ವಲಯ ಕಛೇರಿ-6 – ಲಲಿತಾದ್ರಿನಗರ (ದಕ್ಷಿಣ) – ಶ್ರೀ. ಪರಮೇಶ್, ಕಿ.ಅ., ಮೊಬೈಲ್ ನಂ. 9739841333.
ಋ) ವಲಯ ಕಛೇರಿ-8 – ಆಲನಹಳ್ಳಿ, ಸಾತಗಳ್ಳಿ 1ನೇ & 2ನೇ ಹಂತ, ಹಂಚ್ಯಾ-ಸಾತಗಳ್ಳಿ ‘ಬಿ’ ವಲಯ – ಶ್ರೀ. ಸಂಪತ್‍ಕುಮಾರ್, ಸ.ಅ., ಮೊಬೈಲ್ ನಂ.9343530052.”