ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
ಸಂಖ್ಯೆ: ಮೈನಪ್ರಾ/ಆಆಸಶಾ/2021-22 ದಿನಾಂಕ: 28.06.2021
ಮೈಸೂರು ತಾಲ್ಲೂಕು ಕಸಬಾ ಹೋಬಳಿ ಹಿನಕಲ್ ಗ್ರಾಮದ ಸರ್ವೆ ನಂ-09 ರಲ್ಲಿ 0.33ಗುಂಟೆ ಜಮೀನನ್ನು ಪ್ರಾಧಿಕಾರವು ಭೂಸ್ವಾಧೀನ ಪಡಿಸಿಕೊಂಡು ಭೂ ಮಾಲೀಕರಿಗೆ ಪರಿಹಾರ ಮೊಬಲಗನ್ನು ನೀಡಿದುದ್ದು ಸರಿಯಷ್ಟೆ, ಸದರಿ ಸ್ವತ್ತಿನಲ್ಲಿ ಭೂ ಮಾಲೀಕರು ಅನಧಿಕೃತ ಶೇಡ್‍ಗಳನ್ನು ನಿರ್ಮಿಸಿದ್ದನ್ನು ದಿನಾಂಕ: 28.06.2021 ರ ಮುಂಜಾನೆ 6.00ಗಂಟೆಗೆ ಸೂಕ್ತ ಪೊಲೀಸ್ ರಕ್ಷಣೆಯೊಂದಿಗೆ ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಗಿರುತ್ತದೆ. ರೂ.7.90 ಕೋಟಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಆಯುಕ್ತರಾದ ಡಾ.ಡಿ.ಬಿ ನಟೇಶ್, ಕಾರ್ಯಪಾಲಕ ಅಭಿಯಂತರರುಗಳು ಶ್ರೀ ಪಾಂಡುರಂಗ ಹಾಗೂ ಶ್ರೀ ಸತ್ಯನಾರಾಯಣ ಜೋಷಿ ವಿಶೇಷ ಭೂಸ್ವಾಧೀನ ಅಧಿಕಾರಿ ಶ್ರೀ.ಹರ್ಷವರ್ಧನ್ ವಲಯಾಧಿಕಾರಿಗಳಾದ ಶ್ರೀ ಕೆ.ಆರ್ ಮಹೇಶ್, ಶ್ರೀ.ಎಸ್.ಕೆ.ಭಾಸ್ಕರ್, ಶ್ರೀ.ರವೀಂದ್ರಕುಮಾರ್, ಶ್ರೀ ರವಿಶಂಕರ್, ಶ್ರೀ ಮೋಹನ್, ಶ್ರೀ ನಾಗೇಶ್ ಮತ್ತು ಶ್ರೀ.ಹೆಚ್.ಪಿ ಶಿವಣ್ಣರವರುಗಳೊಂದಿಗೆ ಎಲ್ಲಾ ಸಹಾಯಕ/ಕಿರಿಯ ಅಭಿಯಂತರರು ಹಾಗೂ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಸ್ಥಳದಲ್ಲಿ ಹಾಜರಿದ್ದರು.
ಆಯುಕ್ತರು
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ
ಮೈಸೂರು