ಸಂಖ್ಯೆ:ಮೈನಪ್ರಾ/ವ.ಆ-5ಬಿ/2021-22 ದಿನಾಂಕ:26.04.2021

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಹಂಚ್ಯಾ ಗ್ರಾಮ ಸ.ನಂ.275 ರಲ್ಲಿ ಒಟ್ಟು 8 ಎಕರೆ 27 ಗುಂಟೆ ಭೂಪ್ರದೇಶವನ್ನು ಉಪ-ವಿಭಾಗಾಧಿಕಾರಿಗಳು ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ಇತ್ಯಾದಿಗಾಗಿ ಭೂಸ್ವಾಧೀನಪಡಿಸಿಕೊಂಡು ಭೂಮಾಲೀಕರಿಗೆ ಪರಿಹಾರ ಸಹ ಪಾವತಿಸಲಾಗಿರುತ್ತದೆ.

ಈ ಪೈಕಿ ಸುಮಾರು 6 ಕೋಟಿಗೂ ಹೆಚ್ಚು ಬೆಲೆ ಬಾಳುವ ಒಟ್ಟು 11/2 ಎಕರೆ ಪ್ರದೇಶವನ್ನು ಅನಧಿಕೃತವಾಗಿ ಒತ್ತುವಾರಿ ಮಾಡಿರುವುದನ್ನು ತಡೆಗಟ್ಟೆ ಗುರುತಿಸಿ, ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಗಿರುತ್ತದೆ.

ಪ್ರಾಧಿಕಾರದ ಅಧೀಕ್ಷಕ ಅಭಿಯಂತರರಾದ ಶ್ರೀ ಶಂಕರ್ ಹಾಗೂ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ಸತೀಶ್ ಉಪಸ್ಥಿತಿಯಲ್ಲಿ ಸಂಬಂಧಪಟ್ಟ ವಲಯ ಕಚೇರಿಯ ಅಭಿಯಂತರವರುಗಳು ಸ್ವತ್ತುಗಳನ್ನು ವಶಕ್ಕೆ ಪಡೆದು ಪ್ರಾಧಿಕಾರದ ಆಸ್ತಿ ಎಂದು ನಾಮಫಲಕ ಅಳವಡಿಸಲಾಗಿದೆ.

ಅದೇ ರೀತಿ ಲಲಿತಾದ್ರಿಪುರ ಗ್ರಾಮದ ಸ.ನಂ.28 ನ್ನು ಪ್ರಾಧಿಕಾರವು ಭೂಸ್ವಾಧೀನಪಡಿಸಿಕೊಂಡು ಭೂಪರಿಹಾರ ವಿತರಿಸಲಾಗಿದ್ದರೂ ದಾಖಲೆಗಳನ್ನು ಸೃಷ್ಠಿಸಿಕೊಂಡು ಒತ್ತುವರಿ ಮಾಡಿ ಶೆಡ್ ನಿರ್ಮಿಸಿರುವುದನ್ನು ತೆರವುಗೊಳಿಸಲಾಗಿದ್ದು, ಒಟ್ಟು 4 ಕೋಟೆಗೂ ಹೆಚ್ಚು ಮೌಲ್ಯದ 2.00 ಎಕರೆ ಭೂಮಿಯನ್ನು ಪ್ರಾಧಿಕಾರದ ವಶಕ್ಕೆ ಪಡೆಯಲಾಗಿರುತ್ತದೆ.

ಒಟ್ಟಾರೆ 09 ಕೋಟಿ ಬೆಲೆಬಾಳುವ ಆಸ್ತಿಯನ್ನು ಪ್ರಾಧಿಕಾರದ ವಶಕ್ಕೆ ಪಡೆಯಲಾಗಿದೆಯೆಂದು ತಿಳಿಯಪಡಿಸಲಿಚ್ಛಿಸುತ್ತೇವೆ.

ಡಾ|| ನಟೇಶ್ ಡಿ.ಬಿ
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

Skip to content