ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಈ ಕೆಳಕಂಡ ಸ್ವತ್ತುಗಳಲ್ಲಿ ಅನಧಿಕೃತವಾಗಿ ಶೆಡ್ಡುಗಳನ್ನು ನಿರ್ಮಿಸಿಕೊಂಡಿದ್ದು, ಆಯುಕ್ತರಾದ ಡಾ.ಡಿ.ಬಿ.ನಟೇಶ್‍ರವರ ನಿರ್ದೇಶನದಂತೆ ಸದರಿ ಸ್ವತ್ತುಗಳಲ್ಲಿನ ಶೆಡ್ಡುಗಳನ್ನು ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಗಿರುತ್ತದೆ

ಸಂಖ್ಯೆ: ಮೈನಪ್ರಾ/ಆಆಸಶಾ/2021-22 ದಿನಾಂಕ: 13.07.2021

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಈ ಕೆಳಕಂಡ ಸ್ವತ್ತುಗಳಲ್ಲಿ ಅನಧಿಕೃತವಾಗಿ ಶೆಡ್ಡುಗಳನ್ನು ನಿರ್ಮಿಸಿಕೊಂಡಿದ್ದು, ಆಯುಕ್ತರಾದ ಡಾ.ಡಿ.ಬಿ.ನಟೇಶ್‍ರವರ ನಿರ್ದೇಶನದಂತೆ ಸದರಿ ಸ್ವತ್ತುಗಳಲ್ಲಿನ ಶೆಡ್ಡುಗಳನ್ನು ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಗಿರುತ್ತದೆ.

1. ಮೈಸೂರು ನಗರದ ವಿದ್ಯಾರಣ್ಯಪುರಂ ಬಡಾವಣೆಯಲ್ಲಿನ 30×40 ಅಡಿ ಅಳತೆಯ ಸುಮಾರು 12 ನಿವೇಶನಗಳಲ್ಲಿ ಹಲವಾರು ವರ್ಷಗಳಿಂದ ಅನಧಿಕೃತವಾಗಿ 16 ಶೆಡ್ಡುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದವರನ್ನು ದಿ:12.07.2021ರಂದು ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಗಿರುತ್ತದೆ. ಮೇಲ್ಕಂಡ ಸ್ವತ್ತುಗಳ ಅಂದಾಜು ಮೌಲ್ಯ ರೂ.8.00 ಕೋಟಿಗಳಾಗಿರುತ್ತದೆ.

2. ಹಂಚ್ಯಾ ಗ್ರಾಮ ಸರ್ವೆ ನಂ-277/1ರ 3-31 ಎಕರೆ ಪ್ರದೇಶವನ್ನು ಪ್ರಾಧಿಕಾರವು ಭೂಸ್ವಾಧೀನಡಿಸಿಕೊಂಡು, ಹಂಚ್ಯಾ ಸಾತಗಳ್ಳಿ ‘ಎ’ ವಲಯ ಬಡಾವಣೆಯನ್ನು ರಚಿಸಲಾಗಿರುತ್ತದೆ. ಸದರಿ ಬಡಾವಣೆಯಲ್ಲಿ ಉದ್ಯಾನವನಕ್ಕಾಗಿ ಕಾಯ್ದಿರಿಸಿದ ಜಾಗದಲ್ಲಿ 100×180 ಅಡಿ ಜಾಗಕ್ಕೆ ನಕಲಿ ದಾಖಲೆ ಸೃಷ್ಠಿಸಿ ಶೆಡ್ಡು ನಿರ್ಮಿಸಿಕೊಂಡಿರುತ್ತಾರೆ. ಸದರಿ ಅನಧಿಕೃತ ಶೆಡ್ಡುಗಳನ್ನು ತೆರವುಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಗಿರುತ್ತದೆ. ಸದರಿ ಸ್ವತ್ತಿನ ಅಂದಾಜು ಮೌಲ್ಯ ರೂ.2.00 ಕೋಟಿಗಳಾಗಿರುತ್ತದೆ.

ಈ ಸಂದರ್ಭದಲ್ಲಿ ವಲಯ ಅಧಿಕಾರಿಗಳಾದ ಶ್ರೀ.ಎಸ್.ಕೆ.ಭಾಸ್ಕರ್, ಶ್ರೀ.ಜಿ.ಮೋಹನ್, ಸಹಾಯಕ ಅಬಿಯಂತರುಗಳಾದ ಶ್ರೀ.ಹರೀಶ್ ಮತ್ತು ಶ್ರೀ.ರಾಜಶೇಖರ್ ಸಿಬ್ಬಂದಿ ವರ್ಗದವರು ಸ್ಥಳದಲ್ಲಿ ಹಾಜರಿದ್ದರು.

ಆಯುಕ್ತರು
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ
ಮೈಸೂರು

 

Skip to content