ಸಂಖ್ಯೆ: ಮೈನಪ್ರಾ/ಆಆಸಶಾ/2021-22 24.08.2021
ಮೈಸೂರು ತಾಲ್ಲೂಕು ಕಸಬಾ ಹೋಬಳಿ ಬೋಗಾಧಿ ಗ್ರಾಮದ ಸರ್ವೆ ನಂ-197/1ರಲ್ಲಿ ರಚಿಸಿರುವ ಬೋಗಾಧಿ ಜನತಾನಗರ ಬಡಾವಣೆಯಲ್ಲಿ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ರವರಿಗೆ ಮಂಜೂರಾಗಿದ್ದ 2631.46 ಚ.ಮೀ ಅಳತೆಯ ನಾಗರೀಕ ಸೌಕರ್ಯದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ವಾಣಿಜ್ಯ ಮಳಿಗೆಯನ್ನು ಇಂದು ಆಯುಕ್ತರಾದ ಡಾ.ಡಿ.ಬಿ.ನಟೇಶ್ ರವರ ನಿರ್ದೇಶನದಂತೆ ತೆರವುಗೊಳಿಸಿ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ರವರಿಗೆ ಹಸ್ತಾಂತರಿಸಲಾಗಿರುತ್ತದೆ.
ಈ ಸಂದರ್ಭದಲ್ಲಿ ವಲಯಾಧಿಕಾರಿ ಶ್ರೀ ಸಿ ಕಿರಣ್, ಅಭಿಯಂತರಾದ ಶ್ರೀ ಎಸ್.ಎಂ.ಲೋಹಿತ್ ಹಾಗೂ ಮೈಸೂರು ಮಹಾನಗರಪಾಲಿಕೆ ಅಭಿಯಂತರರುಗಳು ಹಾಗೂ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಸ್ಥಳದಲ್ಲಿ ಹಾಜರಿದ್ದರು.
ಆಯುಕ್ತರು
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ
ಮೈಸೂರು