ಸಂಖ್ಯೆ ಮೈನಪ್ರಾ/ಆಆಸಶಾ/2020-21 5ನೇ ಜೂನ್, 2020
ವಿಶ್ವ ಪರಿಸರ ದಿನದ ಪ್ರಯುಕ್ತ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಪ್ರಾಧಿಕಾರದ ವ್ಯಾಪ್ತಿಯ ವಿವಿಧ ಉದ್ಯಾನವನಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸನ್ಮಾನ್ಯ ಸಹಕಾರ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ.ಎಸ್.ಟಿ.ಸೋಮಶೇಖರ್ರವರು ಹಂಚ್ಯಾ ಸಾತಗಳ್ಳಿ ಬಿ ವಲಯ ಬಡಾವಣೆಯ ಉದ್ಯಾನವನದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಸ್ಥಳದಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ.ತನ್ವೀರ್ಸೇಠ್ರವರು, ಮಹಾನಗರಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು, ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ.ಅಭಿರಾಮ್ ಜಿ ಶಂಕರ್, ಮಹಾನಗರಪಾಲಿಕೆ ಆಯುಕ್ತರಾದ ಶ್ರೀ.ಗುರುದತ್ ಹೆಗಡೆ, ಪ್ರಾಧಿಕಾರದ ಆಯುಕ್ತರಾದ ಡಾ.ನಟೇಶ್ ಡಿ.ಬಿ ಇತರೆ, ಅಧೀಕ್ಷಕ ಅಭಿಯಂತರು ಶ್ರೀ.ಶಂಕರ್, ನಗರ ಯೋಜಕ ಸದಸ್ಯರು ಶ್ರೀ.ಬಿ.ಎನ್.ಗಿರೀಶ್ರವರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.
ಮೈಸೂರು ನಗರದ ವಿವಿಧ ಉದ್ಯಾನವನಗಳಲ್ಲಿ ಹಲಸು, ನೇರಳೆ, ಬೇವು, ಮಹಾಘನಿ, ಪುಷ್ಪ, ಹತ್ತಿ, ಅರಳಿ ಇತರೆ ಹೂವು ಮತ್ತು ಹಣ್ಣು ಬಿಡುವ ಮರಗಳ ಗಿಡಗಳನ್ನು ಒಟ್ಟಾರೆ 2000ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.
(ಡಾ.ನಟೇಶ್ ಡಿ ಬಿ)
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು