ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಇ-ಹರಾಜು ಪ್ರಕಟಣೆ ಸಂಖ್ಯೆ-04/2020-21 ದಿನಾಂಕ:29.10.2020

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
ಸಂಖ್ಯೆ:ಮೈ.ನ.ಪ್ರಾ/ಹರಾಜು ಶಾಖೆ/2021-22 ದಿನಾಂಕ: 08.07.2021

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಇ-ಹರಾಜು ಪ್ರಕಟಣೆ ಸಂಖ್ಯೆ-04/2020-21 ದಿನಾಂಕ:29.10.2020 ಹಾಗೂ ಪ್ರಕಟಣೆ ಸಂಖ್ಯೆ:05/2020-21 ದಿನಾಂಕ: 02.03.2021 ರಲ್ಲಿ ನಿವೇಶನಗಳನ್ನು ಇ-ಹರಾಜುಗಳ ಮೂಲಕ ವಿಲೇ ಮಾಡಿದ್ದು, ಬಿಡ್ಡುದಾರರಿಗೆ ಹರಾಜು ಸ್ಥಿರೀಕರಣ ಪತ್ರವನ್ನು ಕಳುಹಿಸಲಾಗಿರುತ್ತದೆ. ಬಿಡ್ಡುದಾರರಿಗೆ ಶೇಕಡ 75 ಭಾಗ ಹಣವನ್ನು ಬಡ್ಡಿ ರಹಿತವಾಗಿ ಪಾವತಿಸಲು 45 ದಿನಗಳ ಕಾಲಾವಕಾಶವಿರುತ್ತದೆ. ನಂತರ 90 ದಿನಗಳು ಮತ್ತು 30 ದಿನಗಳು ಬಡ್ಡಿಯೊಂದಿಗೆ ಪಾವತಿಸಲು ಕಾಲಾವಕಾಶವಿರುತ್ತದೆ.

ಇ-ಹರಾಜಿನಲ್ಲಿ ಖರೀದಿಸಲಾದ ನಿವೇಶನಗಳ ಬಾಕಿ ಮೌಲ್ಯ ಪಾವತಿಸಲು ಕೋರೊನ ವೈರಸ್ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಸರ್ಕಾರವು ದಿನಾಂಕ:28.04.2021 ರಿಂದ 14.06.2021 ರವರೆಗೆ 48 ದಿನಗಳ ಲಾಕ್ ಡೌನ್ ವಿಧಿಸಿದ್ದು, ಬಿಡ್ಡುದಾರರು ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯಗಳನ್ನು ಪಡೆಯಲು ಆಗದೇ ವಿಶೇಷ ಪರಿಸ್ಥಿತಿ ಎದುರಾಗಿರುವುದರಿಂದ ನಿವೇಶನದ ಶೇಕಡ 75 ಭಾಗ ಹಣ ಪಾವತಿಸಲು ಲಾಕ್‍ಡೌನ್ ಅವಧಿ 48 ದಿನಗಳ (ಬಡ್ಡಿ ರಹಿತವಾಗಿ) ಕಾಲಾವಕಾಶವನ್ನು ವಿಸ್ತರಿಸಲಾಗಿರುತ್ತದೆ.

ಈಗ ಮೈಸೂರಿನಲ್ಲಿ ದಿನಾಂಕ:14.06.2021 ರಿಂದ 05.07.2021 ರವರೆಗೆ ಹೆಚ್ಚುವರಿ ಲಾಕ್‍ಡೌನ್ ವಿಸ್ತರಿಸಿರುವುದರಿಂದ ಸರ್ವಾಜನಿಕರ ಮನವಿಯ ಮೇರೆಗೆ ಈ ಲಾಕ್‍ಡೌನ್ ಅವಧಿಯ ಬಡ್ಡಿ ರಹಿತವಾಗಿ ಹಣ ಪಾವತಿಸಲು ಕಾಲಾವಕಾಶ 21 ದಿನಗಳ (ಬಡ್ಡಿ ರಹಿತವಾಗಿ) ಹೆಚ್ಚುವರಿಯಾಗಿ ಕಾಲಾವಕಾಶವನ್ನು ವಿಸ್ತರಿಸಲಾಗಿರುತ್ತದೆ.

ಆದ್ದರಿಂದ ಕೋವಿಡ್-19 ಲಾಕ್‍ಡೌನ್ ಸಂಬಂಧ ಹರಾಜಿನಲ್ಲಿ ಭಾಗವಹಿಸಿದ ಬಿಡ್ಡುದಾರರಿಗೆ ಶೇಕಡ 75 ಭಾಗ ಹಣ ಪಾವತಿಸಲು ಸರ್ಕಾರ ವಿಧಿಸಿರುವ ದಿನಾಂಕ:28.04.2021 ರಿಂದ 14.06.2021 ರವರೆಗೆ 48 ದಿನಗಳ ಜೊತೆಗೆ ಹೆಚ್ಚುವರಿಯಾಗಿ ದಿನಾಂಕ:14.06.2021 ರಿಂದ 05.07.2021 ರವರೆಗೆ 21 ದಿನಗಳ ಲಾಕ್‍ಡೌನ್ ವಿಸ್ತರಿಸಿರುವುದರಿಂದ ಕೋವಿಡ್-19 ಅಸಾಧಾರಣ ಜಾಗತಿಕ ಪ್ರಕರಣವಾಗಿರುವುದರಿಂದ 21 ದಿನಗಳ ಹೆಚ್ಚುವರಿಯಾಗಿ ಕಾಲಾವಕಾಶವನ್ನು ವಿಸ್ತರಿಸಲಾಗಿರುತ್ತದೆ.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

Skip to content