Notice Board :: Last Updated on 07/03/2019

Notice Board 2018 - 19                  Earlier Notice Board Archives
 
Projects
Your Property / Site Status
City Planning
Allotment of Sites
Catalog & Indexing
Notice Board
Meeting Proceedings
Notifications
Tender
Auctions
ACTS
Frequently Asked Questions
   
   
 

 

 
ಸಂಖ್ಯೆ :ಮೈ.ನ.ಪ್ರಾ/ಆಆಸಶಾ/2018-19 07.03.2018
ಶ್ರೀ ಹೆಚ್ ಎನ್ ವಿಜಯ್ ಬಿನ್ ನರಸಿಂಹೇಗೌಡ, ಹರದಹಳ್ಳಿ ಅಂಚೆ, ಸಾಲಿಗ್ರಾಮ ಹೋಬಳಿ, ಕೆ.ಆರ್.ಗರ ತಾಲ್ಲೂಕು, ಮೈಸೂರು ಜಿಲ್ಲೆ ಇವರನ್ನು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ದಿನಾಂಕ 07.03.2019ರಂದು ನೇಮಕ ಮಾಡಿ ಆದೇಶಿಸಿದ್ದು, ಅದರಂತೆ ಇಂದು ದಿನಾಂಕ 07.03.2019ರಂದು ಸಂಜೆ 7.00 ಗಂಟೆಗೆ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರು, ನಗರ ಯೋಜಕ ಸದಸ್ಯರು, ಅಧೀಕ್ಷಕ ಅಭಿಂತರರು, ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಎಲ್ಲಾ ಅಧಿಕಾರಿಗಳು ಹಾಜರಿದ್ದರು.
ಪಿ.ಎಸ್.ಕಾಂತರಾಜ್
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು
ಸಂಖ್ಯೆ :ಮೈ.ನ.ಪ್ರಾ/ಅಆಸಶಾ/ಪ.ಪ್ರ/2018-19 26.02.2019
ವಿಷಯ: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ 2019-20ನೇ ಸಾಲಿನ ಆಯವ್ಯಯ ವಿಶೇಷ ಸಭೆ ಬಗ್ಗೆ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ 2019-20ನೇ ಸಾಲಿನ ಅಂದಾಜು ಆದಾಯ-ವೆಚ್ಚ (ಆಯವ್ಯಯ)ವನ್ನು ದಿನಾಂಕ 02.03.2019ರಂದು ಬೆಳಗ್ಗೆ 11.00 ಗಂಟೆಗೆ ಮಂಡಿಸಲಾಗುವುದು. ಆಯವ್ಯಯ ವಿಶೇಷ ಸಭೆಗೆ ಎಲ್ಲಾ ಮಾಧ್ಯಮ ಮಿತ್ರರು ಹಾಗೂ ಪತ್ರಿಕಾ ಪ್ರತಿನಿಧಿಗಳು ಹಾಜರಿರಲು ಸೂಕ್ತ ನಿರ್ಧೇಶನ ನೀಡಲು ಕೋರಿದೆ.
ಸ್ಥಳ: : ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭಾಂಗಣ
ದಿನಾಂಕ : 02ನೇ ಮಾರ್ಚ್, 2019
ಸಮಯ : ಬೆಳಗ್ಗೆ 11.00 ಗಂಟೆ
ಆಯುಕ್ತರು
ಆರ್.ಟಿ.ನಗರ ಬಡಾವಣೆಯ ‘ಹೆಚ್’ ಪ್ರವರ್ಗದಲ್ಲಿನ ನಿವೇಶನಗಳ ಪಲಾನುಭವಿಗಳ ಆಯ್ಕೆ ಪಟ್ಟಿ Click to View List 
ಲಲಿತಾದ್ರಿನಗರ (ಉತ್ತರ) ಬಡಾವಣೆ, ಚಾಮಲಾಪುರ ಬಡಾವಣೆ ಮತ್ತು ಲಲಿತಾದ್ರಿ ನಗರ (ದಕ್ಷಿಣ) ಬಡಾವಣೆಯ ‘ಹೆಚ್’ ಪ್ರವರ್ಗದಲ್ಲಿನ ನಿವೇಶನಗಳ ಪಲಾನುಭವಿಗಳ ಆಯ್ಕೆ ಪಟ್ಟಿ  - Click to View List
ಬಲ್ಲಹಳ್ಳಿ ಗ್ರಾಮದಲ್ಲಿ 50:50 ಅನುಪಾತದಲ್ಲಿ ಬಡಾವಣೆ ಅಭಿವೃದ್ಧಿ ಸಂಬಂಧ ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಬಲ್ಲಹಳ್ಳಿ ಗ್ರಾಮದ ರೈತರೊಂದಿಗೆ ಸಮಾಲೋಚನಾ ಸಭೆ ನಡೆಯಲಿದ್ದು ಎಲ್ಲಾ ಪತ್ರಿಕಾ ಪ್ರತಿನಿಧಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಹಾಜರಿರಲು ಕೋರಿದೆ. ಸ್ಥಳ ಬಲ್ಲಹಳ್ಳಿ ಗ್ರಾಮ. ಸಮಯ ಮಧ್ಯಾಹ್ನ 1.30. ದಿನಾಂಕ 04.02.2018.
ಪತ್ರ ಸಂಖ್ಯೆ:ಎಲ್‍ಎಕ್ಯೂ (1)ಬ-1/16-17 01.02.2019

ವಿಷಯ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮೈಸೂರು ತಾಲ್ಲೂಕು ಜಯಪುರ ಹೋಬಳಿ, ಬಲ್ಲಹಳ್ಳಿ ಗ್ರಾಮದ ವಿವಿಧ ಸರ್ವೆನಂಬರ್ ಜಮೀನುಗಳನ್ನು ಶೇ.50:50 ರ ಅನುಪಾತದಲ್ಲಿ ಭೂಸ್ವಾಧೀನಪಡಿಸಿಕೊಳ್ಳುವ ಬಗ್ಗೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮೈಸೂರು ತಾಲ್ಲೂಕು ಜಯಪುರ ಹೋಬಳಿ, ಬಲ್ಲಹಳ್ಳಿ ಗ್ರಾಮದ ವಿವಿಧ ಸರ್ವೆನಂಬರ್ ಜಮೀ¬ನುಗಳನ್ನು ಬಲ್ಲಹಳ್ಳಿ ವಸತಿ ಬಡಾವಣೆ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲು ದಿನಾಂಕ 28.06.2016 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಸದರಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಪರಿಹಾರ ನೀಡುವ ಬದಲು ಪರಿಹಾರಾತ್ಮಕವಾಗಿ ನಿಯಮಾವಳಿಯನ್ವಯ ಶೇ.50:50 ರ ಅನುಪಾತದಲ್ಲಿ ನಿವೇಶನ ನೀಡುವ ವಿಚಾರದಲ್ಲಿ ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ.ಜಿ.ಟಿ.ದೇವೇಗೌಡರವರ ಅಧ್ಯಕ್ಷತೆಯಲ್ಲಿ ಬಲ್ಲಹಳ್ಳಿ ಗ್ರಾಮದಲ್ಲಿ ರೈತರೊಡನೆ ಸಮಾಲೋಚನೆ ನಡೆಸಲು ದಿನಾಂಕ 04.02.2019 ರಂದು ಮಧ್ಯಾಹ್ನ 1-30 ಗಂಟೆಗೆ ಸಂಬಂಧಪಟ್ಟ ಎಲ್ಲಾ ರೈತರನ್ನು ಆಹ್ವಾನಿಸಲಾಗಿದೆ. ಆದ್ದರಿಂದ ಪ್ರಾಥಮಿಕ ಅಧಿಸೂಚನೆಗೆ ಒಳಪಟ್ಟ ಎಲ್ಲಾ ಸರ್ವೆನಂಬರ್ ಜಮೀನುಗಳ ಖಾತೆದಾರರುಗಳು ಈ ಸಭೆಗೆ ತಪ್ಪದೆ ಹಾಜರಾಗುವಂತೆ ಕೋರಿದೆ.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ,
ಮೈಸೂರು

ಸಂಖ್ಯೆ :ಮೈ.ನ.ಪ್ರಾ/ಆಆಸಶಾ/ಪ.ಪ್ರ 2018-19 26.01.2019

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆವರಣದಲ್ಲಿ 70ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರಾಧಿಕಾರದ ಮಾನ್ಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಆದ ಶ್ರೀ.ಅಭಿರಾಮ್ ಜಿ ಶಂಕರ್‍ರವರು ದ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಶ್ರೀ.ಪಿ.ಎಸ್.ಕಾಂತರಾಜ್, ಅಧೀಕ್ಷಕ ಅಭಿಯಂತರು ಶ್ರೀ.ಸುರೇಶ್‍ಬಾಬು, ನಗರ ಯೋಜಕ ಸದಸ್ಯರು ಶ್ರೀ.ಬಿ.ಎನ್.ಗಿರೀಶ್, ಕಾರ್ಯದರ್ಶಿ ಶ್ರೀಮತಿ.ಎಂ.ಕೆ.ಸವಿತಾ, ಕಾರ್ಯಪಾಲಕ ಅಭಿಯಂತರು ಶ್ರೀ.ಬಿ.ಎನ್.ಪ್ರಭಾಕರ್, ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀ ಮುತ್ತಾ ಹಾಗೂ ಎಲ್ಲಾ ವಲಯ ಅಧಿಕಾರಿಗಳು, ಎಲ್ಲಾ ತಹಶೀಲ್ದಾರ್‍ಗಳು ಸಹಾಯಕ ನಿರ್ದೇಶಕರು ನಗರ ಯೋಜನೆ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

ಮುಡಾ ಅದಾಲತ್
ಕರ್ನಾಟಕ ಸರ್ಕಾರದ ಸನ್ಮಾನ್ಯ ನಗರಾಭಿವೃದ್ಧಿ ಸಚಿವರು ದಿನಾಂಕ 29.11.2018 ರಂದು ಮೈಸೂರು ನಗರಕ್ಕೆ ಭೇಟಿ ನೀಡಿದ್ದು, ಪ್ರಾಧಿಕಾರದ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಂದರ್ಭದಲ್ಲಿ, ಪ್ರಾಧಿಕಾರದ ಕೆಲಸ ಕಾರ್ಯಗಳಲ್ಲಿ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವ ದೃಷ್ಠಿಯಿಂದ ಇತ್ತೀಚೆಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯಶಸ್ವಿಯಾಗಿ ನಡೆದ “ಅಹವಾಲು ಸ್ವೀಕಾರ ಮತ್ತು ಅದಾಲತ್” ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿ, ಅದೇ ಮಾದರಿಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಅದಾಲತ್ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲು ಸಲಹೆ ನೀಡಿದ್ದರು.

ಸನ್ಮಾನ್ಯ ಸಚಿವರ ಸಲಹೆಯನ್ನು ಅನುಸರಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳು ಮತ್ತು ಕಾರಣಾಂತರಗಳಿಂದ ವಿಲೇವಾರಿ ಆಗದೆ ಇತ್ಯರ್ಥಕ್ಕೆ ಬಾಕಿ ಇರುವ ಸಾರ್ವಜನಿಕರ ಅರ್ಜಿಗಳ ತ್ವರಿತ ವಿಲೇವಾರಿಗೆ ಅವಕಾಶ ಕಲ್ಪಿಸುವ ದೃಷ್ಠಿಯಿಂದ “ಮುಡಾ ಅದಾಲತ್” ಕಾರ್ಯಕ್ರಮವನ್ನು ಹಮ್ಮಕೊಳ್ಳಲು ತೀರ್ಮಾನಿಸಲಾಯಿತು.

“ಮುಡಾ ಅದಾಲತ್” ಕಾರ್ಯಕ್ರಮದ ಪೂರ್ವಭಾವಿಯಾಗಿ ಪತ್ರಿಕಾ ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ವ್ಯಾಪಕ ತಿಳುವಳಿಕೆ ನೀಡಿ, ದಿನಾಂಕ 15.10.2018 ರಿಂದ 31.10.2018 ರವರೆಗೆ ಪ್ರಾಧಿಕಾರದ ಸ್ಪಂದನ ಶಾಖೆಯ ವಿಶೇಷ ಕೌಂಟರ್‍ಗಳಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು.

ಉದ್ದೇಶಿತ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಅರ್ಜಿ ಸ್ವೀಕರಿಸಲು ನಿಗದಿ ಪಡಿಸಿದ್ದ ಕೊನೆಯ ದಿನದವರೆವಿಗೂ ವಿವಿಧ ಸಮಸ್ಯೆಗಳು, ಸೇವೆಗಳಿಗೆ ಸಂಬಂಧಪಟ್ಟಂತೆ ಒಟ್ಟು 200 ಅರ್ಜಿಗಳನ್ನು ಸ್ವೀಕರಿಸಲಾಗಿರುತ್ತದೆ.

ಸಾರ್ವಜನಿಕರು, ಬದಲಿ ನಿವೇಶನ ಕೋರಿ, ತುಂಡು ಜಾಗ ಮಂಜೂರಾತಿ ಕೋರಿ, ಕ್ರಯ ಪತ್ರ, ಖಾತೆ ವರ್ಗಾವಣೆ, ಹಕ್ಕು ಪತ್ರ, ಸ್ವಾಧೀನ ಪತ್ರ, ನಿವೇಶನ/ಮನೆ ಕಂದಾಯ ನಿಗದಿ, ಗುತ್ತಿಗೆ ನವೀಕರಣ; ಭೂಸ್ವಾಧೀನ ಪರಿಹಾರ, ಪ್ರೋತ್ಸಾಹಕ ನಿವೇಶನ ಕೋರಿ ಇತ್ಯಾದಿ ಹಾಗೂ ಪ್ರಾಧಿಕಾರದ ವ್ಯಾಪ್ತಿಯ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಒಳ ಚರಂಡಿ ನಿರ್ಮಾಣ, ರಸ್ತೆ ದುರಸ್ಥಿ, ವಿದ್ಯುತ್ ಸಂಪರ್ಕ, ವಿದ್ಯುತ್ ದೀಪಗಳ ಅಳವಡಿಕೆ, ಕಾಮಗಾಗಿ ವಿಳಂದ ಇತ್ಯಾದಿಯಾಗಿ ಅನೇಕ ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಿರುತ್ತಾರೆ. ಸ್ವೀಕೃತವಾದ ಅರ್ಜಿಗಳ ಶಾಖೆವಾರು ವಿವರ ಈ ಕೆಳಕಂಡಂತೆ ಇರುತ್ತದೆ:

ಕ್ರ. ಸಂ. ಪ್ರಾಧಿಕಾರದ ಶಾಖೆ ಸ್ವೀಕೃತಿ ವಿಲೇವಾರಿ  ಸ್ವೀಕೃತವಾಗಿರುವ ಒಟ್ಟು ಅರ್ಜಿಗಳು ಕ್ರಮ ವಹಿಸಿ ಹಿಂಬರಹ ನೀಡಿರುವು ಪ್ರಕರಣಗಳು ಪ್ರಾಧಿಕಾರದ ಸಭೆಗೆ ಮಂಡಿಸಿ ನಿರ್ಣಯಿಸಬೇಕಿರುವ ಪ್ರಕರಣಗಳು ಒಟ್ಟು

01 ವಲಯ ಕಛೇರಿ-1 ರಿಂದ 8 132 121 11 132
02 ನಗರ ಯೋಜನಾ ಶಾಖೆ 04 04 - 04
03 ಭೂಸ್ವಾಧೀನ ಶಾಖೆ 30 30 - 30
04 ತಾಂತ್ರಿಕ ಶಾಖೆ 29 27 02 29
05 ಇತರೆ 05 05 - 05
ಒಟ್ಟು 200 187 13 200

ಮೇಲಿನ ಎಲ್ಲ ಅರ್ಜಿಗಳನ್ನು ಸೂಕ್ತವಾದ ರೀತಿಯಲ್ಲಿ ಇತ್ಯರ್ಥಪಡಿಸಿ ವಿಲೇವಾರಿ ಗೊಳಿಸುವ ದಿಶೆಯಲ್ಲಿ ಸಾರ್ವಜನಿಕರಿಗೆ ಒಂದು ವೇದಿಕೆ ಕಲ್ಪಿಸಲು ಇದೇ ತಿಂಗಳ ದಿನಾಂಕ 29/11/2018 ರಂದು ಬೆಳಿಗ್ಗೆ 10:00 ಗಂಟೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿ ಆವರಣದಲ್ಲಿ ಸಾರ್ವಜನಿಕವಾಗಿ “ಮುಡಾ ಅದಾಲತ್” ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿ ಪಾಲ್ಗೊಳ್ಳಲು ಕರ್ನಾಟಕ ಸರ್ಕಾರದ ಸನ್ಮಾನ್ಯ ನಗರಾಭಿವೃದ್ಧಿ ಸಚಿವರು, ಸದರಿ ಸನ್ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಪ್ರಾಧಿಕಾರದ ಮಾನ್ಯ ಸದಸ್ಯರು ಹಾಗೂ ಜನ ಪ್ರತಿನಿಧಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಭಾಗವಹಿಸಲಿರುವರು. ಅದಾಲತ್ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುವಂತೆ ಕೋರಿ ಎಲ್ಲ 200 ಅರ್ಜಿದಾರರಿಗೆ ವೈಯುಕ್ತಿಕವಾಗಿ ಪತ್ರ ರವಾನಿಸಲಾಗಿರುತ್ತದೆ.

“ಮುಡಾ ಅದಾಲತ್” ಕಾರ್ಯಕ್ರಮದಡಿ ಸ್ವೀಕರಿಸಲ್ಪಟ್ಟ ಎಲ್ಲ 200 ಅರ್ಜಿಗಳ ಸಂಬಂಧ ತ್ವರಿತ ಗತಿಯಲ್ಲಿ ಪರಿಶೀಲಿಸಿ ಅವುಗಳನ್ನು ಇತ್ಯರ್ಥಪಡಿಸಲು ಸೂಕ್ತವಾದ ರೀತಿಯಲ್ಲಿ ಈಗಾಗಲೇ ಕ್ರಮ ವಹಿಸಲಾಗಿರುತ್ತದೆಯಲ್ಲದೆ, ಪ್ರತಿಯೊಬ್ಬ ಅರ್ಜಿದಾರರಿಗೂ ಹಿಂಬರಹ, ಇತ್ಯಾದಿಯಾಗಿ ನೊಂದಾಯಿತ ಅಂಚೆ ಮೂಲಕ ಮಾಹಿತಿಯನ್ನು ರವಾನಿಸಲಾಗಿರುತ್ತದೆ.

ಸ್ವೀಕರಿಸಿರುವ ಅರ್ಜಿಗಳ ಪೈಕಿ ಬದಲಿ ನಿವೇಶನ, ತುಂಡು ಜಾಗ ಮಂಜೂರಾತಿ ಕೋರಿರುವ ವಿಶೇಷ ಪ್ರಸಂಗಗಳಲ್ಲಿ ವಿಷಯವನ್ನು ಪ್ರಾಧಿಕಾರದ ಸಾಮಾನ್ಯ ಸಭೆಗೆ ಮಂಡಿಸಿ ನಿರ್ಣಯದಂತೆ ಮುಂದಿನ ಸೂಕ್ತ ಕ್ರಮ ಜರುಗಿಸಬೇಕಾಗಿದ್ದು, ಅಂತಹ ಅರ್ಜಿಗಳನ್ನು ಅದಾಲತ್ ಕಾರ್ಯಕ್ರಮದಲ್ಲಿ ಇತ್ಯರ್ಥಪಡಿಸಲಾಗುವುದಿಲ್ಲ. ಅವುಗಳನ್ನು ಪ್ರಾಧಿಕಾರದ ಸಭೆಗೆ ಮಂಡಿಸಿ ನಿರ್ಣಯ ಕೈಗೊಳ್ಳಾಗುವುದು ಎಂಬ ವಿಚಾರಗಳನ್ನು ಅರ್ಜಿದಾರರಿಗೆ ಹಿಂಬರಹದ ಮೂಲಕ ಈಗಾಗಲೇ ತಿಳಿಸಲಾಗಿರುತ್ತದೆ. ಕೆಲವು ಪ್ರಕರಣಗಳ ಸಂಬಂಧ ಪೂರಕ ದಾಖಲಾತಿಗಳನ್ನು ಸಲ್ಲಿಸಿದಲ್ಲಿ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದೆಂದು ಹಿಂಬರಹ ನೀಡಲಾಗಿದೆ. ಇನ್ನು ಕೆಲವು ಪ್ರಕರಣಗಳನ್ನು ಅದಾಲತ್ ಕಾರ್ಯಕ್ರಮದಂದು ಅರ್ಜಿದಾರರ ಸಮ್ಮುಖ ಇತ್ಯರ್ಥ ಅಥವಾ ವಿಲೇವಾರಿ ಪಡಿಸಲಾಗುವುದು. ನ್ಯಾಯಾಲಯಗಳಲ್ಲಿ / ಸರ್ಕಾರದ ಮಟ್ಟದಲ್ಲಿ ಪ್ರಕರಣಗಳು ಬಾಕಿ ಇದ್ದಲ್ಲಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ವಿಚಾರದಲ್ಲಿ ಹೆಚ್ಚಿನ ಕಾಲಾವಕಾಶ ಅಗತ್ಯವೆಂದು ಕಂಡು ಬಂದಿದ್ದು, ಅಂತಹ ಕೆಲವು ಪ್ರಕರಣಗಳಿಗೆ ಸಂಬಂಧಿಸಿದ ಕೋರಿಕೆಗಳನ್ನು ಈ ಅದಾಲತ್ ಕಾರ್ಯಕ್ರಮದಡಿ ಇತ್ಯರ್ಥಪಡಿಸಲಾಗುವುದಿಲ್ಲ.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

 

ದಿನಾಂಕ: 11/10/2018
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಧಿಕಾರವು ನೀಡುವ ಅನುಮೋದನೆಗಳು, ಸೇವೆಗಳಿಗೆ ಸಂಬಂಧಿಸಿದಂತೆ ಅಹವಾಲು/ಸಮಸ್ಯೆಗಳು ಹಾಗೂ ದೂರುಗಳಿಗೆ ಶೀಘ್ರವಾಗಿ ಹಾಗೂ ಕಾಲಬದ್ಧವಾಗಿ ಸ್ಪಂದಿಸಿ ಪರಿಹಾರ ಕಲ್ಪಿಸುವ ಉದ್ದೇಶ ಹೊಂದಿದ್ದು, ಮುಂಬರುವ ದಿನಗಳಲ್ಲಿ ವಿಶೇಷ “ಮುಡಾ ಅದಾಲತ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ದಿನಾಂಕ 15/10/2018 ರಿಂದ 31/10/2018 ರವರೆಗೆ ಪ್ರಾಧಿಕಾರದ ಕಛೇರಿಯ ಸ್ಪಂದನ ಶಾಖೆಯ ಕೌಂಟರ್‍ಗಳಲ್ಲಿ ಸಾರ್ವಜನಿಕ ರಜಾ ದಿನಗಳನ್ನು ಹೊರತುಪಡಿಸಿ ಕೆಲಸದ ದಿನಗಳಂದು ಪ್ರತಿ ದಿನ ಬೆಳಿಗ್ಗೆ 11:00 ರಿಂದ ಸಂಜೆ 4:30 ರವರೆಗೆ ಅದಾಲತ್ ಅರ್ಜಿ ನಮೂನೆಯಲ್ಲಿ ಸಾರ್ವಜನಿಕರಿಂದ ಅಹವಾಲು/ದೂರುಗಳನ್ನು ಸ್ವೀಕರಿಸಲಾಗುವುದು.
ಮುಡಾ ಅದಾಲತ್ ಅರ್ಜಿ ನಮೂನೆ ಮತ್ತು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಯನ್ನು ಪ್ರಾಧಿಕಾರದ ಕಛೇರಿಯ ಸ್ಪಂದನ ಶಾಖೆಯ “ಮುಡಾ ಅದಾಲತ್” ಕೌಂಟರ್‍ನಲ್ಲಿ ಪಡೆದುಕೊಳ್ಳಬಹುದಾಗಿರುತ್ತದೆ. ಈ ಕಾರ್ಯಕ್ರಮದಡಿ ಸ್ವೀಕರಿಸಲಾಗುವ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ಸಾಧ್ಯವಾದಷ್ಟು ಮಟ್ಟಿಗೆ “ಮುಡಾ ಅದಾಲತ್” ಕಾರ್ಯಕ್ರಮಕ್ಕೂ ಮುಂಚಿತವಾಗಿ ವಿಲೇವಾರಿಗೊಳಿಸಿ ನೊಂದಾಯಿತ ಅಂಚೆ ಮೂಲಕ ಅರ್ಜಿದಾರರಿಗೆ ಸೂಕ್ತ ಪರಿಹಾರ/ಮಾಹಿತಿ ರವಾನಿಸಲಾಗುವುದು ಹಾಗೂ ಬಾಕಿ ಉಳಿಯುವ ಅರ್ಜಿಗಳನ್ನು “ಮುಡಾ ಅದಾಲತ್” ಕಾರ್ಯಕ್ರಮದಲ್ಲಿ ವಿಲೇವಾರಿಗೊಳಿಸಲು ಕ್ರಮ ವಹಿಸಲಾಗುವುದು. “ಮುಡಾ ಅದಾಲತ್” ಕಾರ್ಯಕ್ರಮ ನಡೆಯುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ಮಾದ್ಯಮಗಳ ಮೂಲಕ ಸಾರ್ವಜನಿಕವಾಗಿ ಪ್ರಚುರಪಡಿಸಲಾಗುವುದು. ಆದ್ದರಿಂದ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ. ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಸ್ಥಿರ ದೂರವಾಣಿ ಸಂಖ್ಯೆ: 0821-2429451, 0821-2421629 ಅಥವಾ 0821-2429291 ಗಳನ್ನು ಸಂಪರ್ಕಿಸಿ ಪ್ರಾಧಿಕಾರದ ಕಛೇರಿಯ ಸ್ಪಂದನ ಶಾಖೆಯಿಂದ ಪಡೆಯಬಹುದಾಗಿರುತ್ತದೆ.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 2018-19ನೇ ಸಾಲಿನ ದಸರಾ ಮಹೋತ್ಸವದ ಕಾರ್ಯಕ್ರಮಗಳ ವಿವರ
ಕ್ರ.ಸಂ. ಪಾರ್ಕ್ ವಿಳಾಸ ಮತ್ತು ಹೆಸರ ದಿನಾಂಕ ಕಾರ್ಯಕ್ರಮದ ವಿವರ ಸಮಯ  
1 ದಟ್ಟಗಳ್ಳಿ 3ನೆ ಹಂತದ "ಜೆ" ಬ್ಲಾಕ್‍ನಲ್ಲಿ ಬರುವ ಉದ್ಯಾನವನ ಸಂಖ್ಯೆ 19 17.10.2018 ಶಿವಣ್ಣ ಮತ್ತು ತಂಡದಿಂದ ಕರಾಟೆ ಪ್ರದರ್ಶನ ಸಂಜೆ 6.00-6.15
  ಸಿಂಚನ ರವರಿಂದ ಭರತನಾಟ್ಯ ಕಾರ್ಯಕ್ರಮ ಸಂಜೆ 6.15-6.25
ಕನಿಷ್ಕ ರವರಿಂದ ನೃತ್ಯ ಪ್ರದರ್ಶನ ಸಂಜೆ 6.25-6.40
ಸಿಂಚನ ಮತ್ತು ತಂಡದವರಿಂದ ಜಾನಪದ ನೃತ್ಯ ಪ್ರದರ್ಶನ ಸಂಜೆ 6.40-700
ಸಿಂಚನ ಮತ್ತು ತಂಡದವರಿಂದ ಭರತನಾಟ್ಯ ಪ್ರದರ್ಶನ ಸಂಜೆ 7.00-7.10
ಅನುಷ್ ರವರಿಂದ ಹಾಡುಗಾರಿಕೆ ಸಂಜೆ 7.10-7.15
ಅನುಷ್ ಮತ್ತು ತಂಡದವರಿಂದ ಸಮೂಹ ಗಾಯನ ಸಂಜೆ 7.15-7.30
ರೂಪಶ್ರೀ ರವರಿಂದ ನೃತ್ಯ ಪ್ರದರ್ಶನ ಸಂಜೆ 7.30-7.40
ಸಹನಾ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಸಂಜೆ 7.40-7.50
ನೇಹಾ ರವರಿಂದ ಹರಿಕಥೆ ಕಾರ್ಯಕ್ರಮ ಸಂಜೆ 7.50-8.00
ಸುಹಾಸ್ ರವರಿಂದ ಭಾವಗೀತೆ ಕಾರ್ಯಕ್ರಮ ಸಂಜೆ 8.00-8.10
     
2 1 ದಟ್ಟಗಳ್ಳಿ 3ನೆ ಹಂತದ "ಜೆ" ಬ್ಲಾಕ್‍ನಲ್ಲಿ ಬರುವ ಉದ್ಯಾನವನ ಸಂಖ್ಯೆ - 19 16.10.2018 ಸರಿಗಮಪ ಖ್ಯಾತಿಯ ತನುಶ್ರೀ ತಂಡದಿಂದ ಸಮೂಹ ಗೀತೆ (ಕೌಟಿಲ್ಯ ವಿದ್ಯಾಲಯ) ಸಂಜೆ 6.30-6.50
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಐಶ್ವರ್ಯ ಜಿ ಯಿಂ ನೃತ್ಯ ಪ್ರದರ್ಶನ (ಕೌಟಿಲ್ಯ ವಿದ್ಯಾಲಯ) ಸಂಜೆ 6.50-7.10
ಅಭಯ್ ಕೃಷ್ಣ ಮತ್ತು ಅಕ್ಷಯ್ ಕೃಷ್ಣ ರವರಿಂದ ನೃತ್ಯ ಪ್ರದರ್ಶನ (ಕೌಟಿಲ್ಯ ವಿದ್ಯಾಲಯ) ಸಂಜೆ 7.10-7.25
ಮಾಸ್ಟರ್ ಸುನೀಲ್ ಮತ್ತು ತಂಡದಿಂದ ಕರಾಟೆ ಪ್ರದರ್ಶನ (ಕೌಟಿಲ್ಯ ವಿದ್ಯಾಲಯ) ಸಂಜೆ 7.25-7.50
ಕೌಟಿಲ್ಯ ಮಕ್ಕಳಿಂದ ಸಾಮೂಹಿಕ ನೃತ್ಯ ಪ್ರದರ್ಶನ (ಕೌಟಿಲ್ಯ ವಿದ್ಯಾಲಯ) ಸಂಜೆ 7.50-7.55
ಮಾಸÀ್ಟರ್ ವಿನಯ್ ರವರಿಂದ ಗಾಯನ ಸಂಜೆ 7.55-8.05
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ದಕ್ಷಿತ ರವರಿಂದ ನೃತ್ಯ ಪ್ರದರ್ಶನ (ಕೌಟಿಲ್ಯ ವಿದ್ಯಾಲಯ) ಸಂಜೆ 8.05-8.10
ಡಾ. ಶಿಲ್ಪ ಹೆಗ್ಡೆ ಮತ್ತು ತಂಡದಿಂದ ಸಮೂಹ ಗಾಯನ ಸಂಜೆ 8.10-8.30
ವಿದೂಷಿ ಪ್ರಸನ್ನಲಕ್ಷ್ಮಿ ಮತ್ತು ತಂಡದಿಂದ ಭರತನಾಟ್ಯ ಸಂಜೆ 8.30-8.50
ವಿಧ್ವತ್ ಪರಮೇಶ್ವರ ಹೆಗಡೆ, ವಿಧ್ವತ್ ಚಾರುದತ್ತಮ್, ವಿಧ್ವತ್ ವಿಕ್ರಂ ಭಾರದಾಜ್ ರವರಿಂದ ಸಮ್ಮಿಳನ ಗಾಯನ ಸಂಜೆ 8.50-9.10
ಧರ್ಮ ಮತ್ತು ತಂಡದಿಂದ ಪಾಶ್ಚಿಮಾತ್ಯ ನೃತ್ಯ ಪ್ರದರ್ಶನ ಸಂಜೆ 9.10-9.20
ವಿಜಯ್ ಸೋಲೋ ನೃತ್ಯ (ಕೌಟಿಲ್ಯ ವಿದ್ಯಾಲಯ) ಸಂಜೆ 9.20-9.30
     
3 1 ವಿಜಯನಗರ 4ನೇ ಹಂತ, 2ನೇ ಘಟ್ಟದ ಉದ್ಯಾನವನ ಸಂಖ್ಯೆ - 32
(ರಾಘವೇಂದ್ರ - 9972049945) 13.10.2018 ಶ್ರೀಮತಿ ಆಶಾ ರವರಿರಂದ ಗೀತ ಗಾಯನ ಸಂಜೆ 6.00-6.30
ಶ್ರೀ ರಘು ರವರಿಂದ ನೃತ್ಯ ಪ್ರದರ್ಶನ ಸಂಜೆ 6.30-7.00
ಶ್ರೀ ಶಾರದ ಸಂಗೀತ ಶಾಲೆ ರವರಿಂದ ಸಂಗೀತ ಕಾರ್ಯಕ್ರಮ ಸಂಜೆ 7.00-7.30
ಕು. ಭೂಮಿಕಾ ರವರಿಂದ ಕೊಳಲು ವಾದನ ಸಂಜೆ 7.30-8.00
ಕು. ರುಜುಲಿ ರವರಿಂದ ನೃತ್ಯ ಪ್ರದರ್ಶನ ರಾತ್ರಿ 8.00-8.30
ಶ್ರೀ ರÁಘವೇಂದ್ರ ಮತ್ತು ತಂಡದವರಿಂದ ಯೋಗ ಪ್ರದರ್ಶನ ರಾತ್ರಿ 8.30-9.30
14.10.2018 ಕು. ಶಶೀರಾ ಎನ್. ಕಶ್ಯಪ್ ರವರಿಂದ ಭರತನಾಟ್ಯ ಸಂಜೆ 6.00-6.30
ಶ್ರೀಮತಿ ಆಶಾ ರವರಿರಂದ ಗೀತ ಗಾಯನ ಸಂಜೆ 6.30-7.00
ಚಾದವಿ ದರ್ಶಿನಿ ರವರಿಂದ ಗೀತ ಗಾಯನ ಸಂಜೆ 7.00-7.30
ಪವಿತ್ರ ಹಾಗೂ ಸಂಗಾತಿ ರವರಿಂದ ಯುಗಳಗೀತೆ ಗಾಯನ ಸಂಜೆ 7.30-8.00
ಶ್ರೀ ಮನೋಹರ್ ಕಟ್ಟಿ ರವರಿಂದ ಸ್ವಚ್ಛ ಭಾರತ್ ಕಿರು ನಾಟಕ ರಾತ್ರಿ 8.00-8.30
ಕು. ಶ್ರೇಯಾ ಲೋಕೇಶ್ ರವರಿಂದ ಹಾಡುಗಾರಿಕೆ ರಾತ್ರಿ 8.30-9.30
2 ವಿಜಯನಗರ 3ನೇ ಹಂತದ "ಎ" ಬ್ಲಾಕ್‍ನಲ್ಲಿ ಬರುವ ಉದ್ಯಾನವನ ಸಂಖ್ಯೆ - 04
(ವೇಣುಗೋಪಾಲ್ - 9480349453) 12.10.2018 ಹಿನಕಲ್ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಸಂಜೆ 6.30-7.30
ಹಿನಕಲ್ ಗ್ರಾಮದ ವಿಜಯ ಶಾಲೆಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಸಂಜೆ 7.30-8.30
13.10.2018 ಶ್ರೀ ಶ್ಯಾಮಣ್ಣನವರಿಂದ ಯೋಗ ಕಾರ್ಯಕ್ರಮ ಸಂಜೆ 6.30-7.30
ಮಕ್ಕಳಿಂದ ಹಾಡುಗಾರಿಕೆ ಸಂಜೆ 7.30-8.30
     
 
ಸಂಖ್ಯೆ :ಮೈ.ನ.ಪ್ರಾ/ಆಆಸಶಾ/2018-19
ದಿನಾಂಕ 15.08.2018ರಂದು ಮೈಸೂರು ನಗರಾಭಿವೃಧ್ಧಿ ಪ್ರಾಧಿಕಾರದಲ್ಲಿ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಶ್ರೀ.ಅಭಿರಾಮ್ ಜಿ ಶಂಕರ್, ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಶ್ರೀ.ಪಿ.ಎಸ್.ಕಾಂತರಾಜ್, ಅಧೀಕ್ಷಕ ಅಭಿಯಂತರರಾದ ಶ್ರೀ.ಬಿ.ಕೆ.ಸುರೇಶ್ ಬಾಬು, ನಗರ ಯೋಜಕ ಸದಸ್ಯರಾದ ಶ್ರೀ ಗಿರೀಶ್, ಕಾರ್ಯಪಾಲಕ ಅಭಿಯಂತರುಗಳಾದ ಶ್ರೀ.ಬಿ.ಎನ್.ಪ್ರಭಾಕರ್ ಹಾಗೂ ಶ್ರೀಮತಿ.ಸುವರ್ಣ, ಕಾರ್ಯದರ್ಶಿ ಶ್ರೀಮತಿ ಎಂ.ಕೆ.ಸವಿತ, ವಿಶೇಷ ಭೂಸ್ವಾಧೀನಾಧಿಕಾರಿ ಶ್ರೀಮತಿ.ಚಂದ್ರಮ್ಮ ಹಾಗೂ ಎಲ್ಲಾ ವಲಯ ಅಧಿಕಾರಿಗಳು, ವಿಶೇಷ ತಹಶೀಲ್ದಾರ್‍ರವರು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಪಿ.ಎಸ್.ಕಾಂತರಾಜ್)
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

ಸಂಖ್ಯೆ :ಮೈ.ನ.ಪ್ರಾ/ಅಆಸಶಾ/ಪ.ಪ್ರ/2018-19 18.07.2018

ದೇವನೂರು 3ನೇ ಹಂತ ಬಡಾವಣೆಯಲ್ಲಿ ಕೇಂದ್ರ ಗ್ರಂಥಾಲಯ ನಿರ್ಮಾಣ ಉದ್ದೇಶಕ್ಕಾಗಿ ದೇವನೂರು 3ನೇ ಹಂತ ಬಡಾವಣೆಯ ಸಿ.ಎ ನಿ..ಸಂಖ್ಯೆ-06ನ್ನು ಮಂಜೂರು ಮಾಡಲಾಗಿದ್ದು, ಸದರಿ ನಿವೇಶನದ ಮಂಜೂರಾತಿ ಪತ್ರವನ್ನು ದಿನಾಂಕ 18.07.2018ರಂದು ಮಾನ್ಯ ಶಾಸಕರು, ನರಸಿಂಹರಾಜ ವಿಧಾನಸಭಾ ಕ್ಷೇತ್ರ ಹಾಗೂ ಮಾಜಿ ಸಚಿವರು ಇವರು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭಾಂಗಣದಲ್ಲಿ ವಿತರಿಸಿದರು ನಂತರ ನರಸಿಂಹರಾಜ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಅಭಿವೃದ್ದಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿದರು, ಸಭೆಯಲ್ಲಿ ಪ್ರಾಧಿಕಾರದ ಆಯುಕ್ತರು, ಅಧೀಕ್ಷಕ ಅಭಿಯಂತರು, ನಗರ ಯೋಜಕ ಸದಸ್ಯರು, ಕಾರ್ಯದರ್ಶಿ, ಕಾರ್ಯಪಾಲಕ ಅಭಿಯಂತರುಗಳು, ಎಲ್ಲಾ ವಲಯ ಅಧಿಕಾರಿಗಳು ಹಾಗೂ ವಿಶೇಷ ತಹಶೀಲ್ದಾರ್ ರವರುಗಳು ಹಾಗೂ ಸಂಬಂಧಪಟ್ಟ ಸಹಾಯಕ/ಕಿರಿಯ ಅಭಿಯಂತರುಗಳು ಹಾಜರಿದ್ದರು.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

Click to view
 


ಸಂಖ್ಯೆ ಮೈನಪ್ರಾ/ಆಆಸಶಾ/2018-19 4ನೇ ಜೂನ್, 2018

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ದಿನಾಂಕ 04.06.2018 ರಂದು ಬೆಳಗ್ಗೆ 10.30 ಗಂಟೆಗೆ ಶ್ರೀ.ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 123ನೇ ಜಯಂತಿ ಕಾರ್ಯಕ್ರಮಯನ್ನು ಪ್ರಾಧಿಕಾರದ ಕಛೇರಿ ಆವರಣದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಆಯುಕ್ತರಾದ ಶ್ರೀ.ಪಿ.ಎಸ್.ಕಾಂತರಾಜು, ನಗರ ಯೋಜನಾ ಸದಸ್ಯರಾದ ಶ್ರೀಗಿರೀಶ್, ಮುಖ್ಯ ಲೆಕ್ಕಾಧಿಕಾರಿಗಳು, ಕಾರ್ಯಪಾಲಕ ಅಭಿಯಂತರುಗಳು, ಸಹಾಯಕ ಕಾರ್ಯಪಾಲಕ ಅಭಿಯಂತರುಗಳು, ವಿಶೇಷ ತಹಶೀಲ್ದಾರ್‍ಗಳು, ಸಹಾಯಕ ತೋಟಗಾರಿಕೆ ನಿರ್ದೇಶಕರು, ಇತರೆ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಸಿಬ್ಬಂದಿಗಳು ಹಾಜರಿದ್ದರು.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು
 ಸಂಖ್ಯೆ :ಮೈ.ನ.ಪ್ರಾ/ಅಆಸಶಾ/ಪ.ಪ್ರ/2018-19 02.06.2018
ಮೈಸೂರು ನಗರ ಹೊರವಲಯದ ಬನ್ನೂರು ಮುಖ್ಯ ರಸ್ತೆಯಲ್ಲಿರುವ (ರಿಂಗ್ ರಸ್ತೆಯ ಕೆ.ಬಿ.ಎಲ್ ಲೇಔಟ್) ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಪ್ರಾಧಿಕಾರಕ್ಕೆ ಸೇರಿದ ರಸ್ತೆ ಜಾಗದಲ್ಲಿ ಅನಧಿಕೃತವಾಗಿ ಕಟ್ಟಡ ಹಾಗೂ ಕಾಂಪೌಂಡ್ ನಿರ್ಮಿಸಿಕೊಂಡಿದ್ದು, ಸದರಿ ಒತ್ತುವರಿಯನ್ನು ಆಲನಹಳ್ಳಿ ಪೊಲೀಸ್ ಠಾಣೆ, ದೇವರಾಜ ಪೊಲೀಸ್ ಠಾಣೆ ಹಾಗೂ ನಜರ್‍ಬಾದ್ ಪೊಲೀಸ್ ಠಾಣೆಯ ಆರಕ್ಷಕ ಸಿಬ್ಬಂದಿ ಭದ್ರತೆಯಲ್ಲಿ ಇಂದು ದಿನಾಂಕ 02.06.2018ರ ಮುಂಜಾನೆ 4.30ರ ಸಮಯದಲ್ಲಿ ಕಟ್ಟಡವನ್ನು ನೆಲಸಮಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಪ್ರಾಧಿಕಾರದ ಸಹಾಯಕ ಅಧೀಕ್ಷಕ ಅಭಿಯಂತರರಾದ ಶ್ರೀ ಸುರೇಶ್‍ಬಾನು, ಕಾರ್ಯಪಾಲಕ ಅಭಿಯಂತರಾದ ಶ್ರೀ ಪ್ರಭಾಕರ್, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಶ್ರೀ.ಹೆಚ್.ಎನ್.ರವೀಂದ್ರಕುಮಾರ್, ಶ್ರೀ ಎಸ್.ಕೆ.ಭಾಸ್ಕರ್, ಶ್ರೀ ಎಂ.ಪಿ.ದಿನೇಶ್, ಶ್ರೀ.ಅರುಣ್‍ಕುಮಾರ್, ಶ್ರೀ.ಸುರೇಶ್‍ಬಾಬು, ಶ್ರೀ.ಜಿ.ಮೋಹನ್, ಶ್ರೀ.ಕೆ.ಸಿ.ರವಿಶಂಕರ್, ಸಹಾಯಕ ಕಾರ್ಯಪಾಲಕ ಅಭಿಯಂತರು (ವಿದ್ಯುತ್) ಶ್ರೀ ಮಹೇಶ್ ಬಾಬು ಹಾಗೂ ಸಂಬಂಧಪಟ್ಟ ಅಭಿಯಂತರುಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು