Notice Board - Last Update on 24/03/2018

Click to View 2014 Notice Board Page
Click to View 2015 - 16 Notice Board

 
Projects
Your Property / Site Status
City Planning
Allotment of Sites
Catalog & Indexing
Notice Board
Meeting Proceedings
Notifications
Tender
Auctions
ACTS
Frequently Asked Questions
   
   
   
 
 
 
 

ಸಂಖ್ಯೆ ಮೈನಪ್ರಾ/ಆಆಸಶಾ/2017-18 24.03.2018
ಲಲಿತಾದ್ರಿನಗರ (ಉತ್ತರ) ಬಡಾವಣೆಯ ನಿವೇಶನಗಳ ಮಂಜೂರಾತಿದಾರರಿಗೆ ಮಂಜೂರಾತಿ ಪತ್ರಗಳನ್ನು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರು ದಿನಾಂಕ 26.03.2018 ಮತ್ತು 27.03.2018ರಂದು ಬೆಳಗ್ಗೆ 11.00 ಗಂಟೆಗೆ ಪ್ರಾಧಿಕಾರದ ಆವರಣದಲ್ಲಿ ವಿತರಣೆ ಮಾಡಲಿದ್ದಾರೆ. ಈ ಸಂಬಂಧ ಮಂಜೂರಾತಿದಾರರಿಗೆ ಈಗಾಗಲೇ ತಿಳುವಳಿಕೆ ಪತ್ರಗಳನ್ನು ಅಂಚೆ ಮೂಲಕ ರವಾನಿಸಲಾಗಿದ್ದು, ತಿಳುವಳಿಕೆ ಪತ್ರ ಸ್ವೀಕೃತವಾಗದಿದ್ದಲ್ಲಿ ಈ ಪ್ರಕಟಣೆಯನ್ನು ತಿಳುವಳಿಕೆ ಪತ್ರ ಎಂದು ಭಾವಿಸಿ ಮಂಜೂರಾತಿದಾರರು ಬೆಳಗ್ಗೆ 10.00 ಗಂಟೆಗೆ ಕಛೇರಿಯಲ್ಲಿ ಹಾಜರಿರಲು ತಿಳಿಯಪಡಿಸಿದೆ.
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

ಸಂಖ್ಯೆ: ಅಆಸಶಾ/73/2017-18 ದಿನಾಂಕ: 15.03.2018
ಮೈಸೂರು ತಾಲ್ಲೂಕು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಈ ಕೆಳಕಂಡ ಕಾಮಗಾರಿಗಳಿಗೆ ದಿನಾಂಕ: 15.03.2018ರ ಗುರುವಾರ ಬೆಳಿಗ್ಗೆ 8.30 ಗಂಟೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಶ್ರೀ ಜಿ.ಟಿ.ದೇವೇಗೌಡ ರವರು ಗುದ್ದಲಿ ಪೂಜೆಯನ್ನು ನೇರವೇರಿಸಿರುತ್ತಾರೆ.

ಕ್ರ.ಸಂ ಕಾಮಗಾರಿ ಹೆಸರು ಅಂದಾಜು ಮೊತ್ತ  (ರೂ ಲಕ್ಷಗಳಲ್ಲಿ) ಗುತ್ತಿಗೆದಾರರ ಹೆಸರು
1 ಮೈಸೂರು ತಾಲ್ಲೂಕು ದಾಸನಕೊಪ್ಪಲು ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿ. 199.80 ಶ್ರೀ ಎಸ್.ಎಲ್.ಮೋಹನ್
2 ಮೈಸೂರು ತಾಲ್ಲೂಕು ಗೋಹಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿ. 85.50 ಶ್ರೀ ಕೆ.ನಾಗರಾಜು
3 ಮೈಸೂರು ತಾಲ್ಲೂಕು ಕೆ.ಹೆಮ್ಮನಹಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿ. 99.80 ಶ್ರೀ ಎಸ್.ಎಲ್.ಮೋಹನ್

ಮೇಲ್ಕಂಡ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಬೀರಿಹುಂಡಿ ಬಸವಣ್ಣ ರವರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗ್ರಾಮಸ್ಥರುಗಳು ಹಾಗೂ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಎಂ.ಪಿ.ದಿನೇಶ್ ರವರು, ಸಹಾಯಕ ಅಭಿಯಂತರರುಗಳು ಹಾಜರಿದ್ದರು.

ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು
ಮೈ.ನ.ಪ್ರಾ., ಮೈಸೂರು.
ಆರ್.ಟಿ.ನಗರ ಬಡಾವಣೆಯ ‘ಹೆಚ್’ ಪ್ರವರ್ಗದಲ್ಲಿನ ನಿವೇಶನಗಳ ಪಲಾನುಭವಿಗಳ ಆಯ್ಕೆ ಪಟ್ಟಿ Click to View List 
ಲಲಿತಾದ್ರಿನಗರ (ಉತ್ತರ) ಬಡಾವಣೆ, ಚಾಮಲಾಪುರ ಬಡಾವಣೆ ಮತ್ತು ಲಲಿತಾದ್ರಿ ನಗರ (ದಕ್ಷಿಣ) ಬಡಾವಣೆಯ ‘ಹೆಚ್’ ಪ್ರವರ್ಗದಲ್ಲಿನ ನಿವೇಶನಗಳ ಪಲಾನುಭವಿಗಳ ಆಯ್ಕೆ ಪಟ್ಟಿ  - Click to View List

ಲಲಿತಾದ್ರಿನಗರ (ಉತ್ತರ) ಬಡಾವಣೆಯ ನಿವೇಶನಗಳ ಅಂತಿಮ ಫಲಾನುಭವಿಗಳ ಪಟ್ಟಿ 
PDF Format (Click the given below to view the PDF File)

 1. Cut off List

 2. 20 x 30

 3. 30 x 40

 4. 40 x 60

 5. 50 x 80

 6. Attempt Verfication List

 

No MUDA/e-Auction/04/2017-18 Dated 09.01.2018 - Kannada / English     Golden Chance for Site Buyers
CA Notification - Date : 8/1/2018
- Page 1 | Page 2

ಲಲಿತಾದ್ರಿನಗರ (ಉತ್ತರ) ಬಡಾವಣೆ - ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ
Lalithadrinagar (North) Provisional Seniority List - Press Note
PDF Format (Click the dimension given below to view the PDF File)

 1. 20 x 30

 2. 30 x 40

 3. 40 x 60

 4. 50 x 80

Lalithadrinagar (North) Provisional Seniority List     

 

Date : 30/12/2017 PDF File 4 Pages (Click to download)  Date : 26/12/2017 (Click to download)

ಸಂಖ್ಯೆ: ಮೈನಪ್ರಾ/ಅಅ/ಪಿಬಿ/ಟಿಎನ್/06/2017-18 Date : 18.12.2017 (Click to download)  
eProcurement Portal Visit https://eproc.karnataka.gov.in

 

 

ಸಂಖ್ಯೆ: ಅಆಸಶಾ/69/2017-18 ದಿನಾಂಕ: 20.01.2018
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವತಿಯಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಈ ಕೆಳಕಂಡ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸದರಿ ಕಾಮಗಾರಿಗಳಿಗೆ ದಿನಾಂಕ:20.01.2018ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧ್ರುವಕುಮಾರ್ ರವರು ಹಾಗೂ ಶಾಸಕರಾದ ಶ್ರೀ ಜಿ.ಟಿ.ದೇವೇಗೌಡ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿರುತ್ತಾರೆ.

 

 


ಕ್ರ.ಸಂ ಕಾಮಗಾರಿ ಹೆಸರು ಅಂದಾಜು ಮೊತ್ತ (ರೂ ಲಕ್ಷಗಳಲ್ಲಿ) ಟೆಂಡರ್ ಮೊತ್ತ (ರೂ ಲಕ್ಷಗಳಲ್ಲಿ) ಗುತ್ತಿಗೆದಾರರ ಹೆಸರು1 ಹೂಟಗಳ್ಳಿ ಕೆ.ಹೆಚ್.ಬಿ ಬಡಾವಣೆಯ ಉದ್ಯಾನವನ ಅಭಿವೃದ್ಧಿ ಕಾಮಗಾರಿ. 31.00 21.04 ಶ್ರೀ ಟಿ.ಆರ್.ನಾಗರಾಜು
2 ಹೂಟಗಳ್ಳಿ ಕೆ.ಹೆಚ್.ಬಿ ಬಡಾವಣೆಯಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿ. 5.25 4.00 ಶ್ರೀ ಜಯರಾಮಚಾರಿ
3 ಮಾದಗಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಸುವ ಕಾಮಗಾರಿ. 100.00 90.70 ಶ್ರೀ ಎಲ್.ರಂಗರೆಡ್ಡಿ

ಈ ಮೇಲ್ಕಂಡ ಕಾಮಗಾರಿಗಳ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ವಲಯ ಅಧಿಕಾರಿ ಶ್ರೀ ಅರುಣ್ ಕುಮಾರ್ ರವರು, ಸಹಾಯಕ ಅಭಿಯಂತರರುಗಳಾದ ಶ್ರೀ ಲೋಹಿತ್, ಶ್ರೀ ಆನಂದ್ ರವರು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಶ್ರೀ ರಾಕೇಶ್ ಪಾಪಣ್ಣ ರವರು, ಶ್ರೀ ಅರುಣ್ ರವರು, ಶ್ರೀಮತಿ ಚಂದ್ರಕಲಾ ರವರು, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಶ್ರೀ ಕೃಷ್ಣ ರವರು, ಸಾಹುಕಾರ ಹುಂಡಿ ಶ್ರೀ ಶ್ರೀರಾಮ್ ರವರು ಹಾಗೂ ಶ್ರೀ ರಮೇಶ್ ರವರು, ಶ್ರೀಮತಿ ಸುನೀತ ಮಹದೇವ್ ರವರು, ಶ್ರೀಮತಿ ನೀಲಮ್ಮರವರು ಹಾಗೂ ಇತರೆ ಜನಪ್ರತಿನಿಧಿಗಳು ಮತ್ತು ಸ್ಥಳೀಯರು ಹಾಜರಿದ್ದರು.
ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು
ಮೈ.ನ.ಪ್ರಾ., ಮೈಸೂರು.

ಸಂಖ್ಯೆ: ಅಆಸಶಾ/68/2017-18 ದಿನಾಂಕ: 17.01.2018
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವತಿಯಿಂದ ದಟ್ಟಗಳ್ಳಿ 3ನೇ ಹಂತ (ಕನಕದಾಸನಗರ) ಬಡಾವಣೆಯ ಮುಖ್ಯ ಮತ್ತು ಅಡ್ಡರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಸದರಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ದಿನಾಂಕ: 17.01.2018ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧ್ರುವಕುಮಾರ್ ರವರು ಹಾಗೂ ಆಯುಕ್ತರಾದ ಶ್ರೀ ಪಿ.ಎಸ್.ಕಾಂತರಾಜು ರವರು, ಅಧೀಕ್ಷಕ ಅಭಿಯಂತರರಾದ ಶ್ರೀ ಸುರೇಶ್ ಬಾಬು ರವರು, ಕಾರ್ಯಪಾಲಕ ಅಭಿಯಂತರರಾದ ಶ್ರೀ ಬಿ.ಎನ್.ಪ್ರಭಾಕರ್ ರವರು, ವಲಯ ಅಧಿಕಾರಿಯಾದ ಶ್ರೀ ಎಂ.ಪಿ.ದಿನೇಶ್ ರವರು ಹಾಗೂ ಸಹಾಯಕ ಅಭಿಯಂತರರೊಂದಿಗೆ ಸ್ಥಳ ತನಿಖೆ ಮಾಡಿದ್ದು, ಕಾಮಗಾರಿ ಗುಣಮಟ್ಟವನ್ನು ಕಾಪಾಡುವಂತೆ ನಿರ್ದೇಶಿಸಿರುತ್ತಾರೆ.
ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು
ಮೈ.ನ.ಪ್ರಾ., ಮೈಸೂರು.

CA Notification - Date : 8/1/2018 - Page 1 | Page 2

ಲಲಿತಾದ್ರಿನಗರ (ಉತ್ತರ) ಬಡಾವಣೆ - ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ
Lalithadrinagar (North) Provisional Seniority List - Press Note
PDF Format (Click the dimension given below to view the PDF File)

 1. 20 x 30

 2. 30 x 40

 3. 40 x 60

 4. 50 x 80

Lalithadrinagar (North) Provisional Seniority List     

 

 

ಸಂಖ್ಯೆ: ಅಆಸಶಾ/66/2017-18 ದಿನಾಂಕ: 30.12.2017ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಸಾಮಾನ್ಯ ಸಭೆ ನಡೆದಿರುತ್ತದೆ.

ಸದರಿ ಸಭೆಯಲ್ಲಿ ವಿಧಾನ ಪರಿಷತ್ ಉಪಸಭಾಪತಿಗಳಾದ ಶ್ರೀ ಮರಿತಿಬ್ಬೇಗೌಡ ರವರು, ಶಾಸಕರುಗಳಾದ ಶ್ರೀ ಜಿ.ಟಿ.ದೇವೇಗೌಡ ರವರು, ಶ್ರೀ ಕಳಲೆ ಎನ್ ಕೇಶವ ಮೂರ್ತಿ ರವರು, ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ.ಸಂದೇಶ್ ನಾಗರಾಜು ರವರು, ಶ್ರಿ.ಶ್ರೀಕಂಠೇಗೌಡ ರವರು, ಶ್ರೀ ಕೆ.ವಿ.ನಾರಾಯಣಸ್ವಾಮಿ ರವರು, ಸದಸ್ಯರುಗಳಾದ ಶ್ರೀ ಸಂದೇಶ್ ಸ್ವಾಮಿ ರವರು, ಶ್ರೀ ಶಿವಮಲ್ಲು ರವರು, ಶ್ರೀ ಜಿ.ಸೋಮಶೇಖರ್ ರವರು ಹಾಗೂ ಪ್ರಾಧಿಕಾರದ ಆಯುಕ್ತರಾದ ಶ್ರೀ.ಪಿ.ಎಸ್.ಕಾಂತರಾಜು ರವರು, ನಗರ ಯೋಜನಾ ಸದಸ್ಯರಾದ ಶ್ರೀ.ಬಿ.ಎನ್.ಗಿರೀಶ್ ರವರು, ಅಧೀಕ್ಷಕ ಅಭಿಯಂತರರಾದ ಶ್ರೀ.ಬಿ.ಕೆ.ಸುರೇಶ್‍ಬಾಬು ರವರು ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧೀಕ್ಷಕ ಅಭಿಯಂತರರಾದ ಶ್ರೀ.ಎನ್.ನರಸಿಂಹೇಗೌಡರವರು ಹಾಗೂ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ, ಕಾರ್ಯಪಾಲಕ ಅಭಿಯಂತರರು ಮತ್ತು ಇತರೆ ಅಧಿಕಾರಿಗಳು ಹಾಜರಿದ್ದರು.
ಈ ದಿನದ ಸಭೆಯಲ್ಲಿ ಈ ಕೆಳಗೆ ನಮೂದಿಸಿರುವಂತೆ ಪ್ರಮುಖ ವಿಷಯಗಳಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.
1. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿರುವ ವಿವಿಧ ಬಡಾವಣೆಗಳಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ವಸತಿ ಸಮುಚ್ಛಯ ಮನೆಗಳನ್ನು ನಿರ್ಮಿಸಲು ನಿರ್ಣಯ ಕೈಗೊಳ್ಳಲಾಯಿತು.
2. ವಿವಿಧ ಗ್ರಾಮದಲ್ಲಿ ಖಾಸಗಿ ಬಡಾವಣೆಯವರು ಬಡಾವಣೆ ನಿರ್ಮಿಸಲು ನಕ್ಷೆ ಅನುಮೋದನೆ ಕೋರಿರುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
3. ಮೈಸೂರು ನಗರದ ಲಲಿತಾದ್ರಿನಗರ (ಉತ್ತರ) ಬಡಾವಣೆಯ ನಿವೇಶನ ಹಂಚಿಕೆ ಸಂಬಂಧ ಜೇಷ್ಠತಾ ಆಧಾರದ ಮೇಲೆ ಅರ್ಹ ಫಲಾನುಭವಿಗಳ ತಾತ್ಕಾಲಿಕ ಪಟ್ಟಿಯನ್ನು ಪ್ರಕಟಿಸಲು ತೀರ್ಮಾನಿಸಲಾಯಿತು.
4. ಪ್ರಾಧಿಕಾರದಲ್ಲಿ ಹಂಚಿಕೆಗೆ ಸಿದ್ಧವಿರುವ 85 ಸಿ.ಎ ನಿವೇಶನಗಳಿಗೆ ಅರ್ಜಿ ಆಹ್ವಾನಿಸಲು ತೀರ್ಮಾನಿಸಲಾಯಿತು.
5. ಮೈಸೂರು ನಗರದ ಹಂಚ್ಯಾ-ಸಾತಗಳ್ಳಿ ‘ಬಿ’ ವಲಯ ಬಡಾವಣೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಲಭ್ಯವಿರುವ 19 ಎಕರೆ 20 ಗುಂಟೆ ಪ್ರದೇಶವನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇವರಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಮೇಲ್ಕಂಡ ಪ್ರಮುಖ ವಿಷಯಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು ಹಾಗೂ ಇತರ ವಿಷಯಗಳ ಬಗ್ಗೆಯೂ ಸಹ ನಿರ್ಣಯ ಕೈಗೊಳ್ಳಲಾಯಿತು.
ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು

ಸಂಖ್ಯೆ: ಅಆಸಶಾ/66/2017-18 ದಿನಾಂಕ: 28.12.2017
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲಭ್ಯವಿರುವ 86 ನಾಗರೀಕ ಸೌಕರ್ಯ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ಸಿ.ಎ ನಿವೇಶನ ಹಂಚಿಕೆ ಉಪ ಸಮಿತಿ ಸಭೆಯನ್ನು ದಿನಾಂಕ: 28.12.2017ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧ್ರುವಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸದರಿ ಸಭೆಯಲ್ಲಿ ಶಾಸಕರುಗಳಾದ ಶ್ರೀ ಜಿ.ಟಿ.ದೇವೇಗೌಡ ರವರು, ಶ್ರೀ ವಾಸು ರವರು, ಶ್ರೀ ಎಂ.ಕೆ.ಸೋಮಶೇಖರ್ ರವರು ಹಾಗೂ ಪ್ರಾಧಿಕಾರದ ಆಯುಕ್ತರಾದ ಶ್ರೀ ಪಿ.ಎಸ್.ಕಾಂತರಾಜು ರವರು, ಅಧೀಕ್ಷಕ ಅಭಿಯಂತರರಾದ ಶ್ರೀ ಬಿ.ಕೆ.ಸುರೇಶ್ ಬಾಬು ರವರು, ನಗರ ಯೋಜನಾ ಸದಸ್ಯರಾದ ಶ್ರೀ.ಬಿ.ಎನ್.ಗಿರೀಶ್ ರವರು ಹಾಗೂ ಅಧಿಕಾರಿಗಳು ಹಾಜರಾಗಿದ್ದರು.
ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು
ಮೈ.ನ.ಪ್ರಾ., ಮೈಸೂರು.

ಸಂಖ್ಯೆ: ಅಆಸಶಾ/65/2017-18 ದಿನಾಂಕ: 27.12.2017
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವತಿಯಿಂದ ಮೈಸೂರು ತಾಲ್ಲೂಕು, ಇಲವಾಲ ಹೋಬಳಿ, ಹುಯಿಲಾಳು ಗ್ರಾಮಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಯನ್ನು (ಟೆಂಡರ್‍ಮೊತ್ತ ರೂ.65,89,491/-) ಕೈಗೆತ್ತಿಕೊಳ್ಳಲಾಗಿದ್ದು, ದಿನಾಂಕ: 27.12.2017ರಂದು ಸದರಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧ್ರುವಕುಮಾರ್ ರವರು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಶ್ರೀ ಜಿ.ಟಿ.ದೇವೇಗೌಡ ರವರು ನೆರವೇರಿಸಿರುತ್ತಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಅರುಣ್ ಕುಮಾರ್ ರವರು, ಪ್ರಾಧಿಕಾರದ ವಲಯಾಧಿಕಾರಿಯಾದ ಶ್ರೀ ಅರುಣ್ ಕುಮಾರ್ ರವರು ಮತ್ತು ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಗೂ ಗ್ರಾಮದ ನಿವಾಸಿಗಳು ಹಾಜರಿದ್ದರು.
ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು
ಮೈ.ನ.ಪ್ರಾ., ಮೈಸೂರು.

Date :: 22/12/2017
No MUDA/E.A.N/03/2017-18 Dated 12.12.2017 - Kannada / English     Golden Chance for Site Buyers

ಸಂಖ್ಯೆ: ಅಆಸಶಾ/62/2017-18 ದಿನಾಂಕ: 01.12.2017
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವತಿಯಿಂದ ಕೆಸರೆ 2ನೇ ಹಂತ ಬಡಾವಣೆಯ 2ನೇ ಕ್ರಾಸ್ ರಸ್ತೆ ಬದಿಯಲ್ಲಿ ‘ಎಲ್’ ಆಕಾರದ ಕಾಂಕ್ರೀಟ್ ಚರಂಡಿ ಮತ್ತು ರಸ್ತೆ ಅಭಿವೃದ್ಧಿ (ಟೆಂಡರ್ ಮೊತ್ತ ರೂ.10,76,000/-) ಮತ್ತು ಕೆಸರೆ 2ನೇ ಹಂತ ಬಡಾವಣೆಯ 7ನೇ ಕ್ರಾಸ್ ರಸ್ತೆ ಬದಿಯಲ್ಲಿ ‘ಎಲ್’ ಆಕಾರದ ಕಾಂಕ್ರೀಟ್ ಚರಂಡಿ ಮತ್ತು ರಸ್ತೆ ಅಭಿವೃದ್ಧಿ (ಟೆಂಡರ್ ಮೊತ್ತ ರೂ.11,01,000/-) ಕೈಗೆತ್ತಿಕೊಳ್ಳಲಾಗಿದ್ದು, ಸದರಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ದಿನಾಂಕ: 01.12.2017ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧ್ರುವಕುಮಾರ್ ರವರು ಹಾಗೂ ರವರು ನೆರವೇರಿಸಿರುತ್ತಾರೆ.
ಈ ಸಂದರ್ಭದಲ್ಲಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ.ಜಿ.ಮೋಹನ್ ರವರು, ಸಹಾಯಕ ಅಭಿಯಂತರರುಗಳು ಹಾಗೂ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಹಸೀನಾ ತಾಜ್ ರವರು, ಮುಡಾ ಮಾಜಿ ಸದಸ್ಯರಾದ ಶ್ರೀ ಅನ್ನುಬಾಯಿ ರವರು ಮತ್ತು ಸ್ಥಳೀಯ ಮುಖಂಡರಾದ ಅಜ್ಜು ಬ್ರದರ್ಸ್ ಹಾಗೂ ಬಡಾವಣೆಯ ನಿವಾಸಿಗಳು ಹಾಜರಿದ್ದರು.
ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು
ಮೈ.ನ.ಪ್ರಾ., ಮೈಸೂರು.

ಸಂಖ್ಯೆ: ಅಆಸಶಾ/61/2017-18 ದಿನಾಂಕ: 21.11.2017
ಮೈಸೂರು ತಾಲ್ಲೂಕು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಈ ಕೆಳಕಂಡ ಕಾಮಗಾರಿಗಳಿಗೆ ದಿನಾಂಕ:22.11.2017ರ ಬುಧವಾರದಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಶ್ರೀ ಜಿ.ಟಿ.ದೇವೇಗೌಡ ರವರು ಗುದ್ದಲಿ ಪೂಜೆಯನ್ನು ನೇರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಶ್ರೀ.ಶಿವಮಲ್ಲು ಮR T Nagarrತ್ತು ಸ್ಥಳೀಯ ಸಾರ್ವಜನಿಕರು ಹಾಜರಿದ್ದರು.

ವಲಯ ಕಛೇರಿ-3ರ ವ್ಯಾಪ್ತಿಯ ಬಡಾವಣೆಗಳ ಕಾಮಗಾರಿಗಳ ವಿವರ.
ಕ್ರ. ಸಂ. ಕಾಮಗಾರಿ ಹೆಸರು ಟೆಂಡರ್ ಮೊತ್ತ (ರೂ.ಲಕ್ಷಗಳಲ್ಲಿ)
1 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯ ಸರ್ವೆ ನಂ: 99ಕ್ಕೆ ಹೊಂದಿಕೊಂಡಂತಿರುವ ಸೇತುವೆ ನಂತರದ ಸರಪಳಿ 100.200 ಮೀ, ನಿಂದ 100.300 ಮೀ, ವರೆಗಿನ ಆರ್.ಸಿ.ಸಿ ಮಳೆ ನೀರಿನ ಚರಂಡಿ ನಿರ್ಮಾಣ ಕಾಮಗಾರಿ. 18.23
2 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯಲ್ಲಿ ಬರುವ ನಿ.ಸಂ.4999 ರಿಂz 5227 ರ ಅಡ್ಡರಸ್ತೆಗಳ ಮರು ಡಾಂಬರೀಕರಣ ಕಾಮಗಾರಿ 17.46
3 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯಲ್ಲಿ ಬರುವ ನಿ.ಸಂ. 6402 ರಿಂದ 6553ರ ವರೆಗಿನ 24.0 ಮೀಟರ್ ರಸ್ತೆ ಮತ್ತು ನಿ.ಸಂ 6375 ರಿಂದ 6189ರ ಅಡ್ಡರಸ್ತೆಗಳ ಮರು ಡಾಂಬರೀಕರಣ ಕಾಮಗಾರಿ 17.40
4 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯಲ್ಲಿ ಬರುವ ನಿ.ಸಂ.6967 ರಿಂz 7004 ರ ವರೆಗಿನ ಮತ್ತು ಅಡ್ಡರಸ್ತೆಗಳ ಮರುಡಾಂಬರೀಕರಣ ಹಾಗೂ ಸಿ.ಸಿ ಚರಂಡಿ ನಿರ್ಮಾಣ ಕಾಮಗಾರಿ 18.17
5 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯಲ್ಲಿ ಬರುವ ನಿ.ಸಂ. 222 ರಿಂದ 802 ರ ಮುಂಭಾಗ ಬರುವ ಹೆಚ್.ಟಿ ಲೈನ್ ರಸ್ತೆಗಳಿಗೆ ಮತ್ತು 159/14 ರಿಂದ 515 (ಜಿ.ಎಲ್.ಎಸ್.ಆರ್. ಹತ್ತಿರ) ಪಾಟ್ ಹೋಲ್ ತುಂಬಿ ರಸ್ತೆ ಮರು ಡಾಂಬರೀಕರಣ ಕಾಮಗಾರಿ 17.50
6 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯಲ್ಲಿ ಉಐSಖ ನಿಂದ ಂ&ಃ Zoಟಿe ಔಊ ಖಿಚಿಟಿಞ ಗೆ ನೀರು ಸರಬರಾಜು ಮಾಡುವ 225mm ಊಆPಇ ಪೈಪ್‍ಲೈನ್ ಅಳವಡಿಸುವ ಕಾಮಗಾರಿ. 18.83
7 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯಲ್ಲಿ ಉಐSಖ ನಿಂದ ಅ&ಆ Zoಟಿe ಔಊ ಖಿಚಿಟಿಞ ಗೆ ನೀರು ಸರಬರಾಜು ಮಾಡುವ 225mm ಊಆPಇ ಪೈಪ್‍ಲೈನ್ ಅಳವಡಿಸುವ ಕಾಮಗಾರಿ. 18.94

ವಲಯ ಕಛೇರಿ-2ರ ವ್ಯಾಪ್ತಿಯ ಬಡಾವಣೆಗಳ ಕಾಮಗಾರಿಗಳ ವಿವರ.
ಕ್ರ.
ಸಂ. ಕಾಮಗಾರಿ ಹೆಸರು ಟೆಂಡರ್ ಮೊತ್ತ (ರೂ.ಲಕ್ಷಗಳಲ್ಲಿ)
1 ಮೈಸೂರು ನಗರ ದಟ್ಟಗಳ್ಳಿ 3ನೇ ಹಂತ ಬಡಾವಣೆಯಲ್ಲಿರುವ ನೇತಾಜಿ ಸರ್ಕಲ್ ಆದಿತ್ಯ ಸರ್ಕಲ್‍ಗಳಲ್ಲಿ ಎರಡು ಬಸ್ ಶೆಲ್ಟರ್ ನಿರ್ಮಾಣ ಮಾಡುವ ಕಾಮಗಾರಿ. 7.01
2 ದಟ್ಟಗಳ್ಳಿ 3ನೇ ಹಂತ ಜೋಡಿ ಬೇವಿನಮರ ಮಾರ್ಗವಾಗಿ ಹಳೇ ಕೇರ್ಗಳ್ಳಿ ರಸ್ತೆಯ ದಕ್ಷಿಣ ಭಾಗ ರಸ್ತೆ ಅಭಿವೃದ್ಧಿ ಕಾಮಗಾರಿ 17.48
3 ದಟ್ಟಗಳ್ಳಿ 3ನೇ ಹಂತ ಜೋಡಿ ಬೇವಿನಮರ ಮಾರ್ಗವಾಗಿ ಹಳೇ ಕೇರ್ಗಳ್ಳಿ ರಸ್ತೆಯ ಉತ್ತರ ಭಾಗ ರಸ್ತೆ ಅಭಿವೃದ್ಧಿ ಕಾಮಗಾರಿ 18.17
4 ದಟ್ಟಗಳ್ಳಿ 3ನೇ ಹಂತ ಬಡಾವಣೆಯ ನಿ.ಸಂ.4300 ರಿಂದ ಕೌಟಿಲ್ಯ ಶಾಲೆವರೆಗಿನ (ಮಧ್ಯದಲ್ಲಿ ಉಳಿದಿರುವ) ಬಾಕಿ ಉಳಿದಿರುವ ರಸ್ತೆ ಅಬಿವೃದ್ಧಿ ಕಾಮಗಾರಿ. 18.99
5 ದಟ್ಟಗಳ್ಳಿ 3ನೇ ಹಂತ ಬಡಾವಣೆಯಲ್ಲಿ ನಿ.ಸಂ. 1500 ರಿಂದ 2000 ರವರೆಗೆ 18 ಮೀಟರ್ ಅಗಲದ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ. 18.43
6 ಮೈಸೂರು ನಗರ ದಟ್ಟಗಳ್ಳಿ 3ನೇ ಹಂತ ಬಡಾವಣೆಯ ಪ್ರಾಧಿಕಾರದ ವಾಣಿಜ್ಯ ಸಂಕೀರ್ಣದ ಪಕ್ಕದ ರಸ್ತೆ ನಿ.ಸಂ.4212 ಅಲ್ಲಿಂದ ಮುಂದಕ್ಕೆ 4997ರವರೆಗೆ (ದಟ್ಟಗಳ್ಳಿ 3ನೇ ಹಂತ ಎಲ್ಲೆವರೆಗೆ) ರಸ್ತೆಗಳಿಗೆ ಮರು ಡಾಂಬರೀಕರಣ ಕಾಮಗಾರಿ 25.00
7 ಮೈಸೂರು ನಗರ ದಟ್ಟಗಳ್ಳಿ 3ನೇ ಹಂತ ಬಡಾವಣೆಯ ಸಾ.ರಾ. ಛತ್ರದ ಹಿಂಭಾಗದಲ್ಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿ (ನಿವೇಶನ ಸಂಖ್ಯೆ.3593 ರಿಂದ 3657ರ ಮುಂಭಾಗದ ಇರುವ ರಸ್ತೆ ನಿರ್ಮಾಣ ಕಾಮಗಾರಿ) 25.00
8 ದಟ್ಟಗಳ್ಳಿ 3ನೇ ಹಂತ ಬಡಾವಣೆ ನಿ.ಸಂ.2746 ರಿಂದ ನಂದಿ ವೃತ್ತದವರೆಗೆ 24.00 ಮೀಟರ್ ಅಗಲದ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ (ಸರಪಳಿ 0.210 ಮೀ ರಿಂದ 0.420 ಮೀಟರ್ ವರೆಗೆ) 14.50
9 ದಟ್ಟಗಳ್ಳಿ 3ನೇ ಹಂತ ಬಡಾವಣೆ ನಿ.ಸಂ.2025 ರಿಂದ 2585 ರವರೆಗೆ 24.00 ಮೀಟರ್ ಅಗಲದ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ 14.50
10 ದಟ್ಟಗಳ್ಳಿ 3ನೇ ಹಂತ ಬಡಾವಣೆಯ ನಿ.ಸಂಖ್ಯೆ-2746 ರಿಂದ ನಂದಿ ವೃತ್ತದವರೆಗೆ 24.00 ಮೀ. ಅಗಲದ ರಸ್ತೆಗೆ ಮರುಡಾಂಬರೀಕರಣ ಕಾಮಗಾರಿ. (ಸರಪಳಿ 0.00 ಮೀ.ನಿಂದ 210.00 ಮೀ.ವರೆಗೆ) 24.80
11 ದಟ್ಟಗಳ್ಳಿ 3ನೇ ಹಂತ ಬಡಾವಣೆಯ ನಿ.ಸಂಖ್ಯೆ.2025 ರಿಂದ 2585 ರವರೆಗೆ 24.00 ಮೀ. ಅಗಲದ ರಸ್ತೆಗೆ ಮರುಡಾಂಬರೀಕರಣ ಕಾಮಗಾರಿ. (ಸರಪಳಿ 0.00 ಮೀ.ನಿಂದ 210.00 ಮೀ.ವರೆಗೆ) 24.80

ಸದರಿ ವಿಷಯವನ್ನು ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಕೋರಲು ಮಾನ್ಯ ಅಧ್ಯಕ್ಷರು ನಿರ್ದೇಶಿಸಿರುತ್ತಾರೆ.

ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು
ಮೈ.ನ.ಪ್ರಾ., ಮೈಸೂರು.
ಸಂಖ್ಯೆ: ಅಆಸಶಾ/60/2017-18 ದಿನಾಂಕ: 21.11.2017
ಮೈಸೂರಿನ ದಟ್ಟಗಳ್ಳಿ 3ನೇ ಹಂತ ಬಡಾವಣೆಯಲ್ಲಿನ ನಿವಾಸಿಗಳು ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಪ್ರಾಧಿಕಾರದ ಅಧ್ಯಕ್ಷರನ್ನು ಕೋರಿರುವ ಮೇರೆಗೆ ದಿನಾಂಕ: 21.11.2017ರಂದು ಬೆಳಗ್ಗೆ 8.30ಕ್ಕೆ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧ್ರುವಕುಮಾರ್ ರವರು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಶ್ರೀ.ಜಿ.ಟಿ.ದೇವೇಗೌಡ ರವರು ಆಯುಕ್ತರಾದ ಶ್ರೀ.ಪಿ.ಎಸ್.ಕಾಂತರಾಜು ರವರು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿರುತ್ತಾರೆ.
ದಟ್ಟಗಳ್ಳಿ 3ನೇ ಹಂತ ಬಡಾವಣೆಯಲ್ಲಿನ ಈ ಕೆಳಕಂಡ ಕಾಮಗಾರಿಗಳಿಗೆ ದಿನಾಂಕ: 22.11.2017ರಂದು ಬೆಳಗ್ಗೆ 10.30ಕ್ಕೆ ಗುದ್ದಲಿ ಪೂಜೆ ನೆರವೇರಿಸಲು ತಿಳಿಸಿರುತ್ತಾರೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸದರಿ ವಿಷಯವನ್ನು ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಕೋರಲು ಮಾನ್ಯ ಅಧ್ಯಕ್ಷರು ನಿರ್ದೇಶಿಸಿರುತ್ತಾರೆ.

ಕ್ರ.ಸಂ. ಕಾಮಗಾರಿ ಹೆಸರು ಅಂದಾಜು ಮೊತ್ತ (ರೂ.ಲಕ್ಷಗಳಲ್ಲಿ)
1 ಮೈಸೂರು ನಗರ ದಟ್ಟಗಳ್ಳಿ 3ನೇ ಹಂತ ಬಡಾವಣೆಯಲ್ಲಿರುವ ನೇತಾಜಿ ಸರ್ಕಲ್ ಆದಿತ್ಯ ಸರ್ಕಲ್‍ಗಳಲ್ಲಿ ಎರಡು ಬಸ್ ಶೆಲ್ಟರ್ ನಿರ್ಮಾಣ ಮಾಡುವ ಕಾಮಗಾರಿ. ರೂ.7.01
2 ದಟ್ಟಗಳ್ಳಿ 3ನೇ ಹಂತ ಜೋಡಿ ಬೇವಿನಮರ ಮಾರ್ಗವಾಗಿ ಹಳೇ ಕೇರ್ಗಳ್ಳಿ ರಸ್ತೆಯ ದಕ್ಷಿಣ ಭಾಗ ರಸ್ತೆ ಅಭಿವೃದ್ಧಿ ಕಾಮಗಾರಿ ರೂ.17.48
3 ದಟ್ಟಗಳ್ಳಿ 3ನೇ ಹಂತ ಜೋಡಿ ಬೇವಿನಮರ ಮಾರ್ಗವಾಗಿ ಹಳೇ ಕೇರ್ಗಳ್ಳಿ ರಸ್ತೆಯ ಉತ್ತರ ಭಾಗ ರಸ್ತೆ ಅಭಿವೃದ್ಧಿ ಕಾಮಗಾರಿ ರೂ.18.17
4 ದಟ್ಟಗಳ್ಳಿ 3ನೇ ಹಂತ ಬಡಾವಣೆಯ ನಿ.ಸಂ.4300 ರಿಂದ ಕೌಟಿಲ್ಯ ಶಾಲೆವರೆಗಿನ (ಮಧ್ಯದಲ್ಲಿ ಉಳಿದಿರುವ) ಬಾಕಿ ಉಳಿದಿರುವ ರಸ್ತೆ ಅಬಿವೃದ್ಧಿ ಕಾಮಗಾರಿ. ರೂ.18.99
5 ದಟ್ಟಗಳ್ಳಿ 3ನೇ ಹಂತ ಬಡಾವಣೆಯಲ್ಲಿ ನಿ.ಸಂ. 1500 ರಿಂದ 2000 ರವರೆಗೆ 18 ಮೀಟರ್ ಅಗಲದ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ. ರೂ.18.43
6 ಮೈಸೂರು ನಗರ ದಟ್ಟಗಳ್ಳಿ 3ನೇ ಹಂತ ಬಡಾವಣೆಯ ಪ್ರಾಧಿಕಾರದ ವಾಣಿಜ್ಯ ಸಂಕೀರ್ಣದ ಪಕ್ಕದ ರಸ್ತೆ ನಿ.ಸಂ.4212 ಅಲ್ಲಿಂದ ಮುಂದಕ್ಕೆ 4997ರವರೆಗೆ (ದಟ್ಟಗಳ್ಳಿ 3ನೇ ಹಂತ ಎಲ್ಲೆವರೆಗೆ) ರಸ್ತೆಗಳಿಗೆ ಮರು ಡಾಂಬರೀಕರಣ ಕಾಮಗಾರಿ ರೂ.25.00
7 ಮೈಸೂರು ನಗರ ದಟ್ಟಗಳ್ಳಿ 3ನೇ ಹಂತ ಬಡಾವಣೆಯ ಸಾ.ರಾ. ಛತ್ರದ ಹಿಂಭಾಗದಲ್ಲಿರುವ ರಸ್ತೆ ಅಭಿವೃದ್ಧಿ ಕಾಮಗಾರಿ (ನಿವೇಶನ ಸಂಖ್ಯೆ.3593 ರಿಂದ 3657ರ ಮುಂಭಾಗದ ಇರುವ ರಸ್ತೆ ನಿರ್ಮಾಣ ಕಾಮಗಾರಿ) ರೂ.25.00
8 ದಟ್ಟಗಳ್ಳಿ 3ನೇ ಹಂತ ಬಡಾವಣೆ ನಿ.ಸಂ.2746 ರಿಂದ ನಂದಿ ವೃತ್ತದವರೆಗೆ 24.00 ಮೀಟರ್ ಅಗಲದ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ (ಸರಪಳಿ 0.210 ಮೀ ರಿಂದ 0.420 ಮೀಟರ್ ವರೆಗೆ) ರೂ.14.50
9 ದಟ್ಟಗಳ್ಳಿ 3ನೇ ಹಂತ ಬಡಾವಣೆ ನಿ.ಸಂ.2025 ರಿಂದ 2585 ರವರೆಗೆ 24.00 ಮೀಟರ್ ಅಗಲದ ರಸ್ತೆಗೆ ಮರು ಡಾಂಬರೀಕರಣ ಕಾಮಗಾರಿ ರೂ.14.50
10 ದಟ್ಟಗಳ್ಳಿ 3ನೇ ಹಂತ ಬಡಾವಣೆಯ ನಿ.ಸಂಖ್ಯೆ-2746 ರಿಂದ ನಂದಿ ವೃತ್ತದವರೆಗೆ 24.00 ಮೀ. ಅಗಲದ ರಸ್ತೆಗೆ ಮರುಡಾಂಬರೀಕರಣ ಕಾಮಗಾರಿ. (ಸರಪಳಿ 0.00 ಮೀ.ನಿಂದ 210.00 ಮೀ.ವರೆಗೆ) ರೂ.24.80
11 ದಟ್ಟಗಳ್ಳಿ 3ನೇ ಹಂತ ಬಡಾವಣೆಯ ನಿ.ಸಂಖ್ಯೆ.2025 ರಿಂದ 2585 ರವರೆಗೆ 24.00 ಮೀ. ಅಗಲದ ರಸ್ತೆಗೆ ಮರುಡಾಂಬರೀಕರಣ ಕಾಮಗಾರಿ. (ಸರಪಳಿ 0.00 ಮೀ.ನಿಂದ 210.00 ಮೀ.ವರೆಗೆ) ರೂ.24.80
ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು
ಮೈ.ನ.ಪ್ರಾ., ಮೈಸೂರು.
ಸಂಖ್ಯೆ: ಅಆಸಶಾ/59/2017-18 ದಿನಾಂಕ: 20.11.2017
ಮೈಸೂರು ತಾಲ್ಲೂಕು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಈ ಕೆಳಕಂಡ ಕಾಮಗಾರಿಗಳಿಗೆ ದಿನಾಂಕ:22.11.2017ರ ಬುಧವಾರ ಬೆಳಿಗ್ಗೆ 8.00 ಗಂಟೆಯಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಶ್ರೀ ಜಿ.ಟಿ.ದೇವೇಗೌಡ ರವರು ಗುದ್ದಲಿ ಪೂಜೆಯನ್ನು ನೇರವೇರಿಸಲಿದ್ದಾರೆ. ಸದರಿ ಕಾರ್ಯಕ್ರಮಗಳಲ್ಲಿ ಎಲ್ಲಾ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸದರಿ ವಿಷಯವನ್ನು ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಕೋರಲು ಮಾನ್ಯ ಅಧ್ಯಕ್ಷರು ನಿರ್ದೇಶಿಸಿರುತ್ತಾರೆ.
ಕ್ರ.ಸಂ. ಕಾಮಗಾರಿ ಹೆಸರು ಅಂದಾಜು ಮೊತ್ತ ರೂ. ಲ ್ಷಗಳಲ್ಲಿ ಗುತ್ತಿಗೆ ಮೊತ್ತ
1 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯ ಸರ್ವೆ ನಂ: 99ಕ್ಕೆ ಹೊಂದಿಕೊಂಡಂತಿರುವ ಸೇತುವೆ ನಂತರದ ಸರಪಳಿ 100.200 ಮೀ, ನಿಂದ 100.300 ಮೀ, ವರೆಗಿನ ಆರ್.ಸಿ.ಸಿ ಮಳೆ ನೀರಿನ ಚರಂಡಿ ನಿರ್ಮಾಣ ಕಾಮಗಾರಿ. 25.00 1823247.00
2 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯಲ್ಲಿ ಬರುವ ನಿ.ಸಂ.4999 ರಿಂz 5227 ರ ಅಡ್ಡರಸ್ತೆಗಳ ಮರು ಡಾಂಬರೀಕರಣ ಕಾಮಗಾರಿ 25.00 1746797.00
3 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯಲ್ಲಿ ಬರುವ ನಿ.ಸಂ. 6402 ರಿಂದ 6553ರ ವರೆಗಿನ 24.0 ಮೀಟರ್ ರಸ್ತೆ ಮತ್ತು ನಿ.ಸಂ 6375 ರಿಂದ 6189ರ ಅಡ್ಡರಸ್ತೆಗಳ ಮರು ಡಾಂಬರೀಕರಣ ಕಾಮಗಾರಿ 25.00 1740763.00
4 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯಲ್ಲಿ ಬರುವ ನಿ.ಸಂ.6967 ರಿಂz 7004 ರ ವರೆಗಿನ ಮತ್ತು ಅಡ್ಡರಸ್ತೆಗಳ ಮರುಡಾಂಬರೀಕರಣ ಹಾಗೂ ಸಿ.ಸಿ ಚರಂಡಿ ನಿರ್ಮಾಣ ಕಾಮಗಾರಿ 25.00 1817488.00
5 ವಿಜಯನಗರ 3ನೇ ಹಂತದ ಸಂಗಮ್ ವೃತ್ತದ ಅಭಿವೃದ್ಧಿ ಕಾಮಗಾರಿ. 50.00 3416909.00
6 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯಲ್ಲಿ ಬರುವ ನಿ.ಸಂ. 222 ರಿಂದ 802 ರ ಮುಂಭಾಗ ಬರುವ ಹೆಚ್.ಟಿ ಲೈನ್ ರಸ್ತೆಗಳಿಗೆ ಮತ್ತು 159/14 ರಿಂದ 515 (ಜಿ.ಎಲ್.ಎಸ್.ಆರ್. ಹತ್ತಿರ) ಪಾಟ್ ಹೋಲ್ ತುಂಬಿ ರಸ್ತೆ ಮರು ಡಾಂಬರೀಕರಣ ಕಾಮಗಾರಿ 25.00 1750000.00
7 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯಲ್ಲಿ ಉಐSಖ ನಿಂದ ಂ&ಃ Zoಟಿe ಔಊ ಖಿಚಿಟಿಞ ಗೆ ನೀರು ಸರಬರಾಜು ಮಾಡುವ 225mm ಊಆPಇ ಪೈಪ್‍ಲೈನ್ ಅಳವಡಿಸುವ ಕಾಮಗಾರಿ. 25.00 1883000.00
8 ವಿಜಯನಗರ 4ನೇ ಹಂತ, 2ನೇ ಘಟ್ಟ ಬಡಾವಣೆಯಲ್ಲಿ ಉಐSಖ ನಿಂದ ಅ&ಆ Zoಟಿe ಔಊ ಖಿಚಿಟಿಞ ಗೆ ನೀರು ಸರಬರಾಜು ಮಾಡುವ 225mm ಊಆPಇ ಪೈಪ್‍ಲೈನ್ ಅಳವಡಿಸುವ ಕಾಮಗಾರಿ. 25.00 1894000.00
ಮಾನ್ಯ ಅಧ್ಯಕ್ಷರ ಆಪ್ತ ಸಹಾಯಕರು
ಮೈ.ನ.ಪ್ರಾ., ಮೈಸೂರು.

ಸಂಖ್ಯೆ: ಅಆಸಶಾ/58/2017-18
ದಿನಾಂಕ:21.11.2017ರ ಮಂಗಳವಾರ ಬೆಳಿಗ್ಗೆ 8.30 ಗಂಟೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಪ್ರಾಧಿಕಾರದ ಆಯುಕ್ತರು, ಅಧೀಕ್ಷಕ ಅಭಿಯಂತರರು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ದಟ್ಟಗಳ್ಳಿ 3ನೇ ಹಂತ ಬಡಾವಣೆಯ ಸ್ಥಳ ಪರಿಶೀಲನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ.
(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ., ಮೈಸೂರು.

ಸಂಖ್ಯೆ: ಅಆಸಶಾ/56/2017-18 07.11.2017
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವಯಿಂದ ನಿರ್ಮಿಸಿರುವ ರವೀಂದ್ರನಾಥ ಠಾಗೋರ್ ಬಡಾವಣೆಯ (ಆರ್.ಟಿ.ನಗರ) ನಿವೇಶನ ಮಂಜೂರಾದ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸುವ ಕಾರ್ಯಕ್ರಮವನ್ನು ದಿನಾಂಕ; 08, 09, 10 ನವೆಂಬರ್ 2017ರಂದು ಪ್ರಾಧಿಕಾರದ ಆವರಣದ ಹಿಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ: 08.11.2017ರ ಬುಧವಾರ 11.00 ಗಂಟೆಗೆ ಮಾನ್ಯ ಶ್ರೀ.ಹೆಚ್.ಸಿ.ಮಹದೇವಪ್ಪ ನವರು ಮಾನ್ಯ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವರು ಈ ಕಾರ್ಯಕ್ರಮಕ್ಕೆ ಎಲ್ಲಾ ಪತ್ರಿಕಾ ಸಂಪಾದಕರು, ವರದಿಗಾರರು, ಮಾದ್ಯಮ ಮಿತ್ರರು ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.
(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ ಮೈಸೂರು.

ಸಂಖ್ಯೆ :ಮೈ.ನ.ಪ್ರಾ/ಅಆಸಶಾ/ಪ.ಪ್ರ2017-18 26.10.2017
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ವಿಜಯನಗರ ಬಡಾವಣೆಯಲ್ಲಿ 80 ಅಡಿ ರಸ್ತೆಯಲ್ಲಿ ವಾಣಿಜ್ಯ ನಿವೇಶನದಲ್ಲಿ ಅನಧಿಕೃತವಾಗಿ ವಾಣಿಜ್ಯ ಸಂಕೀರ್ಣ ನಿರ್ಮಿಸಿಕೊಂಡಿದ್ದು, ಸದರಿ ಕಟ್ಟಡವನ್ನು ವಿಜಯನಗರ ಪೊಲೀಸ್ ಠಾಣೆಯ ಆರಕ್ಷಕ ಸಿಬ್ಬಂದಿ ಭದ್ರತೆಯಲ್ಲಿ ಇಂದು ದಿನಾಂಕ 26.10.2017ರ ಮುಂಜಾನೆ 6.00ರ ಸಮಯದಲ್ಲಿ ಕಟ್ಟಡವನ್ನು ನೆಲಸಮಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಯಿತು. ಈ ಸಂದರ್ಭದಲ್ಲಿ ಪ್ರಾಧಿಕಾರದ ಸಹಾಯಕ ಅಧೀಕ್ಷಕ ಅಭಿಯಂತರರಾದ ಶ್ರೀ ಎಂ ಶಿವಕುಮಾರ್, ಕಾರ್ಯಪಾಲಕ ಅಭಿಯಂತರಾದ ಶ್ರೀ ಪ್ರಭಾಕರ್ ಮತ್ತು ಶ್ರಿ ಆರ್.ಕೆ.ರಾಜು. ಸಹಾಯಕ ಕಾರ್ಯಪಾಲಕ ಅಭಿಯಂತರಾದ ಶ್ರಿ.ಸುರೇಶ್‍ಬಾಬು, ಸಹಾಯಕ ಕಾರ್ಯಪಾಲಕ ಅಭಿಯಂತರು (ವಿದ್ಯುತ್) ಶ್ರೀ ಮಹೇಶ್ ಬಾಬು ಹಾಗೂ ಸಂಬಂಧಪಟ್ಟ ಅಭಿಯಂತರುಗಳು ಸ್ಥಳದಲ್ಲಿ ಹಾಜರಿದ್ದರು.
ಸಹಿ/-
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

ಸಂಖ್ಯೆ :ಮೈ.ನ.ಪ್ರಾ/ಆಆಸಶಾ/2017-18 25.10.2017
ಪ್ರಾಧಿಕಾರದ ವತಿಯಿಂದ ಹೊಸ ಬಡಾವಣೆಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಸದರಿ ಕಾರ್ಯಕ್ಕೆ ನಿವೃತ್ತ ಭೂಮಾಪಕರ ಸೇವೆಯು ಪ್ರಾಧಿಕಾರಕ್ಕೆ ಅಗತ್ಯವಾಗಿರುತ್ತದೆ. ಆದಕಾರಣ ಆಸಕ್ತ ನಿವೃತ್ತ ಭೂ ಮಾಪಕರು ದಿನಾಂಕ 04.11.2017ರೊಳಗೆ ಖುದ್ದಾಗಿ ಆಯುಕ್ತರು, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ, ಮೈಸೂರು ರವರಿಗೆ ಅರ್ಜಿ ಸಲ್ಲಿಸತಕ್ಕದ್ದು. ಮಾಹೆಯಾನ ಗೌರವಧನ ರೂ.15,000/- (ಹದಿನೈದು ಸಾವಿರ ಮಾತ್ರ) ಹೊರತುಪಡಿಸಿ ಇತರೆ ಯಾವುದೇ ಭತ್ಯೆ ಇರುವುದಿಲ್ಲ.

(ಪಿ.ಎಸ್.ಕಾಂತರಾಜ್)
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

ಸಂಖ್ಯೆ: ಅಆಸಶಾ/55/2017-18 ದಿನಾಂಕ: 17.10.2017
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವತಿಯಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ದಿನಾಂಕ: 17.10.2017ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧ್ರುವಕುಮಾರ್ ರವರು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಶ್ರೀ.ಜಿ.ಟಿ.ದೇವೇಗೌಡ ರವರು ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿರುತ್ತಾರೆ. ಕಾಮಗಾರಿಗಳ ವಿವರ ಈ ಕೆಳಕಂಡಂತಿದೆ.

ಕ್ರ.ಸಂ.     ಕಾಮಗಾರಿಗಳ ವಿವರ     ಅಂದಾಜು ಮೊತ್ತ (ರೂ ಲಕ್ಷಗಳಲ್ಲಿ)     ಗುತ್ತಿಗೆದಾರರ ಹೆಸರು
1. ಟಿ.ಎನ್.ಪುರ ರಸ್ತೆಯಿಂದ ಲಲಿತಾದ್ರಿಪುರ ಗ್ರಾಮಕ್ಕೆ ಹೋಗುವ ರಸ್ತೆಗೆ ಗಿರಿದರ್ಶಿನಿ ಬಡಾವಣೆ ಮಾರ್ಗವಾಗಿ ಸೇರುವ ಲಿಂಕ್ ರಸ್ತೆ ಅಭಿವೃದ್ಧಿ ಕಾಮಗಾರಿ. 99.00 ಶ್ರೀ.ಎನ್.ಶ್ರೀಕಂಠ
2 ಮೈಸೂರು ತಾಲ್ಲೂಕು ಆಲನಹಳ್ಳಿ ಎಸ್.ಸಿ ಕಾಲೋನಿಗೆ ಎನ್.ಹೆಚ್-212 ಮುಖಾಂತರ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿ 23.75 ಶ್ರೀ.ಎನ್.ಶ್ರೀಕಂಠ
3 ಮೈಸೂರು ನಗರದ ಚಾಮುಂಡಿ ಬೆಟ್ಟದ ಪೌರ ಕಾರ್ಮಿಕರ ಕಾಲೋನಿ ಹತ್ತಿರ ಇರುವ ಸ್ಮಶಾನ ಅಭಿವೃದ್ಧಿ ಕಾಮಗಾರಿ. 20.00 ಶ್ರೀ.ಕೆಂಪೇಗೌಡ

ಈ ಸಂದರ್ಭದಲ್ಲಿ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ.ಎಂ.ಕೆ.ಸೋಮಶೇಖರ್ ರವರು, ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ.ಆರ್.ಕೆ.ರಾಜು ರವರು, ಶ್ರೀ.ಬಿ.ಎನ್.ಪ್ರಭಾಕರ್ ರವರು, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ.ಜಗದೀಶ್ ರವರು, ಶ್ರೀ.ರವೀಂದ್ರ ಕುಮಾರ್ ರವರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ.ರಾಕೇಶ್ ಪಾಪಣ್ಣ ರವರು, ಶ್ರೀ.ಬೀರಿಹುಂಡಿ ಬಸವಣ್ಣ ರವರು, ಶ್ರೀ.ಮಾದೇಗೌಡ ರವರು, ಶ್ರೀ.ಜಿ.ಟಿ.ದೇವೇಗೌಡ ರವರ ಪುತ್ರ ಶ್ರೀ.ಜಿ.ಡಿ.ಹರೀಶ್ ಗೌಡ ರವರು ಹಾಗೂ ಪ್ರಾಧಿಕಾರದ ಸದಸ್ಯರಾದ ಶ್ರೀ.ಶಿವಮಲ್ಲು ರವರು ಮತ್ತು ಸ್ಥಳೀಯ ಮುಖಂಡರು ಹಾಗೂ ಬಡಾವಣೆಯ ನಿವಾಸಿಗಳು ಹಾಜರಿದ್ದರು.

ಸಹಿ/-
(ಡಿ.ಧುೃವಕುಮಾರ್)
ಅಧ್ಯಕ್ಷರು

 

ದಿನಾಂಕ: 12.10.2017
ರವೀಂದ್ರನಾಥ್ ಠಾಗೋರ್ (ಆರ್.ಟಿ.ನಗರ) ಬಡಾವಣೆ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾಗಿರುವಂತಹ ಫಲಾನುಭವಿಗಳಿಗೆ ದಿನಾಂಕ 16.10.2017 ರಂದು ಬೆಳಿಗ್ಗೆ 11:00 ಗಂಟೆಗೆ ಆರ್.ಟಿ.ನಗರ ಬಡಾವಣೆಯಲ್ಲಿ ಲಾಟರಿ ಮೂಲಕ ನಿವೇಶನ ಸಂಖ್ಯೆಯನ್ನು ನೀಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿರುತ್ತದೆ. ಫಲಾನುಭವಿಗಳಿಗೆ ಈಗಾಗಲೇ ಅಂಚೆ ಮೂಲಕ ತಿಳುವಳಿಕೆ ಪತ್ರವನ್ನು ಕಳುಹಿಸಲಾಗಿರುತ್ತದೆ. ತಿಳುವಳಿಕೆ ಪತ್ರ ಸ್ವೀಕೃತವಾಗಿರದಿದ್ದಲ್ಲಿ, ಫಲಾನುಭವಿಗಳು ಈ ಪ್ರಕಟಣೆಯನ್ನೇ ತಿಳುವಳಿಕೆ ಎಂದು ಭಾವಿಸಿ, ದಿನಾಂಕ 16.10.2017 ರಂದು ಬೆಳಿಗ್ಗೆ 11:00 ಗಂಟೆಗೆ ಆರ್.ಟಿ.ನಗರ ಬಡಾವಣೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಈ ಮೂಲಕ ತಿಳಿಯಪಡಿಸಿದೆ.

ಸಂಖ್ಯೆ: ಅಆಸಶಾ/54/2017-18 ದಿನಾಂಕ: 13.10.2017
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವತಿಯಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಗ್ರಾಮಗಳಲ್ಲಿನ ವಿವಿಧ ಕಾಮಗಾರಿಗಳಿಗೆ ದಿನಾಂಕ: 13.10.2017ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧ್ರುವಕುಮಾರ್ ರವರು ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾದ ಶ್ರೀ.ಎ.ಬಿ.ರಮೇಶ್ ಬಂಡಿಸಿದ್ದೇಗೌಡ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿರುತ್ತಾರೆ. ಕಾಮಗಾರಿ ವಿವರ ಈ ಕೆಳಕಂಡಂತಿದೆ.
ಕ್ರ.ಸಂ. ಕಾಮಗಾರಿಯ ಹೆಸರು ಅಂದಾಜು ಮೊತ್ತ
(ರೂ ಲಕ್ಷಗಳಲ್ಲಿ) ಗುತ್ತಿಗೆದಾರರ ಹೆಸರು
1. ಹುಲಿಕೆರೆ ಗ್ರಾಮದ ಎಂ.ಎನ್.ಪಿ.ಎಂ ಕಾಲೋನಿಗೆ ಸಂಪರ್ಕ ಕಲ್ಪಿಸುವ ಅಭಿವೃದ್ಧಿ ಕಾಮಗಾರಿ. 24.70 ಶ್ರೀ.ಬಿ.ವಿ.ನಾಗರಾಜು
2 ಶ್ರೀರಂಗಪಟ್ಟಣ ತಾಲ್ಲೂಕು, ಹುಲಿಕೆರೆ ಗ್ರಾಮದ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿ. 24.50 ಶ್ರೀ.ಮಹದೇವು ಬಿ
3 ಶ್ರೀರಂಗಪಟ್ಟಣ ತಾಲ್ಲೂಕು ಹುಲಿಕೆರೆ ಗ್ರಾಮದ ಜನತಾ ಕಾಲೋನಿ ರಸ್ತೆಗೆ ಚರಂಡಿ ನಿರ್ಮಾಣ ಕಾಮಗಾರಿ. 22.50 ಶ್ರೀ.ಮಹದೇವು ಬಿ
4 ಶ್ರೀರಂಗಪಟ್ಟಣ ತಾಲ್ಲೂಕು ಬೀಚನಕುಪ್ಪೆ (ಹೊಸ ಉಂಡವಾಡಿ) ಗ್ರಾಮದ ಮುಖ್ಯರಸ್ತೆಯಿಂದ ಸಿದ್ದಪ್ಪಾಜಿ ದೇವಸ್ಥಾನದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ. 24.50 ಶ್ರೀ.ಕೆ.ಮಹದೇವು
5 ಶ್ರೀರಂಗಪಟ್ಟಣ ತಾಲ್ಲೂಕು, ಬೀಚನಕುಪ್ಪೆ (ಹೊಸ ಉಂಡವಾಡಿ) ಗ್ರಾಮದ ಅಡ್ಡರಸ್ತೆಗಳ ಅಭಿವೃದ್ಧಿ ಕಾಮಗಾರಿ. 25.00
6 ಶ್ರೀರಂಗಪಟ್ಟಣ ತಾಲ್ಲೂಕು ಬೀಚನಕುಪ್ಪೆ (ಹೊಸ ಉಂಡವಾಡಿ) ಗ್ರಾಮದ ಸೋಮೆಗೌಡರ ಮನೆ ಹತ್ತಿರ ವೃತ್ತ ನಿರ್ಮಾಣ ಹಾಗೂ ರಸ್ತೆ ಅಗಲೀಕರಣ ಕಾಮಗಾರಿ. 24.00 ಶ್ರೀ ಕೆಂಪೇಗೌಡ
ಒಟ್ಟು 145.20

ಈ ಸಂದರ್ಭದಲ್ಲಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ.ಸುರೇಶ್‍ಬಾಬು ರವರು, ಸಹಾಯಕ ಅಭಿಯಂತರರಾದ ಶ್ರೀ.ಪುಟ್ಟನಾಗರಾಜು ಹಾಗೂ ಸ್ಥಳೀಯ ಮುಖಂಡರು ಮತ್ತು ಗ್ರಾಮದ ನಿವಾಸಿಗಳು ಹಾಜರಿದ್ದರು.

(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ., ಮೈಸೂರು.

ಸಂಖ್ಯೆ: ಅಆಸಶಾ/52/2017-18 ದಿನಾಂಕ: 09.10.2017
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವತಿಯಿಂದ ಶ್ರೀರಂಗಪಟ್ಟಣ ತಾಲ್ಲೂಕು ಮಜ್ಜಿಗೆಪುರ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಅಂದಾಜು ಮೊತ್ತ ರೂ.25.00 ಲಕ್ಷಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಸದರಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ದಿನಾಂಕ: 09.10.2017ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧ್ರುವಕುಮಾರ್ ರವರು ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾದ ಶ್ರೀ.ಎ.ಬಿ.ರಮೇಶ್ ಬಂಡಿಸಿದ್ದೇಗೌಡ ರವರು ನೆರವೇರಿಸಿರುತ್ತಾರೆ.
ಈ ಸಂದರ್ಭದಲ್ಲಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ.ಲಕ್ಷ್ಮೀಶ್ ರವರು ಸಹಾಯಕ ಅಭಿಯಂತರರುಗಳಾದ ಶ್ರೀ.ಶಿವಣ್ಣ ಮತ್ತು ಶ್ರೀಮತಿ.ಶ್ವೇತಾ ಹಾಗೂ ಗ್ರಾಮದ ಸ್ಥಳೀಯರುಗಳು ಹಾಜರಿದ್ದರು.

(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ., ಮೈಸೂರು.

ಸಂಖ್ಯೆ: ಅಆಸಶಾ/51/2017-18 ದಿನಾಂಕ: 06.10.2017
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವತಿಯಿಂದ ರಾಮಕೃಷ್ಣನಗರದಲ್ಲಿನ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಶ್ರೀ.ರಾಮಕೃಷ್ಣ ಪರಮಹಂಸ ರವರ ಅಮೃತ ಶಿಲೆಯ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡುವ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು, ಅಮೃತ ಶಿಲೆ ಪ್ರತಿಷ್ಠಾಪನೆ ಬಗ್ಗೆ ಅಭಿವೃದ್ಧಿ ಕಾಮಗಾರಿಯನ್ನು ದಿನಾಂಕ: 06.10.2017ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧ್ರುವಕುಮಾರ್ ರವರು ಅಧಿಕಾರಿಗಳೊಂದಿಗೆ ಕಾಮಗಾರಿಯ ಪರಿಶೀಲನೆ ಮಾಡಿರುತ್ತಾರೆ.
ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಶ್ರೀ.ಪಿ.ಎಸ್.ಕಾಂತರಾಜು ರವರು ಅಧೀಕ್ಷಕ ಅಭಿಯಂತರರಾದ ಶ್ರೀ.ಶಿವಕುಮಾರ್ ರವರು, ಕಾರ್ಯಪಾಲಕ ಅಭಿಯಂತರರಾದ ಶ್ರೀ.ರಾಜು ಮತ್ತು ಶ್ರೀ.ಬಿ.ಎನ್.ಪ್ರಭಾಕರ್ ರವರು, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ.ಟಿ.ಕೆ.ರವಿ ಹಾಗೂ ಪ್ರಾಧಿಕಾರದ ಸದಸ್ಯರಾದ ಶ್ರೀ.ಶಿವಮಲ್ಲು ರವರು ಮತ್ತು ಸ್ಥಳೀಯರು ಹಾಜರಿದ್ದರು.
(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ., ಮೈಸೂರು.

ಸಂಖ್ಯೆ: ಅಆಸಶಾ/53/2017-18  ದಿನಾಂಕ: 12.10.2017
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವತಿಯಿಂದ ಶ್ರೀರಾಂಪುರ 3ನೇ ಹಂತದಲ್ಲಿ ಬರುವ ದೊಡ್ಡ ಮೋರಿಗೆ ಸೇತುವೆ ನಿರ್ಮಾಣ (ಮೈಸೂರು ಮಾನಂದವಾಡಿ ಮುಖ್ಯರಸ್ತೆ) ಕಾಮಗಾರಿಯನ್ನು ಅಂದಾಜು ಮೊತ್ತ ರೂ.1.00 ಕೋಟಿಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಸದರಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ದಿನಾಂಕ: 12.10.2017ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧ್ರುವಕುಮಾರ್ ರವರು ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಶ್ರೀ.ಎಂ.ಕೆ.ಸೋಮಶೇಖರ್ ರವರು ನೆರವೇರಿಸಿರುತ್ತಾರೆ.
ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಶ್ರೀ.ಬಿ.ಎನ್.ಪ್ರಭಾಕರ್ ರವರು, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ.ಭಾಸ್ಕರ್ ರವರು ಸಹಾಯಕ ಅಭಿಯಂತರರುಗಳಾದ ಶ್ರೀ.ಸಿ.ಮಹೇಶ್ ಮತ್ತು ಶ್ರೀ.ನಂಜುಂಡೇಗೌಡ ಹಾಗೂ 13ನೇ ವಾರ್ಡಿನ ನಗರ ಪಾಲಿಕೆ ಸದಸ್ಯರಾದ ಶ್ರೀ.ಕೆಂಪಣ್ಣ ರವರು ಹಾಗೂ ಸ್ಥಳೀಯ ಮುಖಂಡರುಗಳು, ಬಡಾವಣೆಯ ನಿವಾಸಿಗಳು ಹಾಜರಿದ್ದರು.
ಸಹಿ/-
(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ., ಮೈಸೂರು.

 
12/09/2017 
- Extension of Time - Click for information 

RT Nagar - Final List
PDF Format (Click the dimension given below to view the PDF File)

 1. 20 x 30

 2. 30 x 40

 3. 40 x 60

 4. 50 x 80

RT Nagar Cuttoff List     

 

ಸಂಖ್ಯೆ: ಅಆಸಶಾ/50/2017-18 ದಿನಾಂಕ: 27.09.2017
ಮೈಸೂರಿನಲ್ಲಿ ಭಾರೀ ಮಳೆ ಆಗಿರುವುದರಿಂದ, ಬೋಗಾದಿ ಕೆರೆ ತುಂಬಿ ಕೋಡಿ ಹರಿದಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿರುವ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧ್ರುವಕುಮಾರ್ ರವರು, ಆಯುಕ್ತರಾದ ಶ್ರೀ.ಪಿ.ಎಸ್.ಕಾಂತರಾಜು ಹಾಗೂ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಅಭಿಯಂತರರು ದಿನಾಂಕ: 26.09.2017ರಂದು ಸ್ಥಳ ತನಿಖೆ ಮಾಡಿದ್ದು, ಸದರಿ ಸ್ಥಳದಲ್ಲಿ ಸಾರ್ವಜನಿಕರ ಕೋರಿಕೆಯಂತೆ ಅಗತ್ಯ ಕಾಮಗಾರಿಗಳನ್ನು ತುರ್ತಾಗಿ ನಿರ್ವಹಣೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗೆ ಆದೇಶಿಸಿರುತ್ತಾರೆ. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಸಾರ್ವಜನಿಕರು ಹಾಜರಿರುತ್ತಾರೆ.
ನಂತರ ದಟ್ಟಗಳ್ಳಿ 3ನೇ ಹಂತ ಬಡಾವಣೆಯ ರಿಂಗ್ ರಸ್ತೆ ಸಮೀಪವಿರುವ ಬಡಾವಣೆಗೆ ಭೇಟಿ ನೀಡಿದ್ದು, ಸದರಿ ಬಡಾವಣೆಯಲ್ಲಿನ ಮನೆಗಳಿಗೆ ಮಳೆ ನೀರು ತುಂಬಿಕೊಂಡಿರುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದು, ಈ ಬಡಾವಣೆಗೆ ಅಗತ್ಯ ಕಾಮಗಾರಿಯನ್ನು ತುರ್ತಾಗಿ ನಿರ್ವಹಿಸುವಂತೆಯೂ ಸಹ ತಿಳಿಸಿದರು.

(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ., ಮೈಸೂರು.

 

ಸಂಖ್ಯೆ :ಮೈ.ನ.ಪ್ರಾ/ಆಆಸಶಾ/2017-18
ದಿನಾಂಕ 15.08.2017ರಂದು ಮೈಸೂರು ನಗರಾಭಿವೃಧ್ಧಿ ಪ್ರಾಧಿಕಾರದಲ್ಲಿ 71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಅಧ್ಯಕ್ಷರಾದ ಶ್ರೀ ದ್ರುವಕುಮಾರ್ ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯರು, ಆಯುಕ್ತರಾದ ಡಾ|| ಎಂ.ಮಹೇಶ್, ಅಧೀಕ್ಷಕ ಅಭಿಯಂತರರಾದ ಶ್ರೀ ಶಿವಕುಮಾರ್, ನಗರ ಯೋಜಕ ಸದಸ್ಯರಾದ ಶ್ರೀ ಗಿರೀಶ್, ಕಾರ್ಯದರ್ಶಿ ಶ್ರೀಮತಿ ಎಂ.ಕೆ.ಸವಿತ ಹಾಗೂ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಡಾ|| ಎಂ.ಮಹೇಶ್)
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

01.08.2017 - ಸ್ಪಷ್ಠೀಕರಣ
ಲಲಿತಾದ್ರಿ ನಗರ (ಉತ್ತರ) ಬಡಾವಣೆಯಲ್ಲಿ ನಿವೇಶನಗಳ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿಗಳ ಆಹ್ವಾನಿಸಿ ಪ್ರಕಟಣೆ :ಮೈನಪ್ರಾ/ಲಲಿತಾದ್ರಿನಗರ (ಉತ್ತರ) ಪ್ರಕಟಣೆ ಸಂಖ್ಯೆ-1/2017-18, ದಿನಾಂಕ 26.07.2017ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಸದರಿ ಅಧಿಸೂಚನೆಯ ಸಂಬಂಧದಲ್ಲಿ ವಿವಿಧ ಪ್ರವರ್ಗಗಳಡಿ ಕ್ಲೇಮು ಮಾಡುವವರು ಅರ್ಜಿ ಶುಲ್ಕ, ಮುಂಗಡ ಠೇವಣಿ ಹಾಗೂ ನೋಂದಣಿ ಶುಲ್ಕ ಪಾವತಿಸುವ ವಿಚಾರದಲ್ಲಿ ಈ ಕೆಳಕಂಡಂತೆ ಸ್ಪಷ್ಠೀಕರಣ ನೀಡಲಾಗಿದ - Click  to View PDF File 

ಪ್ರಕಟಣೆ :ಮೈನಪ್ರಾ/ಲಲಿತಾದ್ರಿನಗರ (ಉತ್ತರ) ಪ್ರಕಟಣೆ ಸಂಖ್ಯೆ-/2017-18 ದಿನಾಂಕ 26.07.2017
ಲಲಿತಾದ್ರಿ ನಗರ (ಉತ್ತರ) ಬಡಾವಣೆಯಲ್ಲಿ ನಿವೇಶನಗಳ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿಗಳ ಆಹ್ವಾನ
ಅಧಿಸೂಚನೆ
 
  Click to download Notification 

Provisional Seniority List of  RT Nagar applicants       Cuttoff List 

ಆರ್.ಟಿ.ನಗರ ನಿವೇಶನ ಹಂಚಿಕೆ ಪ್ರಕಟಣೆ: 1/2011-12 ದಿನಾಂಕ 19.09.2011
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ 1991 ರಿಂದ 2011 ರವರೆಗೆ ವಿವಿಧ ಬಡಾವಣೆಗಳಿಗೆ ಅರ್ಜಿಯನ್ನು ಸ್ವೀಕರಿಸಿರುವ ಅಧಿಸೂಚನೆಯ ವಿವರ

 

ಸಂಖ್ಯೆ: ಅಆಸಶಾ/45/2017-18 ದಿನಾಂಕ: 10.08.2017
ಶ್ರೀಕೃಷ್ಣಜನ್ಮಾಷ್ಠಮಿ ಪ್ರಯುಕ್ತ ದಿನಾಂಕ: 14.08.2017ರಂದು ಬೆಳಿಗ್ಗೆ 11.00 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸದರಿ ಕಾರ್ಯಕ್ರಮದಲ್ಲಿ 12 ವರ್ಷದೊಳಗಿನ ಮಕ್ಕಳುಗಳು ಶ್ರೀಕೃಷ್ಣ, ರಾಧೆ ಮತ್ತು ಯಶೋಧರೆಯರ ವೇಷಭೂಷಣ ಧರಿಸಿ ಭಾಗವಹಿಸುವವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧ್ರುವಕುಮಾರ್ ರವರು ಸೂಕ್ತ ನಗದು ಬಹುಮಾನವನ್ನು ನೀಡುವರು.
ಸೂಚನೆ:-
ಸದರಿ ಕಾರ್ಯಕ್ರಮಕ್ಕೆ ವೇಷಭೂಷಣ ಧರಿಸಿ ಆಗಮಿಸುವ ಮಕ್ಕಳು ಬೆಳಿಗ್ಗೆ 10.00 ಗಂಟೆಯ ಒಳಗೆ ಹಾಜರಾಗುವಂತೆ ತಿಳಿಸಿದೆ.
ಸಹಿ/-
(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ., ಮೈಸೂರು.

ಸಂಖ್ಯೆ ಮೈನಪ್ರಾ/ಆಆಸಶಾ/ಪ.ಪ್ರ/2017-18 07.08.2017
ಮೈಸೂರು ತಾಲ್ಲೂಕು ಕಸಬಾ ಹೋಬಳಿ ಬೋಗಾಧಿ 3ನೇ ಹಂತ ಬಡಾವಣೆ ಸರ್ವೆ ನಂ-57ರ 4-21 ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ, ಮುಳ್ಳು ತಂತಿ ಬೇಲಿ, ಎ.ಸಿ ಶೀಟ್ ಶೆಡ್ಡು ಹಾಗೂ ನಾಮಫಲಕವನ್ನು ದಿನಾಂಕ 07.08.2017ರಂದು ಬೆಳಗ್ಗೆ ಪೊಲೀಸ್ ರಕ್ಷಣೆಯೊಂದಿಗೆ ನೆಲಸಮಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆದುಕೊಂಡು ಪ್ರಾಧಿಕಾರದ ನಾಮಫಲಕವನ್ನು ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರಾದ ಬಿ.ಎನ್.ಪ್ರಭಾಕರ್, ವಲಯ ಅಧಿಕಾರಿ ಎಂ.ಪಿ.ದಿನೇಶ್, ಸಹಾಯಕ ಅಭಿಯಂತರಾದ ಉಮೇಶ್ ಮತ್ತು ರವಿಕುಮಾರ್, ಸರಸ್ವತಿಪುರಂ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ಹಾಗೂ ಇತರೆ ಸಿಬ್ಬಂದಿಗಳು ಹಾಜರಿದ್ದರು.
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

ಸಂಖ್ಯೆ ಮೈನಪ್ರಾ/ಆಆಸಶಾ/2017-18 20.06.2017

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಆರ್.ಟಿ.ನಗರ ನಿವೇಶನ ಹಂಚಿಕೆ ಪ್ರಕಟಣೆ-1/2011-12, ದಿ:19.09.2011ರ ರೀತ್ಯಾ ಹೊರಡಿಸಿದ್ದ ಪ್ರಕಟಣೆಗೆ ಅನುಗುಣವಾಗಿ ಆರ್.ಟಿ.ನಗರ ಬಡಾವಣೆಯಲ್ಲಿ ನಿವೇಶನ ಅಪೇಕ್ಷಿಸಿ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಜ್ಯೇಷ್ಠತಾ ಪಟ್ಟಿಯನ್ನು ಈ ಹಿಂದಿನ ಪ್ರಯತ್ನಗಳ ಸಂಖ್ಯೆಗಳನ್ನು ಆಧರಿಸಿ ದಿನಾಂಕ 20.06.2017ರಂದು ಪ್ರಕಟಿಸಲಾಗಿದೆ. ಇದನ್ನು ಪ್ರಾಧಿಕಾರದ ವೆಬ್‍ಸೈಟ್ (www.mudamysore.gov.in) ಮತ್ತು ಪ್ರಾಧಿಕಾರದ ಪ್ರಕಟಣಾ ಫಲಕದಲ್ಲಿಯೂ ಸಹ ಪ್ರಕಟಿಸಲಾಗಿದೆ.

ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ (ನಿವೇಶನ ಹಂಚಿಕೆ) ನಿಯಮಗಳನ್ವಯ ಪ್ರಯತ್ನಗಳ ಜೇಷ್ಠತೆ ಹಾಗೂ ವಸತಿ/ನಿವೇಶನ ರಹಿತರನ್ನು ಪರಿಗಣಿಸಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ಸಿದ್ದಪಡಿಸಿ, ಅರ್ಜಿದಾರರ ಹೆಸರು, ಜನ್ಮ ದಿನಾಂಕ, ವಿಳಾಸ, ಅರ್ಜಿ ಸಂಖ್ಯೆ ಮತ್ತು ಪ್ರಯತ್ನಗಳ ಸಂಖ್ಯೆಯೊಂದಿಗೆ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.

ಪ್ರಯತ್ನಗಳ ಜೇಷ್ಠತೆ, ಜನ್ಮ ದಿನಾಂಕ, ಪ್ರವರ್ಗ ವiತ್ತು ಮೀಸಲಾತಿ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಪ್ರಕಟಣಾ ದಿನಾಂಕದಿಂದ 10 ದಿನಗಳೊಳಗಾಗಿ (30.06.2017ರೊಳಗೆ) ಕಾರ್ಯದರ್ಶಿಗಳು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಇವರಿಗೆ ಬೆಳಗ್ಗೆ 11.00 ರಿಂದ 2.00 ಗಂಟೆವರೆಗೆ ಅಗತ್ಯ ದಾಖಲಾತಿಗಳೊಂದಿಗೆ ಲಿಖಿತವಾಗಿ ಹಾಗೂ ಖುದ್ದು ಹಾಜರಾಗಿ ಸಲ್ಲಿಸಲು ತಿಳಿಸಿದೆ.

ಒಂದು ವೇಳೆ ಅರ್ಜಿದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳು ಸುಳ್ಳು ಮತ್ತು ತಪ್ಪು ಮಾಹಿತಿಗಳಿಂದ ಕೂಡಿದೆ ಎಂಬುದು ಕಂಡುಬಂದಲ್ಲಿ ಅಂತಹ ಅರ್ಜಿದಾರರ ಅರ್ಜಿಗಳನ್ನು ಹಂಚಿಕೆಯಿಂದ ಕೈಬಿಡಲಾಗುವುದು. ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯಲ್ಲಿರುವ ಅರ್ಜಿದಾರರು ಈಗಾಗಲೇ ಕರ್ನಾಟಕ ರಾಜ್ಯದಲ್ಲಿರುವ ಯಾವುದೇ ಪ್ರಾಧಿಕಾರಗಳಿಂದ, ಕರ್ನಾಟಕ ಗೃಹ ಮಂಡಳಿ ಅಥವಾ ಯಾವುದೇ ಸರ್ಕಾರದ ಏಜೆನ್ಸಿ ಅಥವಾ ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ಅಭಿವೃದ್ದಿಪಡಿಸಿದ ಖಾಸಗಿ ಬಡಾವಣೆಗಳಿಂದಾಗಲೀ ನಿವೇಶನ ಅಥವಾ ಮನೆಯನ್ನು ಪಡೆದಿದ್ದಲ್ಲಿ ಅಂಥವರಿಗೆ ನಿವೇಶನ ಹಂಚಿಕೆ ಮಾಡಲು ಅವಕಾಶವಿರುವುದಿಲ್ಲ. ಈ ರೀತಿ ನಿವೇಶನ ಅಥವಾ ಮನೆ ಪಡೆದು ಈ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ಅರ್ಜಿಯನ್ನು ವಾಪಸ್ಸು ಪಡೆಯಲು ಸೂಚಿಸಿದೆ.

ಒಂದು ವೇಳೆ ಮೇಲ್ಕಂಡಂತೆ ನಿವೇಶನ ಅಥವಾ ಮನೆಯನ್ನು ಪಡೆದಿದ್ದಾಗ್ಯೂ ಈ ಪ್ರಾಧಿಕಾರದಿಂದ ಮತ್ತೊಮ್ಮೆ ನಿವೇಶನ ಹಂಚಿಕೆಯಾಗಿ ಮುಂದೆ ಪ್ರಾಧಿಕಾರದ ಗಮನಕ್ಕೆ ಬಂದಲ್ಲಿ ಅಂತಹ ಹಂಚಿಕೆದಾರರ ನಿವೇಶನವನ್ನು ಪ್ರಾಧಿಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವುದಲ್ಲದೇ ಅಂತಹವರ ವಿರುದ್ದ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು.

(ಡಾ|| ಎಂ.ಮಹೇಶ್)
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

 
 
 
 
Demand Survey Notification - 27/4/2017 - Kannada | English   
For Citizens who dream to own a house in Mysuru City, MUDA is planning to construct houses (flats) under "Affordable Housing Scheme" on the basis of demand. 
Click to Download Application 

No.MUDA/E.A.N/01/2017-18 - Date 27/04/2017 - English    Golden Chance for Site Buyers 

 

ಸಂಖ್ಯೆ: ಅಆಸಶಾ/31/2017-18
ದಿನಾಂಕ: 05.06.2017 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 133ನೇ ಜಯಂತಿ ಕಾರ್ಯಕ್ರಮದ ಪ್ರಯುಕ್ತ ಪ್ರಾಧಿಕಾರದ ಆವರಣದಲ್ಲಿರುವ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು ಹಾಗೂ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರಾಧಿಕಾರದ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಡಾ|| ಎಂ.ಮಹೇಶ್ ರವರು, ಅಧೀಕ್ಷಕ ಅಭಿಯಂತರರಾದ ಶ್ರೀ ಶಿವಕುಮಾರ್ ರವರು, ನಗರ ಯೋಜನಾ ಸದಸ್ಯರಾದ ಶ್ರೀ ಗಿರೀಶ್ ರವರು, ಕಾರ್ಯದರ್ಶಿ ಶ್ರೀಮತಿ ಎಂ.ಕೆ.ಸವಿತಾ ರವರು, ವಿಶೇಷ ಭೂಸ್ವಾಧೀನಾಧಿಕಾರಿ ಶ್ರೀಮತಿ ಚಂದ್ರಮ್ಮ ರವರು, ಮುಖ್ಯ ಲೆಕ್ಕಾಧಿಕಾರಿ ಶ್ರೀ ಮುತ್ತ ರವರು, ಪ್ರಾಧಿಕಾರದ ಸದಸ್ಯರಾದ ಶ್ರೀ ಸಂದೇಶ್ ಸ್ವಾಮಿ ರವರು ಹಾಗೂ ಎಲ್ಲಾ ಅಧಿಕಾರಿ ವರ್ಗ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.
(ಡಿ.ಧುೃವಕುಮಾರ್)
ಅಧ್ಯಕ್ಷರು

ಅಆಸಶಾ/282017-18 ದಿನಾಂಕ: 23.05.2017 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜಿ.ಟಿ.ದೇವೇಗೌಡ ರವರು ಮೈಸೂರು ತಾಲ್ಲೂಕು, ಜಯಪುರ ಹೋಬಳಿ, ಕೆ.ಸಾಲುಂಡಿ ಗ್ರಾಮದ ಒಳಚರಂಡಿ ಹಾಗೂ ಸಪ್ಟಿಂಕ್ ಟ್ಯಾಂಕ್ ನಿರ್ಮಾಣ ಕಾಮಗಾರಿಯನ್ನು (ಅಂದಾಜು ಮೊತ್ತ ರೂ. 100.00/- ಲಕ್ಷಗಳಾಗಿರುತ್ತದೆ) ಹಾಗೂ ಮೈಸೂರು ತಾಲ್ಲೂಕು, ಜಯಪುರ ಹೋಬಳಿ, ಬಡಗಲಹುಂಡಿ ಗ್ರಾಮದ ಒಳಚರಂಡಿ ಹಾಗೂ ಸಪ್ಟಿಂಕ್ ಟ್ಯಾಂಕ್ ನಿರ್ಮಾಣ ಕಾಮಗಾರಿಯ (ಅಂದಾಜು ಮೊತ್ತ ರೂ. 50.00/- ಲಕ್ಷಗಳಾಗಿರುತ್ತದೆ) ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಶ್ರೀ ಬಿ.ಎನ್.ಪ್ರಭಾಕರ್, ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಟಿ.ಕೆ.ರವಿ ಹಾಗೂ ಸಹಾಯಕ ಅಭಿಯಂತರರುಗಳು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಬೀರಿಹುಂಡಿ ಬಸವಣ್ಣ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ಗೌರಮ್ಮ ಸುಗ್ರೀವ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾಲೇಗೌಡ, ಯುವ ಮುಖಂಡರಾದ ಶ್ರೀ ಹರೀಶ್ ಗೌಡ, ನಿಕಟಪೂರ್ವ ಸದಸ್ಯರಾದ ಭಾಸ್ಕರ್ ಎಲ್ ಗೌಡ, ಮುಖಂಡರಾದ ಗೋಪಿ, ಗುತ್ತಿಗೆದಾರರಾದ ಶ್ರೀ ಎಲ್.ರಂಗರೆಡ್ಡಿ ಹಾಗೂ ಸ್ಥಳೀಯ ಪ್ರತಿನಿಧಿಗಳು ಹಾಜರಿದ್ದರು.

(ಡಿ.ಧುೃವಕುಮಾರ್)
ಅಧ್ಯಕ್ಷರು

 

ಸಂಖ್ಯೆ: ಆಆಸಶಾ/ಪ.ಪ್ರ/2017-18 22.05.2017

ಲಿಂಗಾಂಬುದಿ, ಯಡಹಳ್ಳಿ, ಚೌಡಹಳ್ಳಿ, ಹಾಲಾಳು, ಕೇರಗಳ್ಳಿ, ಕುರುಬಾರಹಳ್ಳಿ, ಮೈಸೂರು ಕಸಬಾ, ಸರ್ಕಾರಿ ಉತ್ತನಹಳ್ಳಿ, ಬಂಡಿಪಾಳ್ಯ, ಲಲಿತಾದ್ರಿಪುರ, ಚಿಕ್ಕಳ್ಳಿ ಮತ್ತು ಯಾಂದಹಳ್ಳಿ ಗ್ರಾಮಗಳಲ್ಲಿ ಭಾಗಶಃ ಜಮೀನುಗಳನ್ನು ಬಡಾವಣೆ ರಚನೆ ಉದ್ದೇಶಕ್ಕಾಗಿ ಪ್ರಾಧಿಕಾರವು ಭೂಸ್ವಾಧೀನಪಡಿಸಿಕೊಳ್ಳುವ ದಿಸೆಯಲ್ಲಿ ಈ ಹಿಂದೆ ಅಧಿಸೂಚನೆ ಹೊರಡಿಸಲಾಗಿತ್ತು. ಈತನ್ಮಧ್ಯೆ ಕೆಲವು ಭೂ ಮಾಲೀಕರು ಮಾನ್ಯ ನ್ಯಾಯಾಲಯದಿಂದ ಅವರಿಗೆ ಸಂಬಂಧಪಟ್ಟ ಜಮೀನಿಗೆ ಹೊರಡಿಸಿದಂತಹ ಅಧಿಸೂಚನೆಗೆ ರದ್ದತಿ ಆದೇಶ ಪಡೆದಿರುತ್ತಾರೆ. ಅದಲ್ಲದೇ ಸರ್ಕಾರವು ಕೆಲವು ಪ್ರಕರಣಗಳಲ್ಲಿ ಜಮೀನುಗಳನ್ನು ಭೂಸ್ವಾಧೀನದಿಂದ ಕೈಬಿಟ್ಟು ಆದೇಶ ಮಾಡಿರುತ್ತದೆ. ಈ ಹಿನ್ನೆಲೆಯಲ್ಲಿ ಉದ್ದೇಶಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿರುವುದಿಲ್ಲ.

ಸರ್ಕಾರದ ಇತ್ತೀಚಿನ ನಿಯಮಗಳಂತೆ ಮೇಲ್ಕಂಡ ಗ್ರಾಮಗಳ ಜಮೀನುಗಳನ್ನು 50:50ರ ಅನುಪಾತದಲ್ಲಿ ಅಭಿವೃದ್ದಿಪಡಿಸಿ ಹಂಚಿಕೆ ಮಾಡುವ ಸಂಬಂಧ ಸಮಾಲೋಚಿಸಲು ಮೊದಲನೇ ಹಂತವಾಗಿ ಮೇಲ್ಕಂಡ ಗ್ರಾಮಗಳ ಜಮೀನುಗಳಲ್ಲಿ ಮಾಲೀಕತ್ವ ಹೊಂದಿರುವ ಸಂಬಂಧಪಟ್ಟ ಗೃಹ ನಿರ್ಮಾಣ ಸಹಕಾರ ಸಂಘದವರೊಂದಿಗೆ ದಿನಾಂಕ 24.05.2017ರಂದು ಸಂಜೆ 4.00 ಗಂಟೆಗೆ ಪ್ರಾಧಿಕಾರದ ಸಭಾಂಗಣದಲ್ಲಿ ಮಾನ್ಯ ಅಧ್ಯಕ್ಷರು, ಮೈ.ನ.ಪ್ರಾ, ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ. ಸಂಬಂಧಪಟ್ಟ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರು/ಕಾರ್ಯದರ್ಶಿಗಳು ಈ ಸಭೆಗೆ ಹಾಜರಾಗುವಂತೆ ಈ ಪ್ರಕಟಣೆ ಮೂಲಕ ತಿಳಿಯಪಡಿಸಿದೆ.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

 

ಸಂಖ್ಯೆ: ಅಆಸಶಾ/26/2017-18
ದಿನಾಂಕ: 08.05.2017 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಹಾಗೂ ಚಾಮರಾಜ ಕ್ಷೇತ್ರದ ಶಾಸಕರಾದ ಶ್ರೀ ವಾಸು ರವರು ಮೈಸೂರು ನಗರದ ಮೇಟಗಳ್ಳಿ ಬಡಾವಣೆಯ ಪಕ್ಕದ ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಸದರಿ ಸ್ಮಶಾನಕ್ಕೆ 9.0ಘಿ5.50 ಮೀಟರ್ ಶೆಲ್ಟರ್ ಹಾಗೂ 250.00 ಮೀ ಉದ್ದದ ಕಾಂಪೌಂಡ್ ನಿರ್ಮಾಣದ ಕಾಮಗಾರಿಯ ಅಂದಾಜು ಮೊತ್ತ ರೂ. 24.99/- ಲಕ್ಷಗಳಾಗಿರುತ್ತದೆ.

ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಶ್ರೀ ಆರ್.ಕೆ.ರಾಜು, ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಲಕ್ಷ್ಮೀಶ್ ಹಾಗೂ ಸಹಾಯಕ ಅಭಿಯಂತರರುಗಳು ಹಾಗೂ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ರಮೇಶ್, ಮಾಜಿ ಸದಸ್ಯರಾದ ಶ್ರೀ ದೇವರಾಜ್, ಗುತ್ತಿಗೆದಾರರಾದ ಶ್ರೀ ಎನ್.ಉಮೇಶ್ ಹಾಗೂ ಸ್ಥಳೀಯ ಪ್ರತಿನಿಧಿಗಳು ಹಾಜರಿದ್ದರು.

(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ., ಮೈಸೂರು.

ಸಂಖ್ಯೆ: ಅಆಸಶಾ/25/2017-18 ದಿನಾಂಕ: 05.05.2017

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 2017-18ನೇ ಸಾಲಿನ ಆಯವ್ಯಯದ ವಿಶೇಷ ಸಭೆಯನ್ನು ದಿನಾಂಕ: 06.05.2017ರಂದು ಶನಿವಾರ ಪೂರ್ವಾಹ್ನ 11.00ಗಂಟೆಗೆ ಪ್ರಾಧಿಕಾರದ ಸಭಾಂಗಣದಲ್ಲಿ ಅಧ್ಯಕ್ಷರಾದ ಶ್ರೀ ಡಿ. ಧುೃವಕುಮಾರ್ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ. ಈ ಸಭೆಗೆ ಎಲ್ಲಾ ಪತ್ರಿಕಾ ಸಂಪಾದಕರು, ವರದಿಗಾರರು, ಮಾದ್ಯಮ ಮಿತ್ರರು ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.

ಡಿ.ಧುೃವಕುಮಾರ್
ಅಧ್ಯಕ್ಷರು
ಮೈ.ನ.ಪ್ರಾ ಮೈಸೂರು.

 

ಸಂಖ್ಯೆ: ಅಆಸಶಾ/24/2017-18 ದಿನಾಂಕ: 26.04.2017
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವತಿಯಿಂದ ನಿರ್ಮಿಸಲಾಗಿರುವ ರವೀಂದ್ರನಾಥ ಠಾಗೂರ್ ನಗರ (ಆರ್.ಟಿ.ನಗರ) ಬಡಾವಣೆಯಲ್ಲಿ ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡದಂತೆ ಬೆಂಗಳೂರಿನ ಉಚ್ಛ ನ್ಯಾಯಾಲಯದಲ್ಲಿ ಭೂ ಮಾಲೀಕರಾದ ಶ್ರೀ ಪಚ್ಚೇಗೌಡ ರವರು ದಾವೆ ಹೂಡಿದ್ದು, ಉಚ್ಛ ನ್ಯಾಯಾಲಯವು ಈ ದಾವೆಯನ್ನು ದಿನಾಂಕ: 24.04.2017ರಂದು ಇತ್ಯರ್ಥಪಡಿಸಿ ನಿವೇಶನ ಹಂಚಿಕೆ ಮಾಡಲು ಹಸಿರು ನಿಶಾನೆ ತೋರಿಸಿರುತ್ತದೆ. ಈ ಬಡಾವಣೆಯಲ್ಲಿ ವಿವಿಧ ಅಳತೆಯ 1680 (ಭೂ ಮಾಲೀಕರಿಗೆ ನೀಡಬೇಕಾದ ನಿವೇಶನಗಳು ಸೇರಿದಂತೆ) ನಿವೇಶನಗಳನ್ನು ಶೀಘ್ರದಲ್ಲೇ ಸಾರ್ವಜನಿಕರಿಗೆ ಹಂಚಿಕೆ ಮಾಡಲು ಕ್ರಮ ವಹಿಸಲಾಗುತ್ತಿದೆ.

ಲಲಿತಾದ್ರಿಪುರ, 1ನೇ ಹಂತ, ಉತ್ತರ ಬಡಾವಣೆಯಲ್ಲೂ ವಿವಿಧ ಅಳತೆಯ 541 ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲು ಪ್ರಕಟಣೆ ಹೊರಡಿಸುವ ಹಂತದಲ್ಲಿದೆ.

ಪ್ರಾಧಿಕಾರದಿಂದ ನಿವೇಶನಗಳನ್ನು ಸಾರ್ವಜನಿಕರಿಗೆ ಜೇಷ್ಠತೆ (ಸೀನಿಯಾರಿಟಿ) ಆಧಾರದ ಮೇಲೆ ನಿವೇಶನ ಹಂಚಿಕೆ ಮಾಡಲಿರುವುದರಿಂದ ಸಾರ್ವಜನಿಕರು ಮಧ್ಯವರ್ತಿಗಳ ಆಸೆ/ಆಮಿಷಗಳಿಗೆ ಒಳಗಾಗಿ ಯಾವುದೇ ರೀತಿಯ ಹಣವನ್ನು ನೀಡಿ ಮೋಸ ಹೋಗಬಾರದೆಂದೂ, ಇದಕ್ಕೆ ಪ್ರಾಧಿಕಾರವು ಜವಾಬ್ಧಾರಿಯಾಗುವುದಿಲ್ಲವೆಂದೂ ಈ ಮೂಲಕ ತಿಳಿಸಲಾಗಿದೆ.

ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ ಮೈಸೂರು.

ಸಂಖ್ಯೆ: ಅಆಸಶಾ/23 2017-18
ದಿನಾಂಕ:19.04.2017 ರಂದು ಮೈಸೂರು ತಾಲ್ಲೂಕು, ಹಿನಕಲ್ ಗ್ರಾಮದ ಆಶ್ರಯ ಬಡಾವಣೆಗೆ ಒಳಚರಂಡಿ ಕಲ್ಪಿಸುವ ಕಾಮಗಾರಿ ಅಂದಾಜು ವೆಚ್ಚ ರೂ. 25.00/- ಲಕ್ಷ ಹಾಗೂ ಮೈಸೂರು ನಗರ ಹೊರ ವರ್ತುಲ ರಸ್ತೆಯಿಂದ ಬ್ಯಾಂಕ್ ನೌಕರರ ಬಡಾವಣೆ ಮೂಲಕ ಹಾದುಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ ರೂ.22.75/- ಲಕ್ಷ ಹಾಗೂ ದಟ್ಟಗಳ್ಳಿ 3ನೇ ಹಂತ ಬಡಾವಣೆಯ ನಿ.ಸಂ.1000 ರಿಂದ 1500ರವರೆಗೆ ಸುತ್ತ ಮುತ್ತಲಿನ ರಸ್ತೆ ಮರು ಡಾಂಬರೀಕರಣ ಕಾಮಗಾರಿ ಅಂದಾಜು ಮೊತ್ತ ರೂ.25.00/- ಲಕ್ಷ, ಗುದ್ದಲಿ ಪೂಜೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್‍ರವರು ಹಾಗೂ ಶ್ರೀ ಜಿ.ಟಿ.ದೇವೇಗೌಡರು, ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು ನೇರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಕೇಶ್ ಪಾಪಣ್ಣ ಹಾಗೂ ಇತರ ಸದಸ್ಯರು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಇತರ ಮುಖಂಡರು, ನಿಕಟಪೂರ್ವ ಸದಸ್ಯರಾದ ಶ್ರೀ ಭಾಸ್ಕರ್ ಎಲ್ ಗೌಡರವರು, ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಶ್ರೀ ಆರ್.ಕೆ.ರಾಜು, ಶ್ರೀ ಬಿ.ಎನ್.ಪ್ರಭಾಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಸುರೇಶ್ ಬಾಬು, ಶ್ರೀ ದಿನೇಶ್, ಶ್ರೀ ಮಹೇಶ್ ಬಾಬು ಹಾಗೂ ಪ್ರಾಧಿಕಾರದ ಸಹಾಯಕ ಅಭಿಯಂತರರುಗಳು ಹಾಗೂ ಗುತ್ತಿಗೆದಾರರಾದ ಶ್ರೀ.ಕೆ.ವಿ.ರವಿಕೃಷ್ಣಕುಮಾರ್, ಶ್ರೀ ಎಲ್. ರಂಗಾರೆಡ್ಡಿ, ಸ್ಥಳೀಯ ಪ್ರತಿನಿಧಿಗಳು ಹಾಜರಿದ್ದರು.

ಸಂಖ್ಯೆ: ಅಆಸಶಾ/22/2016-17 ದಿನಾಂಕ: 27.02.2017
ದಿನಾಂಕ: 27.02.2017ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಸಾಮಾನ್ಯ ಸಭೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಉಪ ಸಭಾಪತಿಗಳಾದ ಶ್ರೀ ಮರಿತಿಬ್ಬೇಗೌಡರು, ಶ್ರೀ ಜಿ.ಟಿ.ದೇವೇಗೌಡರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರು, ಶ್ರೀ ಎಂ.ಕೆ.ಸೋಮಶೇಖರ್ ರವರು ಕೃಷ್ಣರಾಜ ಕ್ಷೇತ್ರದ ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ, ಶ್ರೀ ಸಂದೇಶ್ ನಾಗರಾಜು ರವರು ವಿಧಾನ ಪರಿಷತ್ ಸದಸ್ಯರು, ಶ್ರೀ ಸಂದೇಶ್ ಸ್ವಾಮಿ ಪ್ರಾಧಿಕಾರದ ಸದಸ್ಯರು, ಪ್ರಾಧಿಕಾರದ ಆಯುಕ್ತರಾದ ಶ್ರೀ.ಡಾ.ಎಂ.ಮಹೇಶ್, ನಗರ ಯೋಜನಾ ಸದಸ್ಯರಾದ ಶ್ರೀ ಎಂ.ಸಿ.ಶಶಿಕುಮಾರ್, ಅಧೀಕ್ಷಕ ಅಭಿಯಂತರರಾದ ಶ್ರೀ ಶಿವಕುಮಾರ್, ಶ್ರೀ ಎನ್.ನರಸಿಂಹೇಗೌಡ ಅಧೀಕ್ಷಕ ಅಭಿಯಂತರರು(ವಿ)ಚಾವಿಸನಿನಿ, ಕಾರ್ಯಪಾಲಕ ಅಭಿಯಂತರರಾದ ಶ್ರೀ ಸಿ.ಎನ್.ಕರಿಯಪ್ಪ ಕ.ನ.ನೀ.ಸ.ಮತ್ತು ಒ.ಚ.ಮಂಡಳಿ ರವರು ಹಾಗೂ ಪ್ರಾಧಿಕಾರದ ಕಾರ್ಯದರ್ಶಿಗಳು, ವಿಶೇಷ ಭೂಸ್ವಾಧೀನಾಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು ಹಾಜರಿದ್ದರು.

ಈ ದಿನದ ಸಭೆಯಲ್ಲಿ ಈ ಕೆಳಗೆ ನಮೂದಿಸಿರುವಂತೆ ಪ್ರಮುಖ ವಿಷಯಗಳಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.
1. 1991ನೇ ಸಾಲಿಗಿಂತ ಹಿಂದೆ ಮಂಜೂರಾಗಿರುವ ನಿವೇಶನಗಳಲ್ಲಿ ಮೂಲ ಮಂಜೂರಾತಿದಾರರು ಮನೆ ನಿರ್ಮಾಣ ಮಾಡದೇ ಹಕ್ಕುಪತ್ರ ಕೋರುವ ಪ್ರಕರಣಗಳಲ್ಲಿ ಉಪ ನೋಂದಣಾಧಿಕಾರಿಗಳ ಕಛೇರಿಯ ಚಾಲ್ತಿ ಮಾರ್ಗಸೂಚಿ ಬೆಲೆಯ ಶೇ 10% ರಷ್ಟು ದಂಡವನ್ನು ಪಾವತಿಸಿಕೊಳ್ಳಲು ತೀರ್ಮಾನಿಸಲಾಯಿತು.
2. ಮನೆ ನಿರ್ಮಿಸಿ/ನಿರ್ಮಿಸದೇ ಗುತ್ತಿಗೆ ಅವಧಿಯೊಳಗೆ ಮಾರಾಟ ಮಾಡಿ ಖರೀದಿದಾರರು ಕ್ರಯಪತ್ರ ಕೋರುವ ಪ್ರಕರಣಗಳಲ್ಲಿ ಕೊನೆಯ ಕ್ರಯಪತ್ರದ ಶೇ 50% ರಷ್ಟು ದಂಡಶುಲ್ಕ ಪಾವತಿಸಿಕೊಳ್ಳಲು ತೀರ್ಮಾನಿಸಲಾಯಿತು.
3. ಮನೆ ನಿರ್ಮಿಸಿ/ನಿರ್ಮಿಸದೆ ಗುತ್ತಿಗೆ ಅವಧಿ ಮುಕ್ತಾಯಗೊಂಡ ನಂತರ ಮಾರಾಟ ಮಾಡಿ ಖರೀದಿದಾರರು ಕ್ರಯಪತ್ರ ಕೋರುವ ಪ್ರಕರಣಗಳಲ್ಲಿ ಕೊನೆಯ ಕ್ರಯಪತ್ರದ ಶೇ 25% ರಷ್ಟು ದಂಡಶುಲ್ಕ ಪಾವತಿಸಿಕೊಳ್ಳಲು ತೀರ್ಮಾನಿಸಲಾಯಿತು.
4. ನೋಂದಾಯಿತ ಜಿ.ಪಿ.ಎ ಮುಖಾಂತರ ಖರೀದಿ ಮಾಡಿದ ಪ್ರಕರಣಗಳಲ್ಲಿ ಜಿ.ಪಿ.ಎ ಕ್ರಯದ ಅವಧಿಯ ಮಾರುಕಟ್ಟೆ ಬೆಲೆಯ ಶೇ 30% ರಷ್ಟು ದಂಡಶುಲ್ಕ ಪಾವತಿಸಿಕೊಳ್ಳಲು ತೀರ್ಮಾನಿಸಲಾಯಿತು.
5. ಹರಾಜು ಪ್ರಕರಣಗಳಲ್ಲಿ ಹಕ್ಕುಪತ್ರ ಪಡೆಯದೇ ಮಾರಾಟ ಮಾಡಿದ್ದಲ್ಲಿ ಖರೀದಿದಾರರು ಕ್ರಯಪತ್ರ ಕೋರುವ ಪ್ರಕರಣಗಳಲ್ಲಿ ಕೊನೆಯ ಕ್ರಯಪತ್ರದ ಶೇ 25% ರಷ್ಟು ದಂಡಶುಲ್ಕ ಪಾವತಿಸಿಕೊಳ್ಳಲು ತೀರ್ಮಾನಿಸಲಾಯಿತು.
6. ಮೂಲ ಮಂಜೂರಾತಿದಾರರು ಮನೆ ನಿರ್ಮಾಣ ಮಾಡದೇ ಹಕ್ಕು ಪತ್ರ ಕೋರುವ ಪ್ರಕರಣಗಳಲ್ಲಿ
1. 20x30 ಅಡಿ ಅಳತೆ ವರಗೆ ಶೇ.2.5%ರಷ್ಟು 2. 30x40 ಅಡಿ ಅಳತೆÀವರಗೆ ಶೇ.5%ರಷ್ಟು 3. 40x60 ಅಡಿ ಅಳತೆಯ ಮೇಲ್ಪಟ್ಟ ನಿವೇಶನಗಳಿಗೆ ಶೇ.10% ರಷ್ಟು ಚಾಲ್ತಿ ಉಪ ನೋಂದಣಾಧಿಕಾರಿಗಳ ಕಛೇರಿಯ ಮಾರ್ಗಸೂಚಿ ದರ ಪಾವತಿಸಿಕೊಳ್ಳಲು ತೀರ್ಮಾನಿಸಲಾಗಿದೆ ಹಾಗೂ ಇಡಬ್ಲ್ಯೂಎಸ್ ಮತ್ತು ಎಲ್.ಐ.ಜಿ ಮನೆಗಳಿಗೂ ಸಹ ಇದೇ ರೀತಿ ಶುಲ್ಕವನ್ನು ಪಾವತಿಸಿಕೊಳ್ಳಲು ಸಹ ತೀರ್ಮಾನಿಸಲಾಗಿದೆ.

7. ಇ.ಡಬ್ಲ್ಯೂ.ಎಸ್/ ಎಲ್.ಐ.ಜಿ ಮನೆಗಳಿಗೆ ಹೊಂದಿಕೊಂಡಂತಹ ತುಂಡು ಜಾಗಗಳಿಗೆ ಮಾತ್ರ ಆ ಬಡಾವಣೆಯ ಉಪ ನೋಂದಣಾಧಿಕಾರಿಗಳ ಚಾಲ್ತಿ ಮಾರ್ಗಸೂಚಿ ದರದ ಶೇ 25% ರಷ್ಟು ದರವನ್ನು ನಿಗದಿಪಡಿಸಲು ತೀರ್ಮಾನಿಸಲಾಯಿತು.

8. ಮಧ್ಯಂತರ ನಿವೇಶನಗಳ/ಮನೆಯ ಹಿಂಭಾಗ, ಮುಂಭಾಗ ಮತ್ತು ನಡುವೆ ಬರುವ ತುಂಡುಜಾಗದ ಪ್ರಕರಣಗಳಲ್ಲಿ ಆ ಬಡಾವಣೆ ಆ ಬಡಾವಣೆಯ ಉಪ ನೋಂದಣಾಧಿಕಾರಿಗಳ ಚಾಲ್ತಿ ಮಾರ್ಗಸೂಚಿ ದರವನ್ನು ನಿಗದಿಪಡಿಸಲು ತೀರ್ಮಾನಿಸಲಾಯಿತು.

9. 68 ನಾಗರೀಕ ಸೌಕರ್ಯ ನಿವೇಶನಗಳನ್ನು (ಸಿ.ಎ ನಿವೇಶನ) ಅರ್ಹ ವಿವಿಧ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಲು ತೀರ್ಮಾನಿಸಲಾಯಿತು.

10. ಪ್ರಾಧಿಕಾರದಲ್ಲಿ ಹಂಚಿಕೆಗೆ ಲಭ್ಯವಿರುವ ನಾಗರೀಕ ಸೌಕರ್ಯ ನಿವೇಶನಗಳನ್ನು (ಸಿ.ಎ. ನಿವೇಶನ) ಹಂಚಿಕೆ ಮಾಡಲು ಹೊಸದಾಗಿ ಪ್ರಕಟಣೆ ಹೊರಡಿಸಲು ತೀರ್ಮಾನಿಸಲಾಯಿತು.

11. ಬನ್ನಿಮಂಟಪದಲ್ಲಿರುವ ಬಾಲಭವನವನ್ನು ಖಾಸಗಿಯವರ ಪ್ರಯೋಜಕತ್ವದೊಡನೆ ಸಮಗ್ರವಾಗಿ ಅಭಿವೃದ್ಧಿಪಡಿಸಿ ಮನೋರಂಜನಾ ಪಾರ್ಕ್ ನಿರ್ಮಿಸಲು ಟೆಂಡರ್ ಆಹ್ವಾನಿಸಲು ತೀರ್ಮಾನಿಸಲಾಯಿತು.
 

ಸಂಖ್ಯೆ: ಅಆಸಶಾ/22/2016-17 ದಿನಾಂಕ: 22.02.2017

ದಿನಾಂಕ: 22.02.2017 ರಂದು ಚಾಮರಾಜನಗರ ಕ್ಷೇತ್ರದ ಸಂಸದರಾದ ಶ್ರೀ ಧುೃವನಾರಾಯಣ ರವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳ ಸುಪುತ್ರ ಡಾ|| ಯತೀಂದ್ರ ರವರು ಭುಗತಗಳ್ಳಿ ಗ್ರಾಮದ ವಿಶ್ವಕರ್ಮ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳಾದ ಶ್ರೀ ರಾಮಯ್ಯ, ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಶ್ರೀ ಆರ್.ಕೆ.ರಾಜು, ಪ್ರಾಧಿಕಾರದ ಸಹಾಯಕ ಅಭಿಯಂತರರುಗಳು, ಜಿಲ್ಲಾ ಪಂಚಾಯಿತಿ ಅಧಿಕಾರಿ ವರ್ಗ, ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಸ್ಥಳೀಯ ಪ್ರತಿನಿಧಿಗಳು ಹಾಜರಿದ್ದರು.

 
ಸಂಖ್ಯೆ: ಅಆಸಶಾ/16/2016-17 ದಿನಾಂಕ: 13.02.2017

ದಿನಾಂಕ: 13.02.2017ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಈ ಕೆಳಗೆ ನಮೂದಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿರುತ್ತಾರೆ.
ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಡಾ.ಎಂ.ಮಹೇಶ್, ಅಧೀಕ್ಷಕ ಅಭಿಯಂತರರಾದ ಶ್ರೀ ಶಿವಕುಮಾರ್, ಕಾರ್ಯಪಾಲಕ ಅಭಿಯಂತರರಾದ ಶ್ರೀ ಆರ್.ಕೆ.ರಾಜು, ಶ್ರೀ ಬಿ.ಎನ್.ಪ್ರಭಾಕರ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಅರುಣ್ ಕುಮಾರ್, ಶ್ರೀ ರಂಗಸ್ವಾಮಿ, ಶ್ರೀ ಜಗದೀಶ್, ಶ್ರೀ ಮಹೇಶ್ ಬಾಬು (ವಿದ್ಯುತ್), ಪ್ರಾಧಿಕಾರದ ಸಹಾಯಕ ಅಭಿಯಂತರರುಗಳು ಹಾಗೂ ಪ್ರಾಧಿಕಾರದ ನಿಕಟಪೂರ್ವ ಸದಸ್ಯರಾದ ಶ್ರೀ ಭಾಸ್ಕರ್ ಎಲ್ ಗೌಡರವರು ಮತ್ತು ಸ್ಥಳೀಯ ಪ್ರತಿನಿಧಿಗಳು ಹಾಜರಿದ್ದರು.

1. ಹೆಬ್ಬಾಳು 2ನೇ ಹಂತ ಬಡಾವಣೆಯಲ್ಲಿ ಪ್ರಾಧಿಕಾರಕ್ಕೆ ಸೇರಿದ ಕಲ್ಯಾಣ ಮಂಟಪ ಹಾಗೂ ಹೊಸದಾಗಿ ರೂ.301/- ಲಕ್ಷಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸುಸಜ್ಜಿತ ಕನ್‍ವೆನ್ಷನ್ ಹಾಲ್ ಕಾಮಗಾರಿಯ ಪ್ರಗತಿಯನ್ನು ಪರಿಶೀಲನೆ ಮಾಡಿ ಈ ಕಾಮಗಾರಿಯನ್ನು ಜೂನ್ ಮಾಹೆಯ ಒಳಗೆ ಪೂರ್ಣಗೊಳಿಸುವಂತೆಯೂ, ವಾಹನಗಳ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವನ್ನು ಕಲ್ಪಿಸಲು, ಈ ಕಲ್ಯಾಣ ಮಂಟಪದಲ್ಲಿ ಇರುವ ಕಲ್ಯಾಣಿಯನ್ನು ಅಭಿವೃದ್ಧಿಪಡಿಸಿ ಮಂಚೇಗೌಡನ ಕೊಪ್ಪಲಿನ ನಿವಾಸಿಗಳ ಉಪಯೋಗಕ್ಕೆ ಅಗತ್ಯವಿರುವ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಕ್ರಮವಹಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
2. ಬನ್ನಿಮಂಟಪ ಬಡಾವಣೆಯ ಪಂಜಿನ ಕವಾಯಿತು ಮೈದಾನದಲ್ಲಿ 22.000 ಪ್ರೇಕ್ಷಕರಿಗೆ ವೀಕ್ಷಿಸಲು ಸ್ಥಳಾವಕಾಶವಿದ್ದು ಈ ಸ್ಥಳಾವಕಾಶವನ್ನು ಸುಮಾರು 32.000 ಪ್ರೇಕ್ಷಕರಿಗೆ ವೀಕ್ಷಿಸಲು ಅನುವಾಗುವಂತೆ ಅಂದಾಜು ರೂ. 6.50 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿಯ ಪ್ರಗತಿಯ ಬಗ್ಗೆ ಪರಿಶೀಲಿಸಿ ಈ ಕಾಮಗಾರಿಯನ್ನು ಈ ಸಾಲಿನ ದಸರಾ ಮಹೋತ್ಸವಕ್ಕೆ ಮುಂಚಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
3. ಬನ್ನಿಮಂಟಪ ಬಡಾವಣೆಯಲ್ಲಿರುವ ಬಾಲಭವನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ ಈ ಬಾಲಭವನ ಪ್ರದೇಶವು ಸುಮಾರು 13 ಎಕರೆ ವಿಸ್ತೀರ್ಣ ಹೊಂದಿರುವುದರಿಂದ ಇಲ್ಲಿ ಸಾರ್ವಜನಿಕರು, ಪ್ರವಾಸಿಗರು, ಮಕ್ಕಳು ಪ್ರತಿನಿತ್ಯ ಭೇಟಿ ನೀಡಲು ಅನುವಾಗುವಂತಹ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಂತಹ ಸುಂದರವಾದ ಸುಸಜ್ಜಿತವಾದ ಉದ್ಯಾನವನವನ್ನು ನಿರ್ಮಿಸಲು ಅಗತ್ಯವಿರುವ ಎಲ್ಲಾ ಕ್ರಮವನ್ನು ತೆಗೆದುಕೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
4. ಸಿದ್ದಾರ್ಥನಗರ ಬಡಾವಣೆಯಲ್ಲಿ ಸುಮಾರು 1.20 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಪ್ರಾಧಿಕಾರಕ್ಕೆ ಸೇರಿದ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಈ ಕಲ್ಯಾಣ ಮಂಟಪವನ್ನು ಹೈಟೆಕ್‍ಮಾದರಿಯಲ್ಲಿ ನಿರ್ಮಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.

(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ., ಮೈಸೂರು.