Notice Board - Last Update on 24/02/2017

Click to View 2014 Notice Board Page

 
Projects
Your Property / Site Status
City Planning
Allotment of Sites
Catalog & Indexing
Notice Board
Meeting Proceedings
Notifications
Tender
Auctions
ACTS
Frequently Asked Questions
   
   
   
 
 
 
 
ಸಂಖ್ಯೆ: ಅಆಸಶಾ/24/2016-17
ದಿನಾಂಕ: 22.02.2017 ರಂದು ಚಾಮರಾಜನಗರ ಕ್ಷೇತ್ರದ ಸಂಸದರಾದ ಶ್ರೀ ಧುೃವನಾರಾಯಣ ರವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳ ಸುಪುತ್ರ ಡಾ|| ಯತೀಂದ್ರ ರವರು ವಾಜಮಂಗಲ ಗ್ರಾಮದ ನಾಯಕರ ಬೀದಿಯಲ್ಲಿ ವಾಲ್ಮೀಕಿ ಸಮುದಾಯ ಭವನದ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳಾದ ಶ್ರೀ ರಾಮಯ್ಯ, ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಶ್ರೀ ಆರ್.ಕೆ.ರಾಜು, ಪ್ರಾಧಿಕಾರದ ಸಹಾಯಕ ಅಭಿಯಂತರರುಗಳು, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿ ವರ್ಗದವರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಸ್ಥಳೀಯ ಪ್ರತಿನಿಧಿಗಳು ಹಾಜರಿದ್ದರು.

ಸಂಖ್ಯೆ: ಅಆಸಶಾ/23/2016-17 ದಿನಾಂಕ: 22.02.2017 ರಂದು ಚಾಮರಾಜನಗರ ಕ್ಷೇತ್ರದ ಸಂಸದರಾದ ಶ್ರೀ ಧುೃವನಾರಾಯಣ ರವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳ ಸುಪುತ್ರ ಡಾ|| ಯತೀಂದ್ರ ರವರು ಹಲಗಯ್ಯನಹುಂಡಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳಾದ ಶ್ರೀ ರಾಮಯ್ಯ, ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಶ್ರೀ ಆರ್.ಕೆ.ರಾಜು, ಪ್ರಾಧಿಕಾರದ ಸಹಾಯಕ ಅಭಿಯಂತರರುಗಳು, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿ ವರ್ಗದವರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು, ಸ್ಥಳೀಯ ಪ್ರತಿನಿಧಿಗಳು ಹಾಜರಿದ್ದರು.

 

ಸಂಖ್ಯೆ :ಮೈ.ನ.ಪ್ರಾ/ಅಆಸಶಾ/14/2016-17 ದಿನಾಂಕ 08.02.2017
ದಿನಾಂಕ: 08.02.2017ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಕುವೆಂಪುನಗರ ಜೆ.ಸಿ.ಎಸ್.ಟಿ ‘ಕೆ’ ಬ್ಲಾಕ್‍ನಲ್ಲಿ ಅಂದಾಜು ಮೊತ್ತ ರೂ. 3.50 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ (ಕಾವೇರಿ ಸ್ಕೂಲ್ ಹತ್ತಿರ) ಹೈಟೆಕ್ ಸ್ಮಶಾನದ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ಮಾಡಿದ್ದು, ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ತಿಳಿಸಿದರು.
ಕುವೆಂಪುನಗರದ ನ್ಯಾಯಾಲಯದ ಮುಂಭಾಗವಿರುವ ಪ್ರಾಧಿಕಾರಕ್ಕೆ ಸೇರಿದ ಸಿ.ಎ. ನಿವೇಶನದ ಪ್ರದೇಶವನ್ನು ವೀಕ್ಷಿಸಿದರು ಮತ್ತು ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದ ಪಕ್ಕದಲ್ಲಿ ನಿರ್ಮಿಸುತ್ತಿರುವ ಉದ್ಯಾನವನದ ಸ್ಥಳ ಪರಿಶೀಲನೆ ಸಹ ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಶ್ರೀ.ಬಿ.ಎನ್.ಪ್ರಭಾಕರ್, ವಲಯಾಧಿಕಾರಿಗಳಾದ ಶ್ರೀ. ಎಂ.ಪಿ.ದಿನೇಶ್ ಹಾಗೂ ಸಂಬಂಧಪಟ್ಟ ಗುತ್ತಿಗೆದಾರರ ಪ್ರತಿನಿಧಿಗಳು ಹಾಜರಿದ್ದರು.



 

 

ಸಂಖ್ಯೆ :ಮೈ.ನ.ಪ್ರಾ/ಅಆಸಶಾ/13/2016-17 ದಿನಾಂಕ 31.01.2017
ದಿನಾಂಕ: 31.01.2017ರ ಪೂರ್ವಾಹ್ನ 12.00 ಗಂಟೆ ಸಮಯದಲ್ಲಿ ಸೆಂಟ್ ಜೋಸೆಫ್ ಸಂಸ್ಥೆ ಜಯಲಕ್ಷ್ಮೀಪುರಂ ಮೈಸೂರು ಇಲ್ಲಿಗೆ ನೂತನವಾಗಿ ನೇಮಕಗೊಂಡಿರುವ ಫಾದರ್ ವಿಲಿಯಮ್ಸ್ ರವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ ಧುೃವಕುಮಾರ್ ರವರು ಶುಭ ಹಾರೈಕೆಯೊಂದಿಗೆ ಸನ್ಮಾನಿಸಿದರು ಈ ಸಂದರ್ಭದಲ್ಲಿ ಇತರೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಜರಿರುತ್ತಾರೆ.

 

 

 

 

 

 

 

ಸಂಖ್ಯೆ :ಮೈ.ನ.ಪ್ರಾ/ಆಆಸಶಾ/ಪ.ಪ್ರ/2016-17 ದಿನಾಂಕ 30.01.2017

ಹೊರವರ್ತುಲ ರಸ್ತೆ ಮತ್ತು ಮೈಸೂರು-ಹುಣಸೂರು ರಸ್ತೆ ಜಂಕ್ಷನ್‍ನಲ್ಲಿ ಸುಗಮ ಸಂಚಾರಕ್ಕೆ ಅನುವಾಗುವ ದೃಷ್ಠಿಯಿಂದ ಗ್ರೇಡ್ ಸಪರೇಟರ್ ಕಾಮಗಾರಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗುತ್ತಿದೆ. ಸದರಿ ಕಾಮಗಾರಿಯಲ್ಲಿನ ಹುಣಸೂರು ದಿಕ್ಕಿನ ಸೇವಾ ರಸ್ತೆಗಳ ಕಾಮಗಾರಿಯು ಹೊರವರ್ತುಲ ರಸ್ತೆ ಜಂಕ್ಷನ್‍ವರೆಗೆ ಪೂರ್ಣಗೊಂಡಿದ್ದು ಸಾರ್ವಜನಿಕರ ಬಳಕೆಗೆ ಸಿದ್ಧವಾಗಿದೆ. ಮುಖ್ಯ ರಸ್ತೆಯಲ್ಲಿ ಗ್ರೇಡ್ ಸಪರೇಟರ್‍ನ ಮುಖ್ಯ ಭಾಗದ ಕಾಮಗಾರಿಯನ್ನು ಕೈಗೊಳ್ಳಬೇಕಾಗಿದೆ. ಆದುದರಿಂದ ಸಾರ್ವಜನಿಕರು ಸೇವಾ ರಸ್ತೆಗಳನ್ನು ಉಪಯೋಗಿಸಲು ಹಾಗೂ ವಾಹನಗಳನ್ನು ನಿಧಾನವಾಗಿ ಚಾಲನೆ ಮಾಡಲು ಈ ಮೂಲಕ ಕೋರಲಾಗಿದೆ.

ಆಯುಕ್ತರು

 

 

ಸಂಖ್ಯೆ :ಮೈ.ನ.ಪ್ರಾ/ಆಆಸಶಾ/ಪ.ಪ್ರ/2016-17 ದಿನಾಂಕ 26.01.2017

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆವರಣದಲ್ಲಿ 68ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಶ್ರೀ.ದೃವಕುಮಾರ್‍ರವರು ದ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಡಾ||ಎಂ.ಮಹೇಶ್‍ರವರು ಅಧೀಕ್ಷಕ ಅಭಿಯಂತರಾದ ಶ್ರೀ.ಶಿವಕುಮಾರ್, ನಗರ ಯೋಜಕ ಸದಸ್ಯರಾದ ಶ್ರೀ.ಶಶಿಕುಮಾರ್, ಕಾರ್ಯದರ್ಶಿ ಶ್ರೀಮತಿ.ಎಂ.ಕೆ.ಸವಿತಾ, ಕಾರ್ಯಪಾಲಲಕ ಅಭಿಯಂತರುಗಳಾದ ಶ್ರೀ.ಆರ್.ಕೆ.ರಾಜಜು ಹಾಗೂ ಶ್ರೀ.ಬಿ.ಎನ್.ಪ್ರಭಾಕರ್, ಎಲ್ಲಾ ವಲಯ ಅಧಿಕಾರಿಗಳು, ಎಲ್ಲಾ ತಹಶೀಲ್ದಾರ್‍ಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಆಯುಕ್ತರು

 

 

 

ಸಂಖ್ಯೆ :ಮೈ.ನ.ಪ್ರಾ/ಅಆಸಶಾ/ಸಾ.ಪ್ರ/2016-17 ದಿನಾಂಕ 23.01.2017

ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ/ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಾಗರೀಕ ಸೌಕರ್ಯ ನಿವೇಶನ (ಸಿ.ಎ. ನಿವೇಶನ) ಗಳನ್ನು ಹಂಚಿಕೆ ಮಾಡಿದ್ದು, ಕೆಲವು ಸಿ.ಎ. ನಿವೇಶನಗಳನ್ನು ಪಡೆದಿರುವ ಸಂಘ ಸಂಸ್ಥೆಗಳು ವಾರ್ಷಿಕ ಗುತ್ತಿಗೆ ಕಂತು ಹಣವನ್ನು ಬಾಕಿ ಉಳಿಸಿಕೊಂಡಿದ್ದು ವಾರ್ಷಿಕ ಸಮಕಂತುಗಳು, ವಾರ್ಷಿಕ ಹೆಚ್ಚುವರಿ ಹಣ ತಹಲ್‍ವರೆಗೆ ಬಾಕಿಯಿರುವ ಒಟ್ಟು ಬಾಕಿ ಮೊಬಲಗನ್ನು ದಿನಾಂಕ.31.03.2017ರೊಳಗೆ ಪಾವತಿಸಲು ಅಂತಿಮ ಕಾಲಾವಕಾಶವನ್ನು ನೀಡಲಾಗಿದೆ. ಬಾಕಿ ಕಂತಿನ ಮೊಬಲಗನ್ನು ಪಾವತಿಸಲು ತಪ್ಪಿದಲ್ಲಿ ಯಾವುದೇ ನೋಟೀಸು ನೀಡದೆ ಸಿ.ಎ. ನಿವೇಶನಗಳನ್ನು ರದ್ದು ಮಾಡಲಾಗುವುದೆಂದು ಈ ಮೂಲಕ ತಿಳಿಯಪಡಿಸಲಾಗಿದೆ.

ಸೂಚನೆ: ಸಿ.ಎ. ನಿವೇಶನಗಳ ನಿಯಮಾವಳಿಗಳನ್ವಯ ನಿಗಧಿತ ಅವಧಿಯಲ್ಲಿ ಕಟ್ಟಡ ನಿರ್ಮಿಸಿ, ಮಂಜೂರಾತಿ ಉದ್ದೇಶಕ್ಕಾಗಿಯೇ ಉಪಯೋಗಿಸುತ್ತಿರುವ ಸಿ.ಎ. ನಿವೇಶನಗಳಿಗೆ ಮಾತ್ರ ಸದರಿ ಪ್ರಕಟಣೆಯು ಅನ್ವಯಿಸುತ್ತದೆ.

ಆಯುಕ್ತರು

 
 
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು.
ಸಂಖ್ಯೆ: ಅಆಸಶಾ/9/2016-17
ದಿನಾಂಕ: 20.12.2016ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧುೃವಕುಮಾರ್ ರವರು ಈ ಕೆಳಕಂಡ ವಲಯ-3ರ ವ್ಯಾಪ್ತಿಯಲ್ಲಿ ಬರುವ ವಿಜಯನಗರ 3ನೇ ಹಂತ ಮತ್ತು 4ನೇ ಹಂತ 1ನೇ ಘಟ್ಟ ಬಡಾವಣೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ಪ್ರಾಧಿಕಾರದ ಮಾಜಿ ಸದಸ್ಯರಾದ ಭಾಸ್ಕರ್ ಎಲ್ ಗೌಡ, ಕಾರ್ಯಪಾಲಕ ಅಭಿಯಂತರರಾದ ಶ್ರೀ ರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಹೇಮಂತ್ ಕುಮಾರ್, ಪ್ರಾಧಿಕಾರದ ಸಂಬಂಧಪಟ್ಟ ಸಹಾಯಕ ಅಭಿಯಂತರರುಗಳು ಇತರೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ರಾಕೇಶ್ ಪಾಪಣ್ಣ, ಗ್ರಾಮ ಪಂಚಾಯಿತಿ ಸದಸದ್ಯರುಗಳು ಹಾಗೂ ಇತರೆ ಸ್ಥಳೀಯ ಮುಖಂಡರುಗಳು ಹಾಗೂ ಈ ಬಡಾವಣೆಯ ನಿವಾಸಿಗಳು ಹಾಜರಿರುತ್ತಾರೆ.
1. ಮೈಸೂರು ನಗರದ ವಿಜಯನಗರ 3ನೇ ಹಂತ ‘ಇ’ ಬ್ಲಾಕ್, ಈ ಬಡಾವಣೆಯ ಯು.ಜಿ.ಡಿ ಯ ಮುಚ್ಚಳಗಳು ಹಾಳಾಗಿದ್ದು, ಕಸ ಕಡ್ಡಿಗಳು ಸೇರಿಕೊಂಡು ಒಳಚರಂಡಿಯ ನೀರು ಸರಾಗವಾಗಿ ಹರಿಯಲು ತೊಂದರೆಯಾಗಿರುವುದನ್ನು ಪರಿಶೀಲಿಸಲಾಯಿತು. ಈ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ, ಈ ಬಡಾವಣೆಯ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವ ಬಗ್ಗೆ ಈ ಬಡಾವಣೆಯ ನಿವಾಸಿಗಳು ತಿಳಿಸಿದ್ದರ ಮೇರೆಗೆ ಅಗತ್ಯವಿರುವ ಬೀದಿದೀಪಗಳನ್ನು ಅಳವಡಿಸಲು ಹಾಗೂ ರಸ್ತೆ ಹಾಳಾಗಿರುವುದನ್ನು ಸರಿಪಡಿಸುವಂತೆ, ಈ ಬಡಾವಣೆಯ ಡೆಬ್ರೀಸ್ ಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಸಹ ಕೈಗೆತ್ತಿಕೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

2. ಮೈಸೂರು ನಗರದ ವಿಜಯನಗರ 3ನೇ ಹಂತ ‘ಎಫ್’ ಬ್ಲಾಕ್ ಈ ಬಡಾವಣೆಯಲ್ಲಿ ಪ್ರಾಧಿಕಾರದಿಂದ ರಚಿಸಲಾಗಿರುವ ನಿವೇಶನಗಳ ಪ್ರದೇಶದಲ್ಲಿ ಒಂದು ಕಟ್ಟಡ ನಿರ್ಮಾಣ ವಾಗದಿರುವುದನ್ನು ಗಮನಿಸಿ ಈ ಪ್ರದೇಶದಲ್ಲಿ ಎಷ್ಟು ನಿವೇಶನಗಳನ್ನು ರಚಿಸಲಾಗಿದೆ, ನಿವೇಶನಗಳು ಮಂಜೂರಾಗಿರುವ ಬಗ್ಗೆ ಮಾಹಿತಿಯನ್ನು ನೀಡುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

3. ಮೈಸೂರು ನಗರದ ವಿಜಯನಗರ 4ನೇ ಹಂತ 1ನೇ ಘಟ್ಟ ಈ ಬಡಾವಣೆಯ ಉದ್ಯಾನವನವನ್ನು ಈ ಬಡಾವಣೆಯ ನಿವಾಸಿಗಳು ಉಪಯೋಗಿಸಲು ಅನುಕೂಲವಾಗುವಂತೆ ಅಗತ್ಯವಿರುವ ಸೌಕರ್ಯಗಳಾದ ಬೋರ್‍ವೆಲ್ ನಿರ್ವಹಣೆಗೆ ವಿದ್ಯುತ್ ಮೋಟಾರ್ ವ್ಯವಸ್ಥೆಯನ್ನು, ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಕಲ್ಪಿಸಲು ಹಾಗೂ ಉದ್ಯಾನವನವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳುವಂತೆ ಹಾಗೂ ಜನವರಿ ಮೊದಲನೇ ವಾರದೊಳಗೆ ಪೂರ್ಣಗೊಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಈ ಬಡಾವಣೆಗೆ ಕಾವೇರಿ ನೀರು ಸರಬರಾಜು ಮಾಡುವಂತೆ ಈ ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದರ ಮೇರೆಗೆ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಯವರೊಂದಿಗೆ ಈ ಬಡಾವಣೆಗೆ ಭೇಟಿ ನೀಡಿ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು.

ಸಂಖ್ಯೆ: ಅಆಸಶಾ/8/2016-17 ದಿನಾಂಕ: 30.11.2016
ದಿನಾಂಕ:30.11.2016ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಡಿ.ಧುೃವಕುಮಾರ್ ರವರು ಈ ಕೆಳಕಂಡ ವಲಯ-3 ಮತ್ತು 7ರ ವ್ಯಾಪ್ತಿಯಲ್ಲಿ ಬರುವ ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯರಾದ ಭಾಸ್ಕರ್ ಎಲ್ ಗೌಡ, ಕಾರ್ಯಪಾಲಕ ಅಭಿಯಂತರರಾದ ಶ್ರೀ ಬಿ.ಎನ್.ಪ್ರಭಾಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಹೇಮಂತ್ ಕುಮಾರ್, ಶ್ರೀ ಟಿ.ಕೆ.ರವಿ, ಮತ್ತು ಪ್ರಾಧಿಕಾರದ ಸಂಬಂಧಪಟ್ಟ ಸಹಾಯಕ ಅಭಿಯಂತರರುಗಳು ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಇತರೆ ಉಪಾಧ್ಯಾಯರುಗಳು, ಕಾಂಗ್ರೇಸ್ ಪಕ್ಷದ ಮುಖಂಡರುಗಳು ಹಾಗೂ ಇತರೆ ಸಾರ್ವಜನಿಕರುಗಳು ಹಾಜರಿರುತ್ತಾರೆ.
ವಲಯ-3
1. ವಿಜಯನಗರ 4ನೇ ಹಂತ, 2ನೇ ಫೇಸ್ ಬಡಾವಣೆಯಲ್ಲಿ ಪ್ರಾಧಿಕಾರದವತಿಯಿಂದ ನಿರ್ಮಿಸಲಾಗಿರುವ ಹೈಟೆಕ್ ಸ್ಮಶಾನದ ಎದುರು ಇರುವ ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ್ದು, ಅಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವುದನ್ನು ಗಮನಿಸಿ ಅತೀ ಶೀಘ್ರವಾಗಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬೋರ್‍ವೆಲ್ ಕೊರೆಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು ಹಾಗೂ ಈ ರಸ್ತೆಯಲ್ಲಿ ಬರುವ ಬೀದಿ ದೀಪಗಳನ್ನು ಪ್ರತಿ ದಿನವೂ ಸಂಜೆಯ ವೇಳೆಯಲ್ಲಿ ಬೆಳಗಿಸಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
2. ವಿಜಯನಗರ 4ನೇ ಹಂತ, 2ನೇ ಫೇಸ್, ಬಡಾವಣೆಯ ನಿವಾಸಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದ ಮಹಿಳೆಯರು ಈ ಬಡಾವಣೆಯಲ್ಲಿ ತಾವು ಅನುಭವಿಸುತ್ತಿರುವ ನೀರಿನ ವ್ಯವಸ್ಥೆಯು ಸಮರ್ಪಕವಾಗಿಲ್ಲದಿರುವ ಬಗ್ಗೆ ಹಾಗೂ ನಮಗೆ ನೀರು ಒಂದುವಾರವಾದರೂ ಬರುತ್ತಿಲ್ಲ, ಇಲ್ಲಿನ ರಸ್ತೆಯು ಹಾಳಾಗಿದ್ದು, ದೂಳಿನ ಸಮಸ್ಯೆಯ ಬಗ್ಗೆ ದೂರುಗಳನ್ನು ಅಧ್ಯಕ್ಷರಿಗೆ ಸಲ್ಲಿಸಿದರು.
• ಅಧ್ಯಕ್ಷರು ಈ ಬಡಾವಣೆಯ ನಿವಾಸಿಗಳ ಮನವಿಯಂತೆ ಸ್ಥಳ ಪರಿಶೀಲನೆ ಮಾಡಿ ಅತೀ ತುರ್ತಾಗಿ ನೀರಿನ ಸಮಸ್ಯೆಯನ್ನು ಬಗೆಹರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಾಗೂ ಇಲ್ಲಿನ ರಸ್ತೆಯ ಸಮಸ್ಯೆಯನ್ನು ಸಹ ಬಗೆಹರಿಸಲು ಕ್ರಮವಹಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
3. ವಿಜಯನಗರ 4ನೇ ಹಂತ, 2ನೇ ಫೇಸ್ ಬಡಾವಣೆಯಲ್ಲಿ ಹೂಟಗಳ್ಳಿ ಕೆ.ಹೆಚ್.ಬಿ ಕಾಲೋನಿಗೆ ಹೊಂದಿಕೊಂಡಂತೆ ಪ್ರಾಧಿಕಾರದ ವತಿಯಿಂದ ನಿರ್ಮಿಸಿರುವ ಓವರ್‍ಹೆಡ್ ಟ್ಯಾಂಕ್ ಇರುವ ಪ್ರದೇಶದ ಎದುರು ಖಾಲಿ ಇರುವ ಜಾಗದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಂಥಾಲಯ ನಿರ್ಮಿಸಿಕೊಡುವುದಾಗಿ ಅಲ್ಲಿನ ನಿವಾಸಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಈ ಜಾಗವನ್ನು ಕ್ರೀಡಾ ಚಟುವಟಿಕೆಗಳಿಗಾಗಿ ಅಭಿವೃದ್ಧಿಪಡಿಸಿಕೊಡಬೇಕಾಗಿ ಮನವಿಯನ್ನು ಮಾಡಿಕೊಂಡರು. ಅಲ್ಲಿನ ನಿವಾಸಿಗಳಿಗೆ ಈ ಸಂಬಂಧ ಒಂದು ಮನವಿ ಪತ್ರವನ್ನು ಸಲ್ಲಿಸುವಂತೆ ತಿಳಿಸಿದರು.
ವಲಯ -7
4. ಲಿಂಗಾಂಬುಧಿ ಗ್ರಾಮದಲ್ಲಿ ಮೈಸೂರು ಜಿಲ್ಲಾ ಎಂಪ್ಲಾಯೀಸ್ ಗೃಹ ನಿರ್ಮಾಣ ಸಹಕಾರ ಸಂಘದವರು ನಿರ್ಮಿಸಿರುವ ವಸತಿ ಬಡಾವಣೆಗೆ ಅಧ್ಯಕ್ಷರು ಭೇಟಿ ನೀಡಿದ ಸಂದರ್ಭದಲ್ಲಿ ಈ ಖಾಸಗಿ ಬಡಾವಣೆಯ ನಿವಾಸಿಗಳು ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಬೀದಿ ದೀಪಗಳು ಇಲ್ಲದೆ ತೊಂದರೆಯಾಗಿರುವ ಬಗ್ಗೆ ಮತ್ತು ಇಲ್ಲಿಗೆ ಸಾರಿಗೆ ವ್ಯವಸ್ಥೆಯು ಇಲ್ಲದಿರುವ ಬಗ್ಗೆ ಮನವಿ ಮಾಡಿಕೊಂಡರು.
ಸದರಿ ಬಡಾವಣೆಯಲ್ಲಿ ನೀರಿನ ಟ್ಯಾಂಕನ್ನು ಖಾಸಗಿ ಬಡಾವಣೆಯವರು ನಿರ್ಮಿಸಿರುವುದನ್ನು ಗಮನಿಸಿ ಸದ್ಯಕ್ಕೆ ಈ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಪಟ್ಟ ಅಭಿವೃದ್ಧಿದಾರರನ್ನು ಸಂಪರ್ಕಿಸಿ ಟ್ಯಾಂಕಿನಿಂದ ನೀರನ್ನು ಸರಬರಾಜು ಮಾಡಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಇಲ್ಲಿನ ನಿವಾಸಿಗಳು ಓಡಾಡಲು ಅನುಕೂಲವಾಗುವಂತೆ ಬೀದಿ ದೀಪಗಳ ಸೌಕರ್ಯವನ್ನು ಕಲ್ಪಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು ಮತ್ತು ಈ ಬಡಾವಣೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ., ಮೈಸೂರು.

ಸಂಖ್ಯೆ: ಅಆಸಶಾ/6/2016-17
ದಿನಾಂಕ: 22.11.2016ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಪ್ರಾಧಿಕಾರದವತಿಯಿಂದ ನಂಜನಗೂಡಿನಲ್ಲಿ ಕೈಗೆತ್ತ್ತಿಕೊಂಡಿರುವ ಈ ಕೆಳಕಂಡ ಕಾಮಗಾರಿಗಳ ಪ್ರಗತಿಯ ಸ್ಥಳ ಪರಿಶೀಲನೆಯನ್ನು ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಡಾ.ಎಂ.ಮಹೇಶ್, ಕಾರ್ಯಪಾಲಕ ಅಭಿಯಂತರರಾದ ಶ್ರೀ.ಬಿ.ಎನ್.ಪ್ರಭಾಕರ್, ಪ್ರಾಧಿಕಾರದ ಸದಸ್ಯರಾದ ಶ್ರೀ.ಭಾಸ್ಕರ್ ಎಲ್ ಗೌಡ ವಲಯಾಧಿಕಾರಿಗಳಾದ ಶ್ರೀ. ಎಸ್.ಕೆ.ಭಾಸ್ಕರ್, ಶ್ರೀ. ಮಹೇಶ್‍ಬಾಬು (ವಿದ್ಯುತ್) ಹಾಗೂ ಪ್ರಾಧಿಕಾರದ ಸಹಾಯಕ ಅಭಿಯಂತರರುಗಳು ಮತ್ತು ಕಾಂಗ್ರೇಸ್ ಪಕ್ಷದ ಮುಖಂಡರು/ಕಾರ್ಯಕರ್ತರು/ಜನಪ್ರತಿನಿಧಿಗಳು ಹಾಜರಿದ್ದರು.
ಸ್ಥಳ ಪರಿಶೀಲನಾ ಕಾರ್ಯಕ್ರಮದ ವಿವರಗಳು.
1.ನಂಜನಗೂಡು ಪಟ್ಟಣದ ಮೇದರಕೇರಿಯಲ್ಲಿ ನಡೆಯುತ್ತಿರುವ ಸಮುದಾಯ ಭವನದ ಮುಂದುವರೆದ ಕಾಮಗಾರಿ - ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.
2.ನಂಜನಗೂಡು ಪಟ್ಟಣದ ಮೇದರಕೇರಿಯಲ್ಲಿರುವ ಮುಸ್ಲಿಂ ಸ್ಮಶಾನವಿರುವ ಸ್ಥಳವನ್ನು ಪರಿಶೀಲಿಸಿ ಈ ಸ್ಮಶಾನದ ಸುತ್ತ ಕಾಂಪೌಂಡ್ ನಿರ್ಮಿಸಲು ಅಗತ್ಯ ಕ್ರಮವಹಿಸುವಂತೆ ಹಾಗೂ ಒಳಚರಂಡಿಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಅಲ್ಲೇ ನಿಂತಿರುವುದನ್ನು ಗಮನಿಸಿ ಈ ಸಂಬಂಧ ಸಾಧಕಬಾಧಕಗಳ ಬಗ್ಗೆ ಪರಿಶೀಲಿಸಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.
3.ನಂಜನಗೂಡು ಪಟ್ಟಣದ ಪೌರ ಕಾರ್ಮಿಕರ ಕಾಲೋನಿಯ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಅಂದಾಜು ವೆಚ್ಚ – ರೂ.30.00 ಲಕ್ಷ ಮತ್ತು ನಂಜನಗೂಡು ಪಟ್ಟಣದ ವಾರ್ಡ್ ನಂ.9, ಆರ್.ಪಿ.ರಸ್ತೆ, ಸರ್ಕಾರಿ ಬಾಲಕರ ಶಾಲೆಯಿಂದ ರಾಜಾಜಿ ಕಾಲೋನಿಯ ಶ್ರೀ ಬಣ್ಣಾರಮ್ಮನ ದೇವಸ್ಥಾನದವರೆಗೆ ರಸ್ತೆಗೆ ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣ ಕಾಮಗಾರಿ ಅಂದಾಜು ವೆಚ್ಚ ರೂ.40.00 ಲಕ್ಷ ಈ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ ಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಗೆ ಡಾಂಬರೀಕರಣ ಮಾಡುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.
4.ನಂಜನಗೂಡು ಪಟ್ಟಣದ ಶ್ರೀರಾಂಪುರ ಕಾಲೋನಿಯ 1ನೇ ಮುಖ್ಯರಸ್ತೆ, 2ನೇ ಮುಖ್ಯರಸ್ತೆ ಹಾಗೂ ಉಳಿಕೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಶ್ರೀರಾಂಪುರ ಕಾಲೋನಿಯಿಂದ ಶಂಕರಪುರಕ್ಕೆ ಹೋಗುವ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ, ಒಳಚರಂಡಿಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಅಲ್ಲೇ ನಿಂತಿರುವುದನ್ನು ಗಮನಿಸಿ, ಒಳಚರಂಡಿಯ ನೀರನ್ನು ಯು.ಜಿ.ಡಿ ಗೆ ಸಂಪರ್ಕ ಕಲ್ಪಿಸುವ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.
5.ನಂಜನಗೂಡು ನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಉಪಯೋಗಕ್ಕಾಗಿ 4 (ನಾಲ್ಕು) ಆಧುನಿಕ ಶೌಚಾಲಯಗಳನ್ನು ನಿರ್ಮಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.
6.ನಂಜನಗೂಡು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಶ್ಚಿಮ ಭಾಗದ/ ದಕ್ಷಿಣ ಭಾಗದ ಮೊದಲನೇ ಮಹಡಿಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿ ಅಂದಾಜು ವೆಚ್ಚ ರೂ. 25.00+25.00 ಲಕ್ಷ ಈ 2 (ಎರಡು) ಕಾಮಗಾರಿಗಳ ಸ್ಥಳವನ್ನು ಪರಿಶೀಲಿಸಿ ತ್ವರಿತವಾಗಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.
7.ಹಂಡುವಿನಹಳ್ಳಿಯಲ್ಲಿ ಪ್ರಾಧಿಕಾರದವತಿಯಿಂದ ನಿರ್ಮಿಸಿರುವ ಬಡಾವಣೆಯನ್ನು ಸ್ಥಳ ಪರಿಶೀಲಿಸಿ ಈ ಬಡಾವಣೆಗೆ ಅಗತ್ಯವಿರುವ ಮೂಲಭೂತ ಸೌಕರ್ಯವನ್ನು ಕಲ್ಪಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.
8.ನಂಜನಗೂಡು ಪಟ್ಟಣದ ಕೆ.ಹೆಚ್.ಬಿ ಕಾಲೋನಿಯಲ್ಲಿ ನಿರ್ಮಿಸಿರುವ ಉದ್ಯಾನವÀನದ ಸ್ಥಳವನ್ನು ಪರಿಶೀಲಿಸಿ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.
9.ಹುಲ್ಲಹಳ್ಳಿ ರಸ್ತೆಯಿಂದ ದೇವೀರಮ್ಮನಹಳ್ಳಿ ರಸ್ತೆ ವರೆಗೆ ಈಗಾಗಲೇ ಪ್ರಾಧಿಕಾರದವತಿಯಿಂದ ಮಾಡಲಾಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿ ಈ ರಸ್ತೆಯಲ್ಲಿ ಸಾರ್ವಜನಿಕರು ಓಡಾಡಲು ಅನಾನುಕೂಲವಾಗಿರುವುದರಿಂದ ಈ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.

(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ., ಮೈಸೂರು.
 
ಸಂಖ್ಯೆ: ಅಆಸಶಾ/5/2016-17
ದಿನಾಂಕ: 18.11.2016ರಂದು ಗುತ್ತಿಗೆದಾರರ ಕುಂದುಕೊರತೆಗಳ ಬಗ್ಗೆ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರ ಅಧ್ಯಕ್ಷತೆಯಲ್ಲಿ ಪ್ರಾಧಿಕಾರದ ಸಭಾಂಗಣದಲ್ಲಿ ಗುತ್ತಿಗೆದಾರರ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಡಾ. ಎಂ.ಮಹೇಶ್, ಅಧೀಕ್ಷಕ ಅಭಿಯಂತರರಾದ ಶ್ರೀ ಶಿವಕುಮಾರ್, ಕಾರ್ಯಪಾಲಕ ಅಭಿಯಂತರರಾದ ಶ್ರೀ ರಾಜು, ಪ್ರಾಧಿಕಾರದ ಎಲ್ಲಾ ವಲಯಾಧಿಕಾರಿಗಳು, ಪ್ರಾಧಿಕಾರದ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಮಹಾಲಿಂಗಂ, ಅಧ್ಯಕ್ಷರಾದ ಶ್ರೀ ಪ್ರತಾಪ್, ಕಾರ್ಯದರ್ಶಿಯಾದ ಶ್ರೀ ಸಿ.ಡಿ.ಕೃಷ್ಣ ನಿರ್ದೇಶಕರುಗಳಾದ ಹೊಸಹುಂಡಿ ಶ್ರೀ ನಾಗರಾಜು ಮತ್ತು ಶ್ರೀ ಕೆ.ರವಿ ಹಾಗೂ ಇತರೆ ಗುತ್ತಿಗೆದಾರರು ಹಾಜರಿದ್ದರು.
ಸಹಿ/-
(ಡಿ.ಧುೃವಕುಮಾರ್)
ಅಧ್ಯಕ್ಷರು
ಮೈ.ನ.ಪ್ರಾ., ಮೈಸೂರು.
ಸಂಖ್ಯೆ: ಅಆಸಶಾ/4/2016-17
ದಿನಾಂಕ: 14-11-2016ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ಅಂಬೇಡ್ಕರ್ ಭವನ ಕಟ್ಟಡ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು ಹಾಗೂ ಹಂಚ್ಯಾ-ಸಾತಗಳ್ಳಿ ‘ಬಿ’ ವಲಯ ಬಡಾವಣೆಯ ನಾಗರೀಕರು ಮನವಿ ಸಲ್ಲಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಕೋರಿದ್ದ ಮೇರೆಗೆ ಸದರಿ ಬಡಾವಣೆಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳಾದ ನೀರಿನ ಸೌಲಭ್ಯ ಮತ್ತು ದಾರಿದೀಪಗಳ ವ್ಯವಸ್ಥೆಯನ್ನು/ಆಗಿಂದಾಗೆ ವಿದ್ಯುತ್ ಸರಬರಾಜಿನಲ್ಲಿ ಆಗುತ್ತಿರುವ ತೊಂದರೆಯನ್ನು ಬಗೆಹರಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಉದಯಗಿರಿ ಬಡಾವಣೆಯಲ್ಲಿನ ಎಸ್.ಸಿ ಮತ್ತು ಎಸ್.ಟಿ ವರ್ಗಕ್ಕೆ ಸೇರಿದ ಸ್ಮಶಾನದ ಪರಿಶೀಲನೆ ನಡೆಸಿ ಸ್ಮಶಾನಕ್ಕೆ ಮೂಲ ಸೌಕರ್ಯಗಳನ್ನು ಒದಗಿಸುವಂತೆಯೂ ಸಹ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಡಾ.ಎಂ.ಮಹೇಶ್, ಅಧೀಕ್ಷಕ ಅಭಿಯಂತರರಾದ ಶ್ರೀ ಶಿವಕುಮಾರ್, ಕಾರ್ಯಪಾಲಕ ಅಭಿಯಂತರರಾದ ಶ್ರೀ ರಾಜು, ಪ್ರಾಧಿಕಾರದ ಸದಸ್ಯರಾದ ಶ್ರೀ ಭಾಸ್ಕರ್ ಎಲ್ ಗೌಡ ವಲಯಾಧಿಕಾರಿಗಳಾದ ಶ್ರೀ ರವೀಂದ್ರ ಕುಮಾರ್, ಶ್ರೀ ಜಿ.ಮೋಹನ್, ಶ್ರೀ ಮಹೇಶ್ ಬಾಬು (ವಿದ್ಯುತ್) ಹಾಗೂ ಪ್ರಾಧಿಕಾರದ ಸಹಾಯಕ ಅಭಿಯಂತರರುಗಳು ಹಾಜರಿದ್ದರು.
(ಡಿ.ಧುೃವಕುಮಾರ್)
ಅಧ್ಯಕ್ಷರು
ಸಂ್ಯೆ: ಅಆಸಶಾ/3/2016-17 ದಿನಾಂಕ: 13.11.2016
ದಿನಾಂಕ: 14.11.2016ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಡಿ.ಧುೃವಕುಮಾರ್ ರವರು ಮಧ್ಯಾಹ್ನ 3.00ಕ್ಕೆ ಹಂಚ್ಯಾಸಾತಗಳ್ಳಿ ‘ಬಿ’ ವಲಯದ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ಹಾಗೂ ಸಂಜೆ 4.00 ಗಂಟೆಗೆ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿಯ ಪ್ರಗತಿ ಪರಿಶೀಲನೆಯನ್ನು ನಡೆಸಲಿದ್ದಾರೆ. ಈ ಪ್ರಕಟಣೆಯನ್ನು ದಿನಾಂಕ: 14.11.2016ರಂದು “ಮೈಸೂರಿನಲ್ಲಿ ಇಂದು” ಎಂಬ ಕಾರ್ಯಕ್ರಮದಡಿಯಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಬೇಕಾಗಿ ಕೋರಲಾಗಿದೆ.

ಅಧ್ಯಕ್ಷರ ಆಪ್ತ ಸಹಾಯಕ ಶಾಖೆ,
ಮೈ.ನ.ಪ್ರಾ., ಮೈಸೂರು
ಸಂಖ್ಯೆ: ಅಆಸಶಾ/2/2016-17
ದಿನಾಂಕ: 08.11.2016ರಂದು ವಿಜಯನಗರ, 3ನೇ ಹಂತಕ್ಕೆ ಹೊಂದಿಕೊಂಡಿರುವ ಹಿನಕಲ್ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕ್ಷೇಮಾಭಿವೃದ್ಧಿಗೆ ಸಮುದಾಯ ಭವನ ನಿರ್ಮಿಸಲು ಅಂದಾಜು ವೆಚ್ಚ ರೂ.22.20 ಲಕ್ಷದ ಕಾಮಗಾರಿಯ ಶಂಕುಸ್ಥಾಪನೆಯನ್ನು ಡಾ.ಹೆಚ್.ಸಿ.ಮಹದೇವಪ್ಪನವರು ಮಾನ್ಯ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಡಿ. ಧುೃವಕುಮಾರ್ ಅಧ್ಯಕ್ಷರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಜಿ.ಟಿ.ದೇವೇಗೌಡರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಸತ್ಯನಾರಾಯಣ ರವರು, ಮೂಡಾ ಸದಸ್ಯರಾದ ಎಲ್. ಭಾಸ್ಕರ್ ಗೌಡ ರವರು ಹಾಗೂ ಪ್ರಾಧಿಕಾರದ ಅಧೀಕ್ಷಕ ಅಭಿಯಂತರರಾದ ಶ್ರೀ ಶಿವಕುಮಾರ್, ಕಾರ್ಯಪಾಲಕ ಅಭಿಯಂತರರಾದ ಶ್ರೀ ರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಹೇಮಂತ್ ಕುಮಾರ್ ಹಾಗೂ ಅಭಿಯಂತರರುಗಳು, ಮಹಾನಗರ ಪಾಲಿಕೆಯ ಹಾಲಿ ಹಾಗೂ ಮಾಜಿ ಸದಸ್ಯರುಗಳು, ಹಿನಕಲ್ ಗ್ರಾಮ ಪಂಚಾಯಿತಿಯ ಹಾಲಿ ಹಾಗೂ ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು/ಕಾರ್ಯಕರ್ತರು ಭಾಗವಹಿಸಿದರು.
ಅಧ್ಯಕ್ಷರ ಆಪ್ತ ಸಹಾಯಕ ಶಾಖೆ,
ಮೈ.ನ.ಪ್ರಾ., ಮೈಸೂರು
ಸಂಖ್ಯೆ: ಅಆಸಶಾ/1/2016-17 ದಿನಾಂಕ 04.11.2016
ದಿನಾಂಕ: 04.11.2016ರಂದು ಸರ್ಕಾರದ ಅಧಿಸೂಚನೆ ಸಂಖ್ಯೆ ನಅಇ 569 ಮೈಅಪ್ರಾ 2016 ದಿನಾಂಕ: 03.11.2016ರ ಸರ್ಕಾರದ ಆದೇಶದಂತೆ ಡಿ.ಧೃವಕುಮಾರ್ ರವರು ಪ್ರಾಧಿಕಾರದ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಡಾ.ಎಂ.ಮಹೇಶ್ ರವರು ಹಾಗೂ ಎಲ್ಲಾ ಅಧಿಕಾರಿ ವರ್ಗದವರು ಮತ್ತು ಸಿಬ್ಬಂದಿ ವರ್ಗದವರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಅಧ್ಯಕ್ಷರ ಆಪ್ತ ಸಹಾಯಕ ಶಾಖೆ,
ಮೈ.ನ.ಪ್ರಾ., ಮೈಸೂರು.
 
ಸಂಖ್ಯೆ :ಮೈ.ನ.ಪ್ರಾ/ಅಆಸಶಾ/2016-17 ದಿನಾಂಕ 04.11.2016
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಜೆ.ಎನ್.ನರ್ಮ್ ಯೋಜನೆಯಡಿ ನಗರದ ಹೊರವರ್ತುಲ ರಸ್ತೆಯನ್ನು ಆರು ಪಥಗಳ ಮುಖ್ಯ ರಸ್ತೆ ಹಾಗೂ ಎರಡು ಬದಿಗಳಲ್ಲಿ ಸೇವಾ ರಸ್ತೆ ಸೇರಿದಂತೆ ನಿರ್ಮಿಸಲಾಗಿರುತ್ತದೆ. ಹೊರವರ್ತುಲ ರಸ್ತೆಯ ಅಗಲ 45.00ಮೀ ಗಳಾಗಿದ್ದು, ಒಟ್ಟು ಉದ್ದ 41.535 ಕಿ.ಮೀ ಗಳಾಗಿರುತ್ತದೆ. ಸದರಿ ಹೊರವರ್ತುಲ ರಸ್ತೆಯ ಸೇವಾ ರಸ್ತೆಯ Shouಟಜeಡಿನಲ್ಲಿ ಗಾಡಿ ಹೋಟೆಲ್‍ಗಳು, ತಾತ್ಕಾಲಿಕ ಹೋಟೆಲ್‍ಗಳನ್ನು ನಡೆಸುತ್ತಿದ್ದು ಕಟ್ಟಡಗಳ ನಿರ್ಮಾಣ ತ್ಯಾಜ್ಯ ಹಾಗೂ ಮಣ್ಣು ಅಗೆತದ ಕೆಲಸದಿಂದ ಉಳಿಯುವ ಮಣ್ಣನ್ನು ಸುರಿಯುತ್ತಿದ್ದು ರಸ್ತೆ ಬಳಕೆದಾರರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ಹಲವಾರು ದೂರುಗಳು ಬಂದಿರುತ್ತವೆ.

ಇದಲ್ಲದೆ ಹೊರವರ್ತುಲ ರಸ್ತೆಯ ಮುಖ್ಯ ಪಥಗಳಲ್ಲಿ ಹಾಗೂ ಸೇವಾ ರಸ್ತೆಗಳಲ್ಲಿ ಜೆ.ಸಿ.ಬಿ, ಇಟಾಚಿ, ಲಾರಿಗಳು, ಟಿಪ್ಪರ್‍ಗಳು, ಟ್ರಾಕ್ಟರ್‍ಗಳು, ರೋಡ್ ರೋಲರ್‍ಗಳು, ಆಟೋಗಳು ಇತ್ಯಾದಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗಿರುತ್ತದೆ.

ಹೊರವರ್ತುಲ ರಸ್ತೆ ನಿರ್ಮಾಣದ ಮೂಲ ಉದ್ದೇಶವಾದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡಚಣೆಯಾಗಿ ಆಗಿಂದಾಗ್ಗೆ ಅಪಘಾತಗಳು ಉಂಟಾಗುತ್ತಿರುತ್ತವೆ. ಆದುದರಿಂದ ರಸ್ತೆಯ ಮುಖ್ಯ ಪಥಗಳಲ್ಲಿ ಹಾಗೂ ಸೇವಾ ರಸ್ತೆಗಳಲ್ಲಿ ಕಟ್ಟಡಗಳ ನಿರ್ಮಾಣ ತ್ಯಾಜ್ಯ ಹಾಗೂ ಮಣ್ಣು ಅಗೆತದ ಕೆಲಸದಿಂದ ಉಳಿಯುವ ಮಣ್ಣನ್ನು ಸುರಿಯಬಾರದು, ಯಾವುದೇ ವಾಹನಗಳ ನಿಲುಗಡೆಯನ್ನು ಮಾಡಬಾರದು ತಳ್ಳುವಗಾಡಿಗಳು, ವಾಹನಗಳಲ್ಲಿ ಹೋಟೆಲ್‍ಗಳನ್ನು ನಡೆಸಬಾರದು ಹಾಗೂ ವಾಹನಗಳ ಸಂಚಾರಕ್ಕೆ ಅಡಚಣೆಯಾಗುವ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳಬಾರದೆಂದು ಕೋರಿದೆ. ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸಿದೆ.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು
 
ಸಂಖ್ಯೆ :ಮೈ.ನ.ಪ್ರಾ/ವ.ಕ-7/2016-17 ದಿನಾಂಕ 19.10.2016
ಪತ್ರಿಕಾ ಪ್ರಕಟಣೆ
ಉದ್ದೇಶಿತ ಬಲ್ಲಹಳ್ಳಿ ವಸತಿ ಬಡಾವಣೆಯ ಸಂಕ್ಷಿಪ್ತ ವರದಿ
• ಮೈಸೂರು ತಾಲ್ಲೂಕು ಜಯಪುರಹೋ.ಬಲ್ಲಹಳ್ಳಿ ಗ್ರಾಮದಲ್ಲಿ ಪ್ರಾಧಿಕಾರದ ವತಿಯಿಂದ ವಸತಿ ಬಡಾವಣೆ ರಚಿಸಲು ಉದ್ದೇಶಿಸಿ ಸುಮಾರು 484ಎ 24 ಗುಂಟೆ ವಿಸ್ತೀರ್ಣಕ್ಕೆ ಯೋಜನೆ ಸಿದ್ಧಪಡಿಸಲಾಗಿದೆ.
• ಬಲ್ಲಹಳ್ಳಿ ವಸತಿ ಯೋಜನೆಯನ್ನು ರೂ.258.00 ಕೋಟಿ ವೆಚ್ಚದಲ್ಲಿ ತಯಾರಿಸಿದ್ದು, ಯೋಜನೆಗೆ ದಿನಾಂಕ:30.01.2015 ರಂದು ಸರ್ಕಾರದಿಂದ ಆಡಾಳಿತಾತ್ಮಕ ಮಂಜೂರಾತಿ ದೊರೆತಿದೆ.
• ಉದ್ದೇಶಿತ ಬಡಾವಣೆಯನ್ನು ಪ್ರಾಧಿಕಾರದ ವತಿಯಿಂದ ಪ್ರಪ್ರಥಮ ಬಾರಿಗೆ ಸರ್ಕಾರದ ಆದೇಶ ಸಂಖ್ಯೆ: ಊUಆ/08/ಖಿಖಿP/2014-15 ಆಣ:11.02.2015ರ ಅನ್ವಯ ರೈತರ ಸಹಭಾಗಿತ್ವದಲ್ಲಿ 50:50 ಅನುಪಾತದಡಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.
• ಯೋಜನೆ ರೈತರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಈಗಾಗಲೇ ಬಲ್ಲಹಳ್ಳಿ ಗ್ರಾಮದಲ್ಲಿ ಹಾಗೂ ಪ್ರಾಧಿಕಾರದಲ್ಲಿ 4 ಬಾರಿ ರೈತರೊಂದಿಗೆ ಸಭೆ ನಡೆಸಿದ್ದು, ದಿನಾಂಕ:20.09.2016 ರಂದು ಅಂತಿಮವಾಗಿ ಸಭೆ ನಡೆಸಲಾಗಿದೆ. ಅದರಂತೆ ರೈತರಿಗೆ ಸರ್ಕಾರಿ ಆದೇಶದನ್ವಯ 50:50 ರ ಅನುಪಾತದಡಿ ಮೊತ್ತೊಮ್ಮೆ ಸುಧೀರ್ಘವಾಗಿ ಮನವರಿಕೆ ಮಾಡಿ ಹಾಗೂ ಈ ಹಿಂದೆ ರೈತರು ಬಲ್ಲಹಳ್ಳಿ ಗ್ರಾಮದಲ್ಲಿ ಸಭೆಯಲ್ಲಿ ಸಲ್ಲಿಸಿದ್ದ ಬೇಡಿಕೆಗಳಿಗೆ ಸರ್ಕಾರದ ಅನುಮತಿ ನೀಡಿರುವ ಬಗ್ಗೆ ವಿವರಿಸಿ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ತಿಳಿಸಲಾಗಿದೆ.
• ದಿನಾಂಕ:20.09.2016 ರಂದು ರೈತೆರೊಂದಿಗೆ ನಡೆಸಿರುವ ಅಂತಿಮ ಸಭೆಯ ನಂತರ, ಉದ್ದೇಶಿತ ವಸತಿ ಬಡಾವಣೆಯ ಬಲ್ಲಹಳ್ಳಿ ಗ್ರಾಮದಲ್ಲಿ 381 ಎಕರೆ 01 ಗುಂಟೆ ವಿಸ್ತೀರ್ಣಕ್ಕೆ ದಿನಾಂಕ:28.09.2016 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯಿದೆಯ ಅಧಿನಿಯಮ 1987 ರ ಕಾಲಂ 17(1) ರಂತೆ ವಸತಿ ಯೋಜನೆಗೆ ಭೂಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿದೆ ಹಾಗೂ ದಿನಾಂಕ: 18.10.2016, 19.10.2016ರಂದು ಆಂದೋಲನ ಹಾಗೂ ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿದೆ.
• ಉದ್ದೇಶಿತ ವಸತಿ ಬಡಾವಣೆಯನ್ನು 50:50ರ ಅನುಪಾತದಲ್ಲಿ ರೈತರ ಸಹಭಾಗಿತ್ವದೊಂದಿಗೆ ನಿರ್ಮಾಣ ಮಾಡುತ್ತಿರುವುದರಿಂದ ಯಾವುದೇ ವ್ಯಾಜ್ಯಗಳು ಉದ್ಭವಿಸುವುದಿಲ್ಲ ಹಾಗೂ ರೈತರಿಗೆ ನೀಡಬೇಕಾಗಿರುವ ನಿವೇಶನಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಯಾವುದೇ ಷರತ್ತುಗಳಿಲ್ಲದೆ ನಿವೇಶನ ಮಂಜೂರಾತಿ ಪತ್ರ ನೀಡಲಾಗುವುದು. ಮುಂದುವರೆದಂತೆ ಉದ್ದೇಶಿತ ಬಡಾವಣೆಯಲ್ಲಿ ವಿವಿಧ ಅಳತೆಯ 4,846 ನಿವೇಶನಗಳನ್ನು ರಚಿಸಬಹುದಾಗಿದ್ದು, ಬಡಾವಣೆಯ ಸಂಪೂರ್ಣ ಅಭಿವೃದ್ಧಿಯನ್ನು 12 ತಿಂಗಳ ಕಾಲಮಿತಿಯೊಳಗೆ ಪೂರ್ಣಗೊಳಿಸಿ ನಿವೇಶನಗಳನ್ನು ಹಂಚಲು ಕ್ರಮಕೈಗೊಳ್ಳಲಾಗುವುದು.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
 
ಸಂಖ್ಯೆ :ಮೈ.ನ.ಪ್ರಾ/ಅಆಸಶಾ/2016-17 ದಿನಾಂಕ 13.10.2016
ಪತ್ರಿಕಾ ಪ್ರಕಟಣೆ
ಮೈಸೂರು ದಸರಾ ಮಹೋತ್ಸವ-2016ರ ಅಂಗವಾಗಿ ನಗರದ ಕುಪ್ಪಣ್ಣ ಪಾರ್ಕ್‍ನಲ್ಲಿ ಆಯೋಜಿಸಲಾಗಿದ್ದ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಭಾಗವಹಿಸಿದ್ದು, ಕಳೆದ 3 ವರ್ಷಗಳಂತೆ ಈ ವರ್ಷವೂ ಸಹ ಪ್ರಾಧಿಕಾರವು ಪ್ರಥಮ ಬಹುಮಾನ ಪಡೆದುಕೊಂಡಿರುತ್ತದೆ. ಬಹುಮಾನ ಬರಲು ಶ್ರಮಿಸಿದ ಪ್ರಾಧಿಕಾರದ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಿಬ್ಬಂದಿಗಳನ್ನು ಆಯುಕ್ತರಾದ ಡಾ||ಎಂ.ಮಹೇಶ್‍ರವರು ಅಭಿನಂದಿಸಿದರು.
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
 
e-Auction Notification No MUDAEAN022016-17 - Date 02/09/2016    Golden Chance for Site Buyers
ಸಂಖ್ಯೆ :ಮೈ.ನ.ಪ್ರಾ/ಅಆಸಶಾ/2016-17 ದಿನಾಂಕ 15.08.2016
ಪತ್ರಿಕಾ ಪ್ರಕಟಣೆ
ದಿನಾಂಕ 15.08.2016ರಂದು ಮೈಸೂರು ನಗರಾಭಿವೃಧ್ಧಿ ಪ್ರಾಧಿಕಾರದಲ್ಲಿ 70ನೇ ಸ್ವಾತಂತ್ರೋತ್ಸವ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಅಧ್ಯಕ್ಷರಾದ ಶ್ರೀ ಕೆ.ಆರ್.ಮೊಹನ್ ಕುಮಾರ್ ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಸದಸ್ಯರು, ಆಯುಕ್ತರಾದ ಡಾ|| ಎಂ.ಮಹೇಶ್, ಅಧೀಕ್ಷಕ ಅಭಿಯಂತರರಾದ ಶ್ರೀ ಶಿವಕುಮಾರ್, ನಗರ ಯೋಜಕ ಸದಸ್ಯರಾದ ಶ್ರೀ ಶಶಿಕುಮಾರ್, ಕಾರ್ಯದರ್ಶಿ ಶ್ರೀಮತಿ ಎಂ.ಕೆ.ಸವಿತ ಹಾಗೂ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
 
ಸಂಖ್ಯೆ.ಮೈನಪ್ರಾ/ಕಾಆಶಾ/2016-17 ದಿನಾಂಕ.06.08.2016

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪ್ರತಿ ತಿಂಗಳು 2ನೇ ಮತ್ತು 4ನೇ ಬುಧವಾರಗಳಂದು “ಸಾರ್ವಜನಿಕ ಕುಂದು ಕೊರತೆ” ಸಭೆಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿತ್ತು, ಇನ್ನು ಮುಂದೆ “ಸಾರ್ವಜನಿಕ ಕುಂದು ಕೊರತೆ” ಸಭೆಯನ್ನು ಕಾರಣಾಂತರಗಳಿಂದ ಪ್ರತಿ ತಿಂಗಳ 4ನೇ ಬುಧವಾರ ಮಾತ್ರ ಏರ್ಪಡಿಸಲಾಗುತ್ತದೆ. ಆದ್ದರಿಂದ ದಿನಾಂಕ 10.08.2016 ರಂದು ನಡೆಯಬೇಕಾಗಿದ್ದ “ಸಾರ್ವಜನಿಕ ಕುಂದು ಕೊರತೆ” ಸಭೆಯನ್ನು ಮುಂದೂಡಲಾಗಿದೆ.
ಸಂಖ್ಯೆ: ಅಆಸಶಾ/66/2016-17 ದಿನಾಂಕ 27.07.2016
ಪತ್ರಿಕಾ ಪ್ರಕಟಣೆ

ದಿನಾಂಕ: 27.07.2016ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಕೆ.ಆರ್.ಮೋಹನ್‍ಕುಮಾರ್‍ರವರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯು ಪೂರ್ವಾಹ್ನ 11.00 ಗಂಟೆಯಿಂದ ಅಪರಾಹ್ನ 3.00 ಗಂಟೆವರೆಗೆ ನಡೆದಿದ್ದು, ಈ ಸಭೆಯಲ್ಲಿ ಪ್ರಾಧಿಕಾರದ ಸದಸ್ಯರುಗಳಾದ ಶ್ರೀ.ಎಸ್.ಸತೀಶ್ (ಸಂದೇಶ್ ಸ್ವಾಮಿ), ಶ್ರೀ.ಅನ್ವರ್‍ಪಾಷ, ಶ್ರೀ.ಸಿ.ಜಿ.ಶಿವಕುಮಾರ್, ಶ್ರೀ.ಭಾಸ್ಕರ್ ಎಲ್ ಗೌಡ, ಶ್ರೀಮತಿ.ಅನುಸೂಯ ಗಣೇಶ್, ಪ್ರಾಧಿಕಾರದ ಆಯುಕ್ತರಾದ ಶ್ರೀ.ಡಾ.ಎಂ.ಮಹೇಶ್, ನಗರ ಯೋಜನಾ ಸದಸ್ಯರಾದ ಶ್ರೀ.ಎಂ.ಸಿ.ಶಶಿಕುಮಾರ್, ಅಧೀಕ್ಷಕ ಅಭಿಯಂತರರಾದ ಶ್ರೀ.ಎಂ.ಶಿವಕುಮಾರ್, ಕಾರ್ಯಪಾಲಕ ಅಭಿಯಂತರರಾದ ಶ್ರೀ.ರಾಜು, ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀ.ಕೃಷ್ಣಸ್ವಾಮಿ, ಕಾರ್ಯದರ್ಶಿಯಾದ ಶ್ರೀಮತಿ ಎಂ.ಕೆ.ಸವಿತ, ವಿಶೇಷ ಭೂಸ್ವಾಧೀನಾಧಿಕಾರಿಗಳಾದ ಶ್ರೀಮತಿ.ಚಂದ್ರಮ್ಮ ರವರು ಹಾಗೂ ಪ್ರಾಧಿಕಾರದ ಎಲ್ಲಾ ಅಧಿಕಾರಿ ವರ್ಗದವರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಈ ಸಭೆಯಲ್ಲಿ ಸಾರ್ವಜನಿಕರು ಕುಂದುಕೊರತೆಗಳ ಬಗ್ಗೆ ಮನವಿಗಳನ್ನು ಸಲ್ಲಿಸಿದ್ದು, ಅವರುಗಳ ಅಹವಾಲುಗಳನ್ನು ಕೆಳಕಂಡಂತೆ ಸ್ವೀಕರಿಸಿದೆ. Click to View File

ಸಂಖ್ಯೆ.ಮೈನಪ್ರಾ/ಕಾಆಶಾ/2016-17 ದಿನಾಂಕ.25.07.2016

ಪತ್ರಿಕಾ ಪ್ರಕಟಣೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪ್ರತಿ ತಿಂಗಳು 2ನೇ ಮತ್ತು 4ನೇ ಬುಧವಾರಗಳಂದು “ಸಾರ್ವಜನಿಕ ಕುಂದು ಕೊರತೆ” ಸಭೆಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದ್ದು, ಈ ಸಾಲಿನ ಮೊದಲ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ದಿನಾಂಕ.27.07.2016 ಬುಧವಾರ ಬೆಳಿಗ್ಗೆ 11.00 ಗಂಟೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಒಂದನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸ್ಪಂದನ ಶಾಖೆಯಲ್ಲಿರುವ ಸಾರ್ವಜನಿಕ ಕುಂದುಕೊರತೆ ಕೌಂಟರ್‍ನಲ್ಲಿ ಬೆಳಿಗ್ಗೆ 10.00 ಗಂಟೆಯಿಂದಲೇ ನೋಂದಣಿ ಮಾಡಿಸಿ ಸ್ವೀಕೃತಿಯನ್ನು ಪಡೆದು, ಸದರಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಈ ಮೂಲಕ ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಶ್ರೀಯುತ.ಕೆ.ಆರ್.ಮೋಹನ್ ಕುಮಾರ್ ರವರು ಹಾಗೂ ಆಯುಕ್ತರಾದ ಡಾ||ಎಂ.ಮಹೇಶ್ ರವರು ಸಾರ್ವಜನಿಕರಲ್ಲಿ ಕೋರಿದ್ದಾರೆ.

ಕಾರ್ಯದರ್ಶಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು

 
Swacha Bharatha Abhiyan at MUDA Premises
 
Details of Private Layouts (PDF Format) :: Kannada || English
 
ದಿನಾಂಕ: 26.03.2016 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ.ಆರ್.ಮೋಹನ್‍ಕುಮಾರ್ ರವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11.00 ಘಂಟೆಗೆ ಪ್ರಾಧಿಕಾರದ 2016-17ನೇ ಸಾಲಿನ ಆಯ-ವ್ಯಯ ಸಭೆಯನ್ನು ಪ್ರಾಧಿಕಾರದ ಸಭಾಂಗಣದಲ್ಲಿ ಕರೆಯಲಾಗಿದೆ. ಆದ್ದರಿಂದ ತಾವುಗಳು ಈ ವಿಶೇಷ ಸಭೆಗೆ ಹಾಜರಾಗಬೇಕೆಂದು ಕೋರಲಾಗಿದೆ.

ಅಧ್ಯಕ್ಷರ ಆಪ್ತ ಸಹಾಯಕ ಶಾಖೆ,
ಮೈ.ನ.ಪ್ರಾ., ಮೈಸೂರು.
 
ಸಂಖ್ಯೆ: ಅಆಸಶಾ/52/2015-16 ದಿನಾಂಕ:31-10-2015
ದಿನಾಂಕ: 31.10.2015 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ.ಆರ್.ಮೋಹನ್‍ಕುಮಾರ್ ರವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11.00 ಘಂಟೆಗೆ ನಡೆದ ಪ್ರಾಧಿಕಾರದ ಸಭೆಗೆ ಶಾಸಕರುಗಳಾದ ಶ್ರೀ ತನ್ವೀರ್ ಸೇಠ್, ಶ್ರೀ ಜಿ.ಟಿ.ದೇವೇಗೌಡ, ಶ್ರೀ ಎಂ.ಕೆ.ಸೋಮಶೇಖರ್, ಶ್ರೀ ವಾಸು, ಶ್ರೀ ಗೋ.ಮಧುಸೂಧನ, ಪ್ರಾಧಿಕಾರದ ಸದಸ್ಯರಾದ ಶ್ರೀ ಎಸ್.ಸತೀಶ್ (ಸಂದೇಶ್ ಸ್ವಾಮಿ), ಸರ್ಕಾರದಿಂದ ಹೊಸದಾಗಿ ನಾಮನಿರ್ದೇಶನವಾಗಿರುವ ಸದಸ್ಯರುಗಳಾದ ಶ್ರೀ ಸಿ.ಜಿ.ಶಿವಕುಮಾರ್, ಶ್ರೀ ರಾಕೇಶ್ ಪಾಪಣ್ಣ, ಶ್ರೀ ಎನ್.ಅನ್ವರ್ ಪಾಷ ಉ:ಅನ್ನೂಬಾಯಿ, ಶ್ರೀ ಭಾಸ್ಕರ್ ಎಲ್. ಗೌಡ ಮತ್ತು ಶ್ರೀಮತಿ ಅನುಸೂಯ ಗಣೇಶ್ ಹಾಗೂ ಪ್ರಾಧಿಕಾರದ ಆಯುಕ್ತರಾದ ಡಾ.ಎಂ.ಮಹೇಶ್, ನಗರಯೋಜನಾ ಸದಸ್ಯರಾದ ಶ್ರೀ ಎಂ.ಸಿ.ಶಶಿಕುಮಾರ್, ಅಧೀಕ್ಷಕ ಅಭಿಯಂತರರಾದ ಶ್ರೀ ಎಂ.ಶಿವಕುಮಾರ್, ಚೆಸ್ಕಾಂ ಅಧೀಕ್ಷಕ ಅಭಿಯಂತರರಾದ ಶ್ರೀ ಎನ್.ನರಸಿಂಹೇಗೌಡ ರವರು ಸಭೆಗೆ ಹಾಜರಾಗಿರುತ್ತಾರೆ.
ಸದರಿ ಸಭೆಯಲ್ಲಿ ಈ ಕೆಳಕಂಡ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
1. ಹುಡ್ಕೋ, ಓ.ವೈ.ಹೆಚ್.ಎಸ್ & ಬ್ಯಾಂಕ್ ನೆರವಿನ ಮನೆಗಳ ಮಂಜೂರಾತಿದಾರರು ಬಾಕಿ ಕಂತಿನ ಮೊಬಲಗನ್ನು ಬಡ್ಡಿ ಸಹಿತ ಪಾವತಿಸಿಕೊಳ್ಳುವ ಕಾಲಾವಕಾಶವನ್ನು ವಿಸ್ತರಿಸಿ ಅಂತಿಮವಾಗಿ 3 ತಿಂಗಳ ಗಡುವನ್ನು ನೀಡಿ ಮತ್ತು ಈ ಕಾರ್ಯಕ್ಕಾಗಿ ವಿಶೇಷ ತಹಶೀಲ್ದಾರ್ ರವರನ್ನೊಳಗೊಂಡ ತಂಡವನ್ನು ರಚಿಸಿ ವಿಸ್ತರಿಸಲಾದ ಅವಧಿಯೊಳಗೆ ಬಾಕಿ ಹಣವನ್ನು ವಸೂಲಿ ಮಾಡಲು ತೀರ್ಮಾನಿಸಲಾಯಿತು.

2. ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರುಗಳ ನಿವೃತ್ತಿ ವೇತನ ಪಾವತಿಸುವ ಸಂಬಂಧ ಈ ಹಿಂದೆ ರಾಜ್ಯ ಲೆಕ್ಕಪತ್ರ ಇಲಾಖೆಯವರು ಪಿಂಚಣಿ ಪ್ರಾಧೀಕರಿಸುತ್ತಿದ್ದನ್ನು ಸರ್ಕಾರವು ತನ್ನ ಪತ್ರ ದಿನಾಂಕ 07-10-2014 ರಲ್ಲಿ ಹಿಂಪಡೆದು ತಿದ್ದುಪಡಿ ಪಿಂಚಣಿ ರೆಗ್ಯೂಲೇಷನ್‍ಗಳನ್ನು ಅಳವಡಿಸಿಕೊಳ್ಳಲು ಎಲ್ಲಾ ಪ್ರಾಧಿಕಾರಗಳಿಗೆ ಆದೇಶಿಸಿರುವಂತೆ, ಇನ್ನು ಮುಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೇ ಪಿಂಚಣಿ ಪ್ರಾಧಿಕಾರವಾಗಿ ಕರ್ತವ್ಯ ನಿರ್ವಹಿಸಲು ತೀರ್ಮಾನಿಸಲಾಯಿತು.

3. ದಟ್ಟಗಳ್ಳಿ ಐ ಬ್ಲಾಕ್ ಬಡಾವಣೆಯ ರಾಮಕೃಷ್ಣ ನಗರ ಪರಮಹಂಸ ವೃತ್ತದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ತೀರ್ಮಾನಿಸಲಾಯಿತು.

4. ಬೋಗಾಧಿ ಗ್ರಾಮ ಮತ್ತು ಎಸ್.ಬಿ.ಎಂ. ಕಾಲೋನಿಗೆ ನೀರು ಪೂರೈಕೆ ಮಾಡಲು ಬಾಕಿ ಇರುವ ರೂ.19.50 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು.

5. ನಿವೇಶನದ/ಮನೆಯ ಕ್ರಯಪತ್ರದ ದಂಡ ಶುಲ್ಕವನ್ನು ಚದರ ಅಡಿಗೆ ಬದಲಾಗಿ ಚದರ ಮೀಟರ್‍ನ ಅಳತೆಗೆ ಅನುಗುಣವಾಗಿ ಲೆಕ್ಕಾಚಾರ ಮಾಡಿ ಏಕರೂಪವಾಗಿ ಪಾವತಿಸಿಕೊಳ್ಳಲು ತೀರ್ಮಾನಿಸಲಾಯಿತು.


ಅಧ್ಯಕ್ಷರ ಆಪ್ತ ಸಹಾಯಕ ಶಾಖೆ,
ಮೈ.ನ.ಪ್ರಾ., ಮಸೂರು.
ಸಂಖ್ಯೆ: ಅಆಸಶಾ/50/2015-16 ದಿನಾಂಕ:06-10-2015

ದಿನಾಂಕ: 05-10-2015 ಮತ್ತು 06-10-2015 ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ.ಆರ್.ಮೋಹನ್ ಕುಮಾರ್ ರವರು ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರಾದ ಶ್ರೀ ರವಿಕುಮಾರ್, ಶ್ರೀ ಡಿ.ಎ.ಹಲಗಿ, ಸಹಾಯಕ ಕಾರ್ಯಪಾಕ ಅಭಿಯಂತರರಾದ ಶ್ರೀ ಟಿ.ಕೆ.ರವಿ, ಶ್ರೀ ಭಾಸ್ಕರ್, ಶ್ರೀ ಎಂ.ಪಿ.ದಿನೇಶ್, ಶ್ರೀ ಹೇಮಂತ್ ಕುಮಾರ್, ಶ್ರೀ ಅರುಣ್ ಕುಮಾರ್, ಶ್ರೀ ರಂಗಸ್ವಾಮಿ, ಶ್ರೀ ಮೋಹನ್, ಶ್ರೀ ಮಹೇಶ್(ನರ್ಮ್) ಹಾಗೂ ಸಂಬಂಧಪಟ್ಟ ಸಹಾಯಕ ಅಭಿಯಂತರರೊಡನೆ ವಲಯ 1, 2, 3, 4, 5ಎ, 5ಬಿ ಮತ್ತು 7 ರ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ಬಡಾವಣೆಗಳ ಸ್ಥಳ ಪರಿಶೀಲನೆಯನ್ನು ಮಾಡಿ ಈ ಕೆಳಕಂಡಂತೆ ನಿರ್ದೇಶನ ನೀಡಿರುತ್ತಾರೆ.

1. ಗೋಹಳ್ಳಿ ಗ್ರಾಮ ಸರ್ವೆ ನಂಬರ್ 65/1ಸಿ, 64/1, 63/1, 67/1 ರಲ್ಲಿ 10 ಎಕರೆ 18 ಗುಂಟೆ ಪ್ರದೇಶದಲ್ಲಿ ನಿರ್ಮಿಸಿರುವ ಖಾಸಗಿ ವಸತಿ ಬಡಾವಣೆಯಲ್ಲಿನ ಉದ್ಯಾನವನಗಳು ಅಭಿವೃದ್ಧಿಯಾಗಿರುವುದಿಲ್ಲ. ಈ ಬಡಾವಣೆಯಿಂದ ಮುಂದಕ್ಕೆ ಸಂಪರ್ಕ ರಸ್ತೆ ಕಲ್ಪಿಸಿರುವುದಿಲ್ಲ, ಸೈನ್ ಬೋರ್ಡ್ ಅಳವಡಿಸಿರುವುದಿಲ್ಲ, ವಿದ್ಯುತ್ ಕಂಬಗಳನ್ನು ಮಾತ್ರ ಅಳವಡಿಸಿದ್ದು ಇದಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಲು ಅವಶ್ಯವಿರುವ ಕಾಮಗಾರಿಗಳನ್ನು ಮಾಡಿರುವುದಿಲ್ಲ. ಈ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಭಿವೃದ್ಧಿದಾರರಿಗೆ ಸೂಚಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

2. ಕೇರ್ಗಳ್ಳಿ ಸರ್ವೆ ನಂ. 44/1, 2 ರ 0-36 ಗುಂಟೆ ಜಮೀನಿನಲ್ಲಿ ಮೆ|| ಆಶ್ರಿತ ರಿಯಲ್ಟರ್ಸ್ ರವರು ನಿರ್ಮಿಸಿರುವ ಖಾಸಗಿ ಬಡಾವಣೆಯಲ್ಲಿ ಮಳೆ ನೀರು ಹರಿಯಲು ನಿರ್ಮಿಸಿರುವ ‘ಎಲ್’ ಆಕಾರದ ಚರಂಡಿಯನ್ನು ಸೇರಿಸಿ ಮನೆ ನಿರ್ಮಿಸುತ್ತಿರುವುದು ಕಂಡುಬಂದಿದ್ದು, ಈ ಬಗ್ಗೆ ಮನೆ ನಿರ್ಮಿಸಲು ಪ್ರಾಧಿಕಾರದಿಂದ ನೀಡಲಾಗಿರುವ ನಕ್ಷೆ ಹಾಗೂ ರಹದಾರಿಯನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

3. ದಟ್ಟಗಳ್ಳಿ ಬಡಾವಣೆಯಲ್ಲಿ ಪ್ರಾಧಿಕಾರದ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದವರು ನಿರ್ಮಿಸಿರುವ ಖಾಸಗಿ ವಸತಿ ಬಡಾವಣೆಯ ನಿವಾಸಿಗಳು ಕೋರಿರುವಂತೆ ಮೂಲಭೂತ ಸೌಕರ್ಯಗಳನ್ನು ತ್ವರಿತವಾಗಿ ಕಲ್ಪಿಸುವಂತೆ ಈ ಬಡಾವಣೆಯ ಸಹಕಾರ ಸಂಘದವರಿಗೆ ತಿಳುವಳಿಕೆ ಪತ್ರವನ್ನು ನೀಡುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

4. ಬೆಳವಾಡಿ ಗ್ರಾಮದ ಸರ್ವೆ ನಂಬರ್ 364 ರ 2-04 ಎಕರೆ ಪ್ರದೇಶದಲ್ಲಿ ಶ್ರೀ ಬಿ.ಪಿ.ಸತೀಶ್ ರವರು ನಿರ್ಮಿಸಿರುವ ಖಾಸಗಿ ವಸತಿ ಬಡಾವಣೆಯಲ್ಲಿ ವಿದ್ಯುತ್ ಸೌಲಭ್ಯಗಳನ್ನು ಕಲ್ಪಿಸುವ ಕಾಮಗಾರಿಗಳನ್ನು ಅಭಿವೃದ್ಧಿದಾರರು ನಿರ್ವಹಿಸುವಂತೆ ತಿಳಿಸಲು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

5. ಶ್ರೀ ಜವರೇಗೌಡರವರು ಬೆಳವಾಡಿ ಗ್ರಾಮದ ಸರ್ವೆ ನಂಬರ್ 372/2 ರ 00.39.5 ಗುಂಟೆ ಜಮೀನಿನಲ್ಲಿ ನಿರ್ಮಿಸಿರುವ ಖಾಸಗಿ ವಸತಿ ಬಡಾವಣೆಯಲ್ಲಿ 9.00 ಮೀಟರ್ ರಸ್ತೆ ನಿರ್ಮಿಸಿದ್ದು, ಪಕ್ಕದ ಬಡಾವಣೆಯ ರಸ್ತೆಯೂ ಸೇರಿ 18.00 ಮೀಟರ್ ರಸ್ತೆ ನಿರ್ಮಿಸಬೇಕಾಗಿದ್ದು, ರಸ್ತೆಯ ಮಧ್ಯೆ ವಿದ್ಯುತ್ ಕಂಬಗಳು ಹಾದು ಹೋಗಿರುವುದು ಕಂಡುಬಂದಿರುತ್ತದೆ. ಆದ್ದರಿಂದ ಪಕ್ಕದ ಬಡಾವಣೆಯ ನಕ್ಷೆಯನ್ನು ಪರಿಶೀಲಿಸಿ ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ 18.00 ಮೀಟರ್ ರಸ್ತೆ ಮುಂದುವರೆಸುವ ಬಗ್ಗೆ ಕ್ರಮವಹಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

6. ಬೆಳವಾಡಿ ಗ್ರಾಮದ ಸರ್ವೆ ನಂ. 111/1, 2, 3 ರಲ್ಲಿ ಒಟ್ಟು 3 ಎಕರೆ 21 ಗುಂಟೆ ಪ್ರದೇಶದಲ್ಲಿ ಶ್ರೀ ಶಿವಮೂರ್ತಿ ರವರು ನಿರ್ಮಿಸಿರುವ ಖಾಸಗಿ ವಸತಿ ಬಡಾವಣೆಯಲ್ಲಿ ರಸ್ತೆಗಳು ಆಗಿರುವುದಿಲ್ಲ, ವಿದ್ಯುತ್ ಕಂಬಗಳನ್ನು ಅಳವಡಿಸಿರುವುದಿಲ್ಲ, ಸಿ.ಎ. ನಿವೇಶನಕ್ಕೆ ಫೆನ್ಸಿಂಗ್ ಅಳವಡಿಸಿರುವುದಿಲ್ಲ. ಈ ಕೆಲಸಗಳನ್ನು ನಿರ್ವಹಿಸುವಂತೆ ಅಭಿವೃದ್ಧಿದಾರರಿಗೆ ತಿಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

7. ಬೆಳವಾಡಿ ಗ್ರಾಮದ ಸರ್ವೆ ನಂಬರ್ 94/1 ರ 2ಎಕರೆ 06 ಗುಂಟೆ ಪ್ರದೇಶದಲ್ಲಿ ಶ್ರೀ ವಿವೇಕಾನಂದ ಡೆವೆಲಪರ್ಸ್ ರವರು ನಿರ್ಮಿಸಿರುವ ಖಾಸಗಿ ವಸತಿ ಬಡಾವಣೆಯ ಸಿ.ಎ. ನಿವೇಶನಕ್ಕೆ ಫೆನ್ಸಿಂಗ್ ಅಳವಡಿಸಿರುವುದಿಲ್ಲ, ಸಿ.ಎ. ನಿವೇಶನದಲ್ಲಿ ಶೆಡ್ ಇರುವುದನ್ನು ತೆರವುಗೊಳಿಸಬೇಕಾಗಿರುತ್ತದೆ, ವಿದ್ಯುತ್ ಸೌಲಭ್ಯಕ್ಕೆ ಟ್ರಾನ್ಸ್‍ಫಾರ್ಮರ್ ಅಳವಡಿಸಬೇಕಾಗಿರುತ್ತದೆ ಹಾಗೂ ವಿದ್ಯುತ್ ಕಂಬಗಳಿಗೆ ವಿದ್ಯುತ್ ತಂತಿಗಳನ್ನು ಹಾಕಬೇಕಾಗಿರುತ್ತದೆ. ಈ ಕೆಲಸಗಳನ್ನು ನಿರ್ವಹಿಸುವಂತೆ ಅಭಿವೃದ್ಧಿದಾರರಿಗೆ ತಿಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

8. ಬೆಳವಾಡಿ ಗ್ರಾಮದ ಸರ್ವೆ ನಂಬರ್ 77/2,3 ರ 1-38 ಎಕರೆ ಪ್ರದೇಶದಲ್ಲಿ ಶ್ರೀ ಕೂರ್ಗಳ್ಳಿ ಮಹದೇವು ಮತ್ತು ಶ್ರೀ ಕಾರ್ಯಪ್ಪ ರವರು ನಿರ್ಮಿಸಿರುವ ಖಾಸಗಿ ವಸತಿ ಬಡಾವಣೆಯ ಸಿ.ಎ. ನಿವೇಶನಕ್ಕೆ ಫೆನ್ಸಿಂಗ್ ಅಳವಡಿಸಿರುವುದಿಲ್ಲ, ವಿದ್ಯುತ್ ಸೌಲಭ್ಯ ಕಲ್ಪಿಸಲು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿರುವುದಿಲ್ಲ. ಈ ಕೆಲಸಗಳನ್ನು ನಿರ್ವಹಿಸುವಂತೆ ಅಭಿವೃದ್ಧಿದಾರರಿಗೆ ತಿಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

9. ಶ್ರೀ ಜಿ.ಎಂ.ರಾಮಚಂದ್ರ ಮತ್ತು ನಾಗಮ್ಮ ರವರು ಇಲವಾಲ ಗ್ರಾಮದ ಸರ್ವೆ ನಂಬರ್ 229/4 ರ 3-30 ಗುಂಟೆ ಪ್ರದೇಶದಲ್ಲಿ ನಿರ್ಮಿಸಿರುವ ಖಾಸಗಿ ವಸತಿ ಬಡಾವಣೆಯ ಸಿ.ಎ. ನಿವೇಶನಕ್ಕೆ ಫೆನ್ಸಿಂಗ್ ಅಳವಡಿಸಿರುವುದಿಲ್ಲ, ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು ಇದಕ್ಕೆ ವಿದ್ಯುತ್ ತಂತಿಗಳನ್ನು ಹಾಕಿರುವುದಿಲ್ಲ. ಈ ಕೆಲಸಗಳನ್ನು ನಿರ್ವಹಿಸುವಂತೆ ಅಭಿವೃದ್ಧಿದಾರರಿಗೆ ತಿಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

10. ಹುಯಿಲಾಳು ಗ್ರಾಮದ ಸರ್ವೆ ನಂಬರ್ 67 ಮತ್ತು 70 ರ 6-11 ಗುಂಟೆ ಪ್ರದೇಶದಲ್ಲಿ ಶ್ರೀ ಬಿ.ಎನ್.ಚಲಪತಿರವರು ನಿರ್ಮಿಸಿರುವ ಖಾಸಗಿ ವಸತಿ ಬಡಾವಣೆಯ ಉದ್ಯಾನವನಕ್ಕೆ ಸೇರಿದಂತೆ ಪಾತ್‍ವೇ ನಿರ್ಮಿಸಿದ್ದು, ಇದರ ಪಕ್ಕದಲ್ಲಿ ನಿವೇಶನಗಳಿದ್ದು, ಸದರಿ ಪಾತ್‍ವೇ ನಿರ್ಮಿಸಿರುವುದು ಸೂಕ್ತವಾಗಿಲ್ಲದಿರುವುದು ಕಂಡುಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಕಡತವನ್ನು ಪರಿಶೀಲಿಸಿ ಪೂರ್ಣ ವಿವರಗಳನ್ನು ಸಲ್ಲಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

11. ಶ್ರೀ ರಾಜಣ್ಣ ರವರು ಇಲವಾಲ ಗ್ರಾಮದ ಸರ್ವೆ ನಂಬರ್ 243 244/2 ರ 2-04 ಗುಂಟೆ ನಿರ್ಮಿಸಿರುವ ಖಾಸಗಿ ವಸತಿ ಬಡಾವಣೆಯಲ್ಲಿ 2ನೇ ಹಂತದ ನಿವೇಶನಗಳನ್ನು ಬಿಡುಗಡೆ ಮಾಡಲು ಅವಶ್ಯವಿರುವ ಕಾಮಗಾರಿಗಳನ್ನು ನಿರ್ವಹಿಸಿರುವುದಿಲ್ಲ. ಈ ಕೆಲಸಗಳನ್ನು ನಿರ್ವಹಿಸುವಂತೆ ಅಭಿವೃದ್ಧಿದಾರರಿಗೆ ತಿಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

12. ವಿಜಯನಗರ 4ನೇ ಹಂತ 2ನೇ ಫೇಸ್‍ನಲ್ಲಿ ಮಂಜೂರಾಗಿರುವ ನಿ.ಸಂ. 1413 ಕ್ಕೆ ಬದಲಿ ನಿವೇಶನ ನೀಡಲು ಕೋರಿರುವ ಸಂಬಂಧ ಸ್ಥಳಪರಿಶೀಲನೆ ನಡೆಸಲಾಗಿದ್ದು, ಸ್ಥಳಪರಿಶೀಲನಾ ವೇಳೆಯಲ್ಲಿ ಹಾಜರಿದ್ದ ಅಧಿಕಾರಿಗಳು ಸದರಿ ನಿವೇಶನ ಸೇರಿದಂತೆ ಒಟ್ಟು 42 ನಿವೇಶನಗಳನ್ನು ಬಸವನಹಳ್ಳಿ ಗ್ರಾಮದ ಸರ್ವೆ ನಂಬರ್ 17ರ ಸುಮಾರು 42 ಎಕರೆ ಜಮೀನಿನಲ್ಲಿ ನಿರ್ಮಿಸಿರುವುದಾಗಿ ತಿಳಿಸಿದ್ದು, ಈ ಸರ್ವೆ ನಂಬರ್ ದುರಸ್ತಿ ಆಗಿಲ್ಲವೆಂದು ಸಂಬಂಧಪಟ್ಟ ಭೂಮಾಲಿಕರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ಈ ನ್ಯಾಯಾಲಯದ ಪ್ರಕರಣದ ಪೂರ್ಣ ಮಾಹಿತಿಯನ್ನು ಕೂಡಲೆ ಸಲ್ಲಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

13. ಯಾದವಗಿರಿ ಕೈಗಾರಿಕಾ ಬಡಾವಣೆಯ 2ನೇ ಮುಖ್ಯ ರಸ್ತೆಯಲ್ಲಿರುವ ಗುಜರಾತಿ ಸಮಾಜದ ಸಮೂದಾಯ ಭವನದ ಮುಂಭಾಗದಲ್ಲಿ ಪ್ರಾಧಿಕಾರಕ್ಕೆ ಸೇರಿದ ಜಾಗವಿದ್ದು, ಈ ಜಾಗವನ್ನು ಪ್ರಾಧಿಕಾರದಿಂದ ಅನುಮೋದನೆಯಾಗಿರುವ ಬಡಾವಣೆಯ ನಕ್ಷೆಯಲ್ಲಿ ವಾಣಿಜ್ಯ ಸಂಕೀರ್ಣಕ್ಕಾಗಿ ಕಾಯ್ದಿರಿಸಿರುವುದು ಕಂಡುಬಂದಿದ್ದು, ಇಲ್ಲಿನ ನಿವಾಸಿಗಳು ಈ ಪ್ರದೇಶಕ್ಕೆ ಬಸ್ ಸೌಲಭ್ಯವಿರುವುದಿಲ್ಲ, ಮೆಡಿಕಲ್ ಸ್ಟೋರ್ ಹಾಗೂ ಹಣ್ಣು, ತರಕಾರಿ ಇತರೆ ಅವಶ್ಯವಿರುವ ಪಧಾರ್ಥಗಳನ್ನು ಖರೀದಿಸಲು ದೇವರಾಜ ಮಾರುಕಟ್ಟೆಗೆ ಹೋಗಬೇಕಾಗಿರುತ್ತದೆ. ಹಲವು ವರ್ಷಗಳಿಂದ ಈ ಬಗ್ಗೆ ನಮಗೆ ಸಮಸ್ಯೆಯಾಗಿರುತ್ತದೆ. ಕೂಡಲೇ ನಮಗೆ ಈ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿಕೊಡುವಂತೆ ಈ ವಾರ್ಡಿನ ನಗರಪಾಲಿಕೆ ಸದಸ್ಯರೊಂದಿಗೆ ಒತ್ತಾಯ ಮಾಡಿರುತ್ತಾರೆ. ಈ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಅಂದಾಜು ಪಟ್ಟಿಯನ್ನು ಸಿದ್ದಪಡಿಸಿ ಪ್ರಾಧಿಕಾರದ ಸಭೆಯ ಮುಂದೆ ಮಂಡಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

14. ಹೆಬ್ಬಾಳು ಬಡಾವಣೆಗೆ ಸೇರಿದಂತೆ ರಿಂಗ್ ರಸ್ತೆಯ ಹತ್ತಿರವಿರುವ ಲಿಯೋ ಜನಾನಿ ಅಪಾರ್ಟ್‍ಮೆಂಟ್ ಮುಂಭಾಗದಲ್ಲಿರುವ ರಸ್ತೆಯ ಪ್ರದೇಶದ ಬಗ್ಗೆ ಪರಿಶೀಲಿಸಿ ವರದಿಯನ್ನು ಸಲ್ಲಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

15. ಬೆಲವತ್ತ ಗ್ರಾಮದ ಸ.ನಂ. 33ರ ಜಮೀನಿನಲ್ಲಿರುವ ಫಾರಂ ಹೌಸ್ ಕಟ್ಟಡದ ಪ್ರದೇಶವು ಹೊರ ವರ್ತುಲ ರಸ್ತೆಗೆ ಅವಶ್ಯಕವಾಗಿ ಬೇಕಾಗಿರುವುದರಿಂದ ಈ ಪ್ರದೇಶವನ್ನು ಸದರಿ ಭೂಮಾಲಿಕರೊಡನೆ ಪರಸ್ಪರ ಒಪ್ಪಂದದ ಆಧಾರದ ಮೇಲೆ ಭೂಸ್ವಾಧೀನಪಡಿಸಿಕೊಳ್ಳಲು ಕ್ರಮವಹಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

16. ಕ್ಯಾತಮಾರನಹಳ್ಳಿ ಪರಿಶಿಷ್ಟ ಜಾತಿ (ಆದಿ ಕರ್ನಾಟಕ) ಜನಾಂಗದ ಸ್ಮಶಾನದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಕೊಡುವಂತೆ ಸರ್ವಜನಾಂಗ ಹಿತರಕ್ಷಣಾ ವೇದಿಕೆ (ರಿ) ರವರು ಕೋರಿರುವ ಬಗ್ಗೆ ಸ್ಥಳಪರಿಶೀಲಿಸಿದ್ದು, ಈ ಸ್ಮಶಾನದ ಪಕ್ಕದಲ್ಲಿರುವ ಪ್ರಾಧಿಕಾರಕ್ಕೆ ಸೇರಿದ ಜಾಗದ ಬಗ್ಗೆ ಹಾಗೂ ಪ್ರಾಧಿಕಾರಕ್ಕೆ ಸೇರಿದ ಜಾಗವು ಅನಧಿಕೃತವಾಗಿ ಒತ್ತುವರಿಯಾಗಿರುವ ಬಗ್ಗೆಯೂ ಸಹ ಪರಿಶೀಲಿಸಿ ವರದಿಯನ್ನು ನೀಡುವಂತೆ ಹಾಗೂ ಸ್ಮಶಾನದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವ ಬಗ್ಗೆ ಅಂದಾಜು ಪಟ್ಟಿಯನ್ನು ಸಿದ್ದಪಡಿಸಿ ಸಲ್ಲಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

17. ದೇವನೂರು ಗ್ರಾಮದ ಸರ್ವೆ ನಂಬರ್ 32/ಪಿ, 32/3, 33/1 ರಲ್ಲಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಪಡಿಸಿ 21 ನಿವೇಶನಗಳನ್ನು ರಚಿಸಲಾಗಿರುವ ಬಗ್ಗೆ ಬಡಾವಣೆಯ ನಕ್ಷೆಯನ್ನು ಸಿದ್ದಪಡಿಸಿ, ಈ ನಿವೇಶನಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಲು ಪ್ರಾಧಿಕಾರದ ಸಭೆಯ ಅನುಮೋದನೆಗಾಗಿ ಸಿದ್ದಪಡಿಸಿ ಸಲ್ಲಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
 
ಸಂಖ್ಯೆ: ಅಆಸಶಾ/49/2015-16 ದಿನಾಂಕ:02-10-2015

ದಿನಾಂಕ: 02.10.2015 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರಾಧಿಕಾರದ ಸಭಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ 146ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ.ಆರ್.ಮೋಹನ್‍ಕುಮಾರ್ ರವರು, ಪ್ರಾಧಿಕಾರದ ಆಯುಕ್ತರಾದ ಡಾ.ಎಂ.ಮಹೇಶ್, ಅಧೀಕ್ಷಕ ಅಭಿಯಂತರರಾದ ಶ್ರೀ ಎಂ.ಶಿವಕುಮಾರ್, ನಗರಯೋಜನಾ ಸದಸ್ಯರಾದ ಶ್ರೀ ಎಂ.ಸಿ.ಶಶಿಕುಮಾರ್, ಕಾರ್ಯದರ್ಶಿಯವರಾದ ಶ್ರೀ ಎನ್.ಎಸ್. ಚಿದಾನಂದ, ಕಾರ್ಯಪಾಲಕ ಅಭಿಯಂತರರಾದ ಶ್ರೀ ರವಿಕುಮಾರ್, ಶ್ರೀ ಡಿ.ಎ.ಹಲಗಿ, ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಮತ್ತು ಪ್ರಾಧಿಕಾರದ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿರುತ್ತಾರೆ.

ಅಧ್ಯಕ್ಷರ ಆಪ್ತ ಸಹಾಯಕ ಶಾಖೆ,
ಮೈ.ನ.ಪ್ರಾ., ಮೈಸೂರು.
 
ಸಂಖ್ಯೆ: ಅಆಸಶಾ.:47/2015-16 ದಿನಾಂಕ:30-09-2015
ನರ್ಮ್ ಯೋಜನೆಯಡಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗುತ್ತಿರುವ ಹೊರವರ್ತುಲ ರಸ್ತೆಯಲ್ಲಿ ಬರುವ ಆಲನಹಳ್ಳಿ ಗ್ರಾಮದ ಸರ್ವೇ ನಂಬರ್ 74/1 ರಲ್ಲಿ 1ಎಕರೆ 15ಗುಂಟೆ ಜಮೀನನ್ನು ಪ್ರಾಧಿಕಾರವು ಭೂಸ್ವಾಧೀನಪಡಿಸಿಕೊಂಡು ಈ ಜಾಗಕ್ಕೆ ಬದಲಿಯಾಗಿ ಸರ್ವೇ ನಂಬರ್ 75/2 ರಲ್ಲಿ ನೀಡಲಾಗಿದ್ದು, ಸರ್ವೇ ನಂಬರ್ 74/1 ರಲ್ಲಿ ಇರುವಂತಹ ಕಟ್ಟಡ ಹಾಗೂ ಮಾಲ್ಕಿಗಳಿಗೆ ಪರಿಹಾರವನ್ನು ಸಹ ನೀಡಲಾಗಿದ್ದು, ಈ ಪ್ರದೇಶವನ್ನು ವೀರಭದ್ರೇಶ್ವರ ಐ.ಟಿ.ಐ. ಕಾಲೇಜಿನ ಆಡಳಿತ ಮಂಡಳಿಯವರಿಂದ ಪ್ರಾಧಿಕಾರಕ್ಕೆ ನೋಂದಣಿ ಕರಾರಿನ ಮೂಲಕ ಸ್ವಾಧೀನವನ್ನು ಪಡಿಸಿಕೊಳ್ಳಲಾಗಿರುತ್ತದೆ.
ಹೊರವರ್ತುಲ ರಸ್ತೆಯ ಪ್ಯಾಕೇಜ್ ನಂಬರ್-5 ರ ಬನ್ನೂರು ಜಂಕ್ಷನ್‍ನಿಂದ ನಂಜನಗೂಡು ರಸ್ತೆಯ ಜಂಕ್ಷನ್ ವರೆಗಿನ ಸರಪಳಿ 0+480 ಕಿ.ಮೀ. ನಿಂದ 0+660 ಕಿ.ಮೀ. ವರೆಗಿನ 180.00 ಮೀ. ಉದ್ದದ ಭೂಮಿಯ ಸ್ವಾಧೀನದ ಸಮಸ್ಯೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಆಯುಕ್ತರ ಪ್ರಯತ್ನದಿಂದ ನ್ಯಾಯಾಲಯದಲ್ಲಿದ್ದ ಮೊಕದ್ದಮೆಯನ್ನು ಇತ್ಯರ್ಥಪಡಿಸಿ, ಸುಮಾರು 5ವರ್ಷಗಳಿಗೂ ಮೇಲ್ಪಟ್ಟು ಇದ್ದ ಸಮಸ್ಯೆಯನ್ನು ಬಗೆಹರಿಸಿ, ಸದರಿ ಪ್ರದೇಶದಲ್ಲಿರುವ ಸುಮಾರು 12.00 ಚದರ ಆರ್.ಸಿ.ಸಿ. ಕಟ್ಟಡ, ಸುಮಾರು 25.00 ಚದರ ಕಾಲೇಜಿನ ಎ.ಸಿ. ಶೀಟ್ ಕಟ್ಟಡ, ಸುಮಾರು 115 ತೆಂಗಿನ ಮರಗಳು ಹಾಗೂ ಇತರೆ ಮರಗಳನ್ನು ದಿನಾಂಕ 30.09.2015ರಂದು ಬೆಳಗ್ಗೆ 10.00 ಘಂಟೆಗೆ ನೆಲಸಮಗೊಳಿಸುವ ಕಾರ್ಯಾಚರಣೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ.ಆರ್.ಮೋಹನ್‍ಕುಮಾರ್ ರವರು ಚಾಲನೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಡಾ.ಎಂ.ಮಹೇಶ್, ಅಧೀಕ್ಷಕ ಅಭಿಯಂತರರಾದ ಶ್ರೀ ಎಂ.ಶಿವಕುಮಾರ್, ನಗರಯೋಜನಾ ಸದಸ್ಯರಾದ ಶ್ರೀ ಎಂ.ಸಿ.ಶಶಿಕುಮಾರ್, ಕಾರ್ಯಪಾಲಕ ಅಭಿಯಂತರರಾದ ಶ್ರೀ ರವಿಕುಮಾರ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಮಹೇಶ್, ಸಹಾಯಕ ಅಭಿಯಂತರರಾದ ಶ್ರೀ ಕೆ.ಪಿ.ರಾಜು, ಶ್ರೀ ನಿಂಗರಾಜು ಮತ್ತು ಇತರೆ ಸಿಬ್ಬಂದಿ ವರ್ಗದವರು ಹಾಗೂ ಗುತ್ತಿಗೆದಾರರಾದ ಶ್ರೀ ಆಂಜನೇಯಲು ಹಾಜರಿರುತ್ತಾರೆ.

ಅಧ್ಯಕ್ಷರ ಆಪ್ತ ಸಹಾಯಕ ಶಾಖೆ,
ಮೈ.ನ.ಪ್ರಾ., ಮೈಸೂರು.
 
ಸಂಖ್ಯೆ: ಆಆಸಶಾ/46/2015-16 ದಿನಾಂಕ:09-09-2015
ದಿನಾಂಕ:09-09-2015 ರಂದು ಚಾಮುಂಡೇಶ್ವರಿ ಕ್ಷೇತ್ರದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಲಯ ಕಛೇರಿ-7ರ ವ್ಯಾಪ್ತಿಯಲ್ಲಿ ಬರುವ ಒಟ್ಟು ಅಂದಾಜು ಮೊತ್ತ ರೂ. 287.00 ಲಕ್ಷಗಳ ಈ ಕೆಳಕಂಡ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ.ಆರ್.ಮೋಹನ್‍ಕುಮಾರ್ ರವರು ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಶ್ರೀ ಜಿ.ಟಿ.ದೇವೇಗೌಡರವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಟಿ.ಕೆ.ರವಿ, ಪ್ರಾಧಿಕಾರದ ಸದಸ್ಯರಾದ ಶ್ರೀ ಅನ್ವರ್ ಪಾಷ ಉ: ಅನ್ನೂ ಭಾಯಿ, ಶ್ರೀ ಸಿ.ಜಿ.ಶಿವಕುಮಾರ್, ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದದ ಶ್ರೀ ಶಂಕರ್, ಮೈಸೂರು ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಾದ ಶ್ರೀ ಗೋವಿಂದಪ್ಪ, ಪ್ರಾಧಿಕಾರದ ಅಭಿಯಂತರರುಗಳು ಹಾಗೂ ಇತರೆ ಜನಪ್ರತಿನಿಧಿಗಳು ಹಾಜರಿರುತ್ತಾರೆ.
1. ಆರ್.ಟಿ.ನಗರ ‘ಡಿ’ವಲಯದಿಂದ ಒಳಚರಂಡಿ ಔಟ್‍ಫಾಲ್ ನಿರ್ಮಾಣ ಕಾಮಗಾರಿ ಸರಪಳಿ (0.00 ರಿಂದ 690ಮೀ ವರೆಗೆ)
2. ಆರ್.ಟಿ.ನಗರ ‘ಡಿ’ ವಲಯದಿಂದ ಒಳಚರಂಡಿ ಔಟ್‍ಫಾಲ್ ನಿರ್ಮಾಣ ಕಾಮಗಾರಿ. ಸರಪಳಿ (690.00 ರಿಂದ 1380.00 ಮೀ ವರೆಗೆ)
3. ಆರ್.ಟಿ.ನಗರ ‘ಡಿ’ ವಲಯದಿಂದ ಒಳಚರಂಡಿ ಔಟ್‍ಫಾಲ್ ನಿರ್ಮಾಣ ಕಾಮಗಾರಿ. ಸರಪಳಿ (1380.00 ರಿಂದ 2040.00 ಮೀ ವರೆಗೆ)
4. ಆರ್.ಟಿ.ನಗರ ‘ಡಿ’ ವಲಯದಿಂದ ಒಳಚರಂಡಿ ಔಟ್‍ಫಾಲ್ ನಿರ್ಮಾಣ ಕಾಮಗಾರಿ. ಸರಪಳಿ (2040.00 ರಿಂದ 2340.00 ಮೀ ವರೆಗೆ)
5. ಕೇರ್ಗಳ್ಳಿಯಿಂದ ಆರ್.ಟಿ. ನಗರ ಮುಖ್ಯ ರಸ್ತೆಗೆ ಸೇರುವ ರಸ್ತೆಗೆ ಅಡ್ಡಲಾಗಿ ಸೇತುವೇ ನಿರ್ಮಾಣ ಕಾಮಗಾರಿ.
6. ಲಿಂಗಾಂಬುದಿ ಕೆರೆಯ ಉಳಿಕೆ ಪ್ರದೇಶದ ಚೈನ್‍ಲಿಂಕ್ ಫೆನ್ಸ್ ಅಳವಡಿಸುವುದು (ದಕ್ಷಿಣ ಭಾಗದಲ್ಲಿ)
7. ಲಿಂಗಾಂಬುದಿ ಕೆರೆಯ ಚೈನ್ ಲಿಂಕ್ ಫೆನ್ಸಿಂಗ್‍ಗೆ ಹೆಚ್ಚುವರಿ ಕಾಮಗಾರಿ (ಪಶ್ಚಿಮ ಭಾಗದಲ್ಲಿ)
8. ಮೈಸೂರು ನಗರ ಲಿಂಗಾಂಬುದಿ ಟ್ಯಾಂಕ್ ಬಂಡ್ ರಸ್ತೆಯ ಸರಪಳಿ 0.00 ಮೀ.ಯಿಂದ 210.00 ಮೀ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ.
9. ಮೈಸೂರು ನಗರ ಲಿಂಗಾಂಬುದಿ ಟ್ಯಾಂಕ್ ಬಂಡ್ ರಸ್ತೆಯ ಸರಪಳಿ 210.00 ಮೀ. ಯಿಂದ 420.00 ಮೀ. ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ.
10. ಮೈಸೂರು ನಗರ ಲಿಂಗಾಂಬುದಿ ಟ್ಯಾಂಕ್ ಬಂಡ್ ರಸ್ತೆಯ ಸರಪಳಿ 420.00 ಮೀ. ಯಿಂದ 600.00 ಮೀ. ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ.
11. ಮೈಸೂರು ನಗರ ಲಿಂಗಾಂಬುದಿ ಟ್ಯಾಂಕ್ ಬಂಡ್ ರಸ್ತೆಯ ಸರಪಳಿ 780.00 ಮೀ. ಯಿಂದ 1000.00 ಮೀ. ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ.
12. ಮೈಸೂರು ನಗರ ಲಿಂಗಾಂಬುದಿ ಟ್ಯಾಂಕ್ ಬಂಡ್ ರಸ್ತೆಯ ಸರಪಳಿ 600.00 ಮೀ. ಯಿಂದ 780.00 ಮೀ. ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ.
13. ಲಿಂಗಾಂಬುದಿ ಗ್ರಾಮದಲ್ಲಿ ಇರುವ ಪುರಾತನ ಕಾಲದ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ರಸ್ತೆ ಅಭಿವೃದ್ಧಿ ಹಾಗೂ ಆರ್ ಸಿ ಸಿ ಟೆಕ್ ಸ್ಲಾಬ್ ಅಳವಡಿಸುವ ಕಾಮಗಾರಿ.
14. ಲಿಂಗಾಂಬುದಿ ಗ್ರಾಮದಲ್ಲಿ ಇರುವ ಪುರಾತನ ಕಾಲದ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದ ಒಳಾಂಗಣಕ್ಕೆ ಟ್ರಸ್ ಅಳವಡಿಸುವ ಕಾಮಗಾರಿ.
15. ಮೈಸೂರು ನಗರ ರಾಮಕೃಷ್ಣನಗರ ವಾರ್ಡ್ ನ. 16ರ ‘ಐ’ಬ್ಲಾಕ್‍ನಲ್ಲಿ ವಿನಾಯಕ (ಕೆನರಾ ಬ್ಯಾಂಕ್) ಉದ್ಯಾನವನದ ಅಭಿವೃದ್ಧಿ ಕಾಮಗಾರಿ.
16. ರಾಮಕೃಷ್ಣನಗರ ‘ಹೆಚ್’ ಬ್ಲಾಕ್ ಹತ್ತಿರದ ಲಿಂಗಾಬುದಿ ಕೆರೆಯ ಆವರಣದಲ್ಲಿ ವಾಕಿಂಗ್ ಪಾತ್‍ವೇ ನಿರ್ಮಾಣ ಕಾಮಗಾರಿ.

ಅಧ್ಯಕ್ಷರ ಆಪ್ತಸಹಾಯಕರು,
ಮೈ.ನ.ಪ್ರಾ. ಮೈಸೂರು.
 
09-07-2015 Nanjangud Spot inspection ಪತ್ರಿಕಾ ಪ್ರಕಟಣೆ

ಸಂಖ್ಯೆ: ಆಆಸಶಾ/30/2015-16 ದಿನಾಂಕ:04-06-2015
ಪತ್ರಿಕಾ ಪ್ರಕಟಣೆ
ದಿನಾಂಕ: 04.06.2015 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರಾಧಿಕಾರದ ಆವರಣದಲ್ಲಿ ಮಹಾರಾಜ ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 131ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು ಮತ್ತು ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಶ್ರೀ. ಕೆ.ಆರ್.ಮೋಹನ್‍ಕುಮಾರ್ ರವರು ಮಹಾರಾಜ ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಎಸ್.ಪಾಲಯ್ಯ, ಅಧೀಕ್ಷಕ ಅಭಿಯಂತರರಾದ ಶ್ರೀ ಎಂ.ಶಿವಕುಮಾರ್, ನಗರಯೋಜನಾ ಸದಸ್ಯರಾದ ಶ್ರೀ ಎಂ.ಸಿ.ಶಶಿಕುಮಾರ್, ಕಾರ್ಯದರ್ಶಿಯವರಾದ ಶ್ರೀ ಎನ್.ಎಸ್. ಚಿದಾನಂದ ಹಾಗೂ ಕಾರ್ಯಪಾಲಕ ಅಭಿಯಂತರರುಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಪ್ರಾಧಿಕಾರದ ಎಲ್ಲಾ ಅಧಿಕಾರಿ ವರ್ಗದವರು / ಸಿಬ್ಬಂದಿ ವರ್ಗದವರು ಹಾಜರಿರುತ್ತಾರೆ.

ಅಧ್ಯಕ್ಷರ ಆಪ್ತ ಸಹಾಯಕ ಶಾಖೆ,
ಮೈ.ನ.ಪ್ರಾ., ಮೈಸೂರು.

 
ಸಂಖ್ಯೆ ಮೈನಪ್ರಾ/ವ.ಕ-1/ಪ.ಪ್ರ/2014-15 ದಿನಾಂಕ 16.05.2015
ಪತ್ರಿಕಾ ಪ್ರಕಟಣೆ
ದಿನಾಂಕ 16.05.2015ರಂದು ಸುರಿದ ಭಾರಿ ಮಳೆಗೆ ಮೈಸೂರು ನಗರ ಶ್ರೀರಾಂಪುರ ಬಡಾವಣೆಯಲ್ಲಿರುವ ಮಳೆ ನೀರಿನ ಚರಂಡಿ (Storm water drain) ಹೊಡೆದು ಮಳೆ ನೀರು ಸುತ್ತಮುತ್ತಲಿನ ಮನೆಗಳಿಗೆ ನುಗಿದ್ದು, ಸದರಿ ಮಳೆ ನೀರಿನ ಚರಂಡಿಯನ್ನು ಪರಿಶೀಲಿಸಿ ದುರಸ್ತಿಗೊಳಿಸಲು ಸಂಬಂಧಪಟ್ಟ ಅಬಿಯಂತರುಗಳಿಗೆ ಸೂಚಿಸಲಾಯಿತು.

ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಪ್ರಾಧಿಕಾರದ ಆಯುಕ್ತರಾದ ಎಸ್.ಪಾಲಯ್ಯ, ಅಧೀಕ್ಷಕ ಅಭಿಯಂತರಾದ ಎಸ್.ಶಿವಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಎಸ್.ಕೆ.ಭಾಸ್ಕರ್ ಹಾಗೂ ಸಂಬಂಧಪಟ್ಟ ಅಭಿಯಂತರು ಸ್ಥಳದಲ್ಲಿ ಹಾಜರಿದ್ದರು.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು
 
Contractors Meeting - Press Note
 
ಮಾನ್ಯರೇ,

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯಪಾಲಕ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ.ಎಸ್.ವೀರಭದ್ರಯ್ಯರವರು ಇಂದು ದಿನಾಂಕ 30.04.2015ರಂದು ವಯೋನಿವೃತ್ತಿ ಹೊಂದಿದರು. ಅವರಿಗೆ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಕೆ.ಆರ್.ಮೋಹನ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮವನ್ನು ಏರ್ಪಡಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಧೀಕ್ಷಕ ಅಭಿಯಂತರು, ತಾಂತ್ರಿಕ ಶಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಗೂ ಪ್ರಾಧಿಕಾರದ ನೌಕರರು ಭಾಗವಹಿಸಿದ್ದರು.

ವಂದನೆಗಳೊಂದಿಗೆ

ಅಧ್ಯಕ್ಷರ ಆಪ್ತಸಹಾಯಕ ಶಾಖೆ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ
ಮೈಸೂರು
 
ಸಂಖ್ಯೆ: ಅಆಸಶಾ/27/2015-16 ದಿನಾಂಕ:27-04-2015
ಪತ್ರಿಕಾ ಪ್ರಕಟಣೆ
ದಿನಾಂಕ:27-04-2015 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ.ಕೆ.ಆರ್.ಮೋಹನ್ ಕುಮಾರ್ ರವರು ವಲಯ-5ಎ ಮತ್ತು 5ಬಿ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ಸ್ಥಳಗಳ ಸ್ಥಳಪರಿಶೀಲನೆ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರರಾದ ಶ್ರೀ.ಎಸ್.ವೀರಭದ್ರಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರುಗಳಾದ ಶ್ರೀ.ರಂಗಸ್ವಾಮಿ, ಶ್ರೀ.ಜಿ.ಮೋಹನ್ ಹಾಗೂ ಸಂಬಂಧಪಟ್ಟ ಅಭಿಯಂತರರುಗಳು ಹಾಜರಿದ್ದರು.

1. ಯಾದವಗಿರಿ ಬಡಾವಣೆಯ ನಿವೇಶನ ಸಂಖ್ಯೆ 97 ಕ್ಕೆ ಮಂಜೂರು ಮಾಡಿರುವ ತುಂಡುಜಾಗದ ಬಗ್ಗೆ ಸ್ಥಳಪರಿಶೀಲಿಸಲಾಯಿತು. ಇವರಿಗೆ ಮಂಜೂರು ಮಾಡಿರುವ ತುಂಡುಜಾಗವು ನಿವೇಶನ ಸಂಖ್ಯೆ 98 ರಲ್ಲಿ ಬರುತ್ತಿದ್ದು, ಇದು ಪ್ರತ್ಯೇಕ ನಿವೇಶನವಾಗಿದ್ದು, ಈ ನಿವೇಶನವು ಬೇರೆಯವರಿಗೆ ಮಂಜೂರಾಗಿರುವ ಕಾರಣ ನಿವೇಶನ ಸಂಖ್ಯೆ 97 ರವರಿಗೆ ಮಂಜೂರು ಮಾಡಿರುವ ತುಂಡುಜಾಗವನ್ನು ರದ್ದುಪಡಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
2. ಬನ್ನಿಮಂಟಪ “ಸಿ” ಬ್ಲಾಕ್, ಕೆ.ಎಸ್.ಆರ್.ಟಿ.ಸಿ. ಬಡಾವಣೆಯ ನಿವೇಶನ ಸಂಖ್ಯೆ 94 ರಲ್ಲಿ ಮನೆಯನ್ನು ನಿರ್ಮಿಸಿದ್ದು, ಈ ಮನೆಗೆ ಹೊಂದಿಕೊಂಡಂತೆ ಮುಂಭಾಗದಲ್ಲಿ ಪ್ರಾಧಿಕಾರಕ್ಕೆ ಸೇರಿದ ಜಾಗವು ಮೂಲೆ ನಿವೇಶನವಾಗಿದ್ದು, ಮುಖ್ಯ ರಸ್ತೆಯಲ್ಲಿ ಬರುತ್ತಿದೆ. ಈ ಜಾಗವು ವಾಣಿಜ್ಯ ಉಪಯೋಗಕ್ಕೆ ಸೂಕ್ತವಾಗಿರುವುದು ಕಂಡುಬಂದಿರುತ್ತದೆ. ಆದರೆ ಸದರಿ ಮನೆಯ ಮಂಜೂರಾತಿದಾರರು ಮನೆಯ ಮುಂಭಾಗದಲ್ಲಿರುವ ಜಾಗವನ್ನು ಪ್ರಾಧಿಕಾರದಿಂದ ಮಂಜೂರು ಮಾಡಿಸಿಕೊಳ್ಳದೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದು, ಈ ಜಾಗವನ್ನು ಹರಾಜಿನ ಮೂಲಕ ವಿಲೇವಾರಿ ಮಾಡಿದಲ್ಲಿ ಪ್ರಾಧಿಕಾರಕ್ಕೆ ಹೆಚ್ಚಿನ ಆದಾಯ ಬರುವ ಅವಕಾಶವಿದ್ದು, ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.
3. ಮೈಸೂರು ನಗರದ ಹೃದಯ ಭಾಗದಲ್ಲಿರುವ ಹಳೆಯ ರಣಜಿತ್ ಥಿಯೇಟರ್ ಎದುರುಗಡೆ ಪ್ರಾಧಿಕಾರದಿಂದ 1990ನೇ ಸಾಲಿನಲ್ಲಿ ಅಂದಾಜು ರೂ. 11.47 ಲಕ್ಷ ವೆಚ್ಚದಲ್ಲಿ 0.47 ಎಕರೆ ಪ್ರದೇಶದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಟೆಂಡರ್ ಮೂಲಕ ಗುತ್ತಿಗೆದಾರರಿಗೆ ವಹಿಸಿರುವುದು ಹಾಗೂ ಪ್ರಾಧಿಕಾರದಿಂದ ರೂ. 11.55 ಲಕ್ಷಗಳನ್ನು ಮುಂಗಡವಾಗಿ ಗುತ್ತಿಗೆದಾರರಿಗೆ ನೀಡಿದ್ದರೂ ಸಹ ಕಾಮಗಾರಿಯನ್ನು ಪೂರ್ಣಗೊಳಿಸದಿರುವುದು ಕಂಡುಬಂದಿರುತ್ತದೆ. ಅಲ್ಲದೇ ಈ
ಸ್ಥಳದಲ್ಲಿ ಹಾಲಿ ಸೆಲ್ಲಾರ್ ನಿರ್ಮಿಸಿರುವ ಪಿಲ್ಲರ್‍ಗಳು ಮಾತ್ರ ಕಂಡುಬಂದಿದ್ದು, ಈ ಜಾಗವು ಪಾಳುಬಿದ್ದ ಜಾಗವಾಗಿದ್ದು ಪ್ರಾಧಿಕಾರದ ಉಪಯೋಗಕ್ಕೂ ಹಾಗೂ ಸಾರ್ವಜನಿಕರ ಉಪಯೋಗಕ್ಕೂ ಬಾರದ ಸ್ಥಿತಿಯಲ್ಲಿರುತ್ತದೆ. ಗುತ್ತಿಗೆದಾರರು ಸದರಿ ಕಾಮಗಾರಿಯನ್ನು ಪೂರ್ಣಗೊಳಿಸದಿರುವುದರಿಂದ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿದ್ದು, ಈ ಪ್ರಕರಣವು ನ್ಯಾಯಾಲಯದಲ್ಲಿ ಬಾಕಿ ಇರುವ ಬಗ್ಗೆ ಮಾಹಿತಿಯನ್ನು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳು ನೀಡಿರುತ್ತಾರೆ.
1990ನೇ ಸಾಲಿನಿಂದ ಇಲ್ಲಿಯವರೆಗೆ ಸುಮಾರು 25 ವರ್ಷಗಳು ಕಳೆದಿದ್ದರೂ ಸಹ ಈ ಪ್ರಕರಣವನ್ನು ಇತ್ಯರ್ಥಪಡಿಸದಿರುವ ಬಗ್ಗೆ ಅಸಮಾದಾನವನ್ನು ವ್ಯಕ್ತಪಡಿಸುತ್ತಾ, ನ್ಯಾಯಾಲಯದಲ್ಲಿರುವ ಪ್ರಕರಣದ ಪೂರ್ಣ ಮಾಹಿತಿಯನ್ನು ನೀಡುವಂತೆ ಹಾಗೂ ಈ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಸೂಕ್ತ ಕ್ರಮವಹಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಅಧ್ಯಕ್ಷರ ಆಪ್ತ ಸಹಾಯಕರು,
ಮೈ.ನ.ಪ್ರಾ., ಮೈಸೂರು.
 

ಸಂಖ್ಯೆ: ಆಆಸಶಾ/25/2015-16 ದಿನಾಂಕ:14-04-2015
ಪತ್ರಿಕಾ ಪ್ರಕಟಣೆ

ದಿನಾಂಕ: 14.04.2015 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪ್ರಾಧಿಕಾರದ ಸಭಾಂಗಣದಲ್ಲಿ ಭಾರತ ರತ್ನ ಡಾ|| ಬಿ.ಆರ್.ಅಂಬೇಡ್ಕರ್ ರವರ 124ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ.ಆರ್.ಮೋಹನ್‍ಕುಮಾರ್ ರವರು, ಪ್ರಾಧಿಕಾರದ ಆಯುಕ್ತರಾದ ಶ್ರೀ ಎಸ್.ಪಾಲಯ್ಯ, ಅಧೀಕ್ಷಕ ಅಭಿಯಂತರರಾದ ಶ್ರೀ ಎಂ.ಶಿವಕುಮಾರ್, ನಗರಯೋಜನಾ ಸದಸ್ಯರಾದ ಶ್ರೀ ಎಂ.ಸಿ.ಶಶಿಕುಮಾರ್, ಕಾರ್ಯದರ್ಶಿಯವರಾದ ಡಾ|| ನಂಜುಂಡೇಗೌಡ, ಕಾರ್ಯಪಾಲಕ ಅಭಿಯಂತರರಾದ ಶ್ರೀ ವೀರಭದ್ರಯ್ಯ, ಶ್ರೀ ಬಿ.ಎನ್.ಪ್ರಭಾಕರ್, ಶ್ರೀ ರವಿಕುಮಾರ್ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಮತ್ತು ಪ್ರಾಧಿಕಾರದ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿರುತ್ತಾರೆ.

ಅಧ್ಯಕ್ಷರ ಆಪ್ತ ಸಹಾಯಕ ಶಾಖೆ,
ಮೈ.ನ.ಪ್ರಾ., ಮೈಸೂರು.
 

ಸಂಖ್ಯೆ ಮೈನಪ್ರಾ/ಆಆಸಶಾ/ಪ.ಪ್ರ/2015-16 ದಿನಾಂಕ 13.04.2015
ಪತ್ರಿಕಾ ಪ್ರಕಟಣೆ
ದಿನಾಂಕ 13.04.2015ರಂದು ಬೆಳಗ್ಗೆ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಮಾನ್ಯ ಪ್ರತಾಪ್‍ಸಿಂಹರವರು ಪ್ರಾಧಿಕಾರದ ವತಿಯಿಂದ ನರ್ಮ್ ಯೋಜನೆಯಡಿ ನಡೆಯುತ್ತಿರುವ ಹೊರವರ್ತುಲ ರಸ್ತೆಯ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದರು ಹಾಗೂ ಜೂನ್-2015ರ ಅಂತ್ಯಕ್ಕೆ ಸಾರ್ವಜನಿಕ ಉಪಯೋಗಕ್ಕೆ ಲೋಕಾರ್ಪಣೆ ಮಾಡಲು ತಿಳಿಸಿದರು.

ಸ್ಥಳ ಪರಿಶೀಲನೆ ಸಂದರ್ಭದಲ್ಲಿ, ಪ್ರಾಧಿಕಾರದ ಆಯುಕ್ತರಾದ ಎಸ್.ಪಾಲಯ್ಯ, ಅಧೀಕ್ಷಕ ಅಭಿಯಂತರಾದ ಶಿವಕುಮಾರ್, ನರ್ಮ್ ಕಾರ್ಯಪಾಲಕ ಅಭಿಯಂತರಾದ ರವಿಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಮಹೇಶ್, ಸಂಬಂಧಪಟ್ಟ ಸಹಾಯಕ ಅಭಿಯಂತರು ಹಾಗೂ ಗುತ್ತಿಗೆದಾರರು ಸ್ಥಳದಲ್ಲಿ ಹಾಜರಿದ್ದರು.
ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು
Board Meeting 10th April 2015
 

Private layout Spot Inspection on 30.03.2015

 
ಸಂಖ್ಯೆ: ಅಆಸಶಾ/19/2014-15 ದಿನಾಂಕ:06-03-2015
ಪತ್ರಿಕಾ ಪ್ರಕಟಣೆ
ದಿನಾಂಕ: 06.03.2015 ರಂದು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ.ಆರ್.ಮೋಹನ್‍ಕುಮಾರ್ ರವರು ಈ ಕೆಳಗೆ ನಮೂದಿಸಿರುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆಯನ್ನು ಮಾಡಿರುತ್ತಾರೆ. ಸ್ಥಳಪರಿಶೀಲನಾ ಸಮಯದಲ್ಲಿ ಪ್ರಾಧಿಕಾರದ ನಗರ ಯೋಜನಾ ಸದಸ್ಯರಾದ ಶ್ರೀ ಎಂ.ಸಿ.ಶಶಿಕುಮಾರ್, ಕಾರ್ಯಪಾಲಕ ಅಭಿಯಂತರರಾದ ಶ್ರೀ.ವೀರಭದ್ರಯ್ಯ, ಶ್ರೀ ಬಿ.ಎನ್.ಪ್ರಭಾಕರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ರಾಜಶೇಖರ್, ಶ್ರೀ ಎಂ.ಪಿ.ದಿನೇಶ್, ಶ್ರೀ ಟಿ.ಕೆ.ರವಿ ಹಾಗೂ ಸಂಬಂಧಪಟ್ಟ ಅಭಿಯಂತರರು ಹಾಜರಿರುತ್ತಾರೆ.

1. ಹುಣಸೂರು ರಸ್ತೆಯ ನೀಲಗಿರಿಸ್‍ನಿಂದ ಬೋಗಾಧಿವರೆಗಿನ ಹಾಲಿ ಇರುವ ರಸ್ತೆಯ ಅಗಲೀಕರಣ ಕಾಮಗಾರಿಯನ್ನು ಪರಿಶೀಲಿಸಿ ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಲಾಯಿತು.

2. ವಿಜಯನಗರ 1ನೇ ಹಂತ ಬಡಾವಣೆಯಲ್ಲಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗಿರುವ ಕ್ರೀಡಾ ಸಂಕೀರ್ಣವನ್ನು ಪರಿಶೀಲಿಸಿ, ಈ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ 1ಎಕರೆ ಪ್ರದೇಶವಿದ್ದು, ಈ ಜಮೀನಿನ ಮಾಲಿಕತ್ವದ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ, ಅಳತೆಮಾಡಿ ತ್ವರಿತವಾಗಿ ಫೆನ್ಸಿಂಗ್ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

3. ಕರ್ನಾಟಕ ತಿಗಳರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕøತಿಕ ಸಂಘ (ರಿ) ರವರು ವಿಜಯನಗರ 3ನೇ ಹಂತ ಬಡಾವಣೆಯಲ್ಲಿರುವ ಸಿ.ಎ. ನಿವೇಶನ ಸಂಖ್ಯೆ 01 ರಲ್ಲಿ ಕಟ್ಟಡ ಕಟ್ಟಲು ನಕ್ಷೆಗೆ ಅನುಮೋದನೆ ನೀಡುವಂತೆ ಕೋರಿರುವ ಬಗ್ಗೆ ಸ್ಥಳ ಪರಿಶೀಲಿಸಲಾಯಿತು. ಕಟ್ಟಡವನ್ನು ನಿರ್ಮಿಸುವಾಗ ವಿದ್ಯಾರ್ಥಿಗಳಿಗೆ ಓಡಾಡಲು ಸಾಕಷ್ಟು ಸ್ಥಳಾವಕಾಶ ಕಲ್ಪಿಸುವಂತೆ ಹಾಗೂ ಹೆಚ್ಚು ಗಾಳಿ ಬೆಳಕು ಬರುವ ರೀತಿಯಲ್ಲಿ ಕಟ್ಟಡವನ್ನು ನಿರ್ಮಿಸುವಂತೆ ಸಂಘದ ಪದಾಧಿಕಾರಿಗಳಿಗೆ ತಿಳಿಸಲಾಯಿತು.

4. ಶಾರದಾದೇವಿ ನಗರ ವೃತ್ತದ ಸ್ಥಳ ಪರಿಶೀಲಿಸಿ ಇಲ್ಲಿ ಕೆಲವು ಅನಧಿಕೃತ ಅಂಗಡಿಗಳು ಇರುವುದನ್ನು ಗಮನಿಸಲಾಯಿತು ಹಾಗೂ ಈ ಪ್ರದೇಶದ ಬಗ್ಗೆ ಸರ್ವೆ ಮಾಡಿಸಿ ವರದಿ ಸಲ್ಲಿಸುವಂತೆ ಸ್ಥಳದಲ್ಲಿ ಹಾಜರಿದ್ದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.

5. ಮರಟಿಕ್ಯಾತನಹಳ್ಳಿ ಗ್ರಾಮದ ಸರ್ವೆ ನಂಬರ್ 48/1, 2, 3 ಮತ್ತು 56 ರಲ್ಲಿ ನಿರ್ಮಿಸಿರುವ ಖಾಸಗಿ ಬಡಾವಣೆಯನ್ನು ಪರಿಶೀಲಿಸಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವಂತೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯವರಿಂದ ನಿರಾಕ್ಷೇಪಣಾ ಪತ್ರ ಪಡೆದು ಸಲ್ಲಿಸುವಂತೆ ಹಾಗೂ ಸಿ.ಎ. ನಿವೇಶನಗಳಿಗೆ ಫೆನ್ಸಿಂಗ್ ಮಾಡಿ ನಗರಾಭಿವೃದ್ಧಿ ಪ್ರಾಧಿಕಾರದ ನಾಮಫಲಕವನ್ನು ಅಳವಡಿಸಲು ಅಭಿವೃದ್ಧಿದಾರರಿಗೆ ತಿಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಲಾಯಿತು.

6. ದಟ್ಟಗಳ್ಳಿ 3ನೇ ಹಂತ ನಿವೇಶನ ಸಂಖ್ಯೆ 5181 ಮತ್ತು 5190 ರ ನಿವೇಶನಗಳ ಗಡಿ ಗುರುತಿಸಿಕೊಡಲು ಕೋರಿರುವ ಅರ್ಜಿದಾರರ ಮನವಿಯ ಬಗ್ಗೆ ಸ್ಥಳ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ಈ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಲಾಯಿತು.

7. ಕೇರ್ಗಳ್ಳಿ ಗ್ರಾಮದಲ್ಲಿ ಹೌಸಿಂಗ್ ಬೋರ್ಡ್ ಸಹಭಾಗಿತ್ವದಲ್ಲಿ 13ಎಕರೆ 35ಗುಂಟೆ ಪ್ರದೇಶದಲ್ಲಿ ನಿರ್ಮಿಸಿರುವ ಬಡಾವಣೆಯ ಸ್ಥಳಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಈ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು. ಈ ಬಡಾವಣೆಯ ಪರಿಷ್ಕøತ ನಕ್ಷೆಯನ್ನು ಅನುಮೋದಿಸಿಕೊಂಡು ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ತಿಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಲಾಯಿತು.

ಅಧ್ಯಕ್ಷರ ಆಪ್ತ ಸಹಾಯಕ ಶಾಖೆ,
ಮೈ.ನ.ಪ್ರಾ., ಮೈಸೂರು.

 
ಸಂಖ್ಯೆ :ಮೈ.ನ.ಪ್ರಾ/ಆಆಸಶಾ/ಪ.ಪ್ರ/2014-15 ದಿನಾಂಕ 06.03.2015

ಪತ್ರಿಕಾ ಪ್ರಕಟಣೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಎಸ್.ಪಾಲಯ್ಯ ರವರು ದಿನಾಂಕ: 06.03.2015 ರಂದು ರಾಮಕೃಷ್ಣನಗರ “ಐ” ಬ್ಲಾಕ್ ವೃತ್ತದಲ್ಲಿ ಅಂದಾಜು ರೂ. 4.00 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಾಮಕೃಷ್ಣ ಪರಮಹಂಸರ ವೃತ್ತದ ಕಾಮಗಾರಿಯನ್ನು ಪರಿಶೀಲಿಸಿದರು. ಈ ಕಾಮಗಾರಿಯು ಶೀಘ್ರವಾಗಿ ಪೂರ್ಣಗೊಂಡು ಜನಸಾಮಾನ್ಯರಿಗೆ ಅರ್ಪಿಸಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಟಿ.ಕೆ.ರವಿ ಮತ್ತು ಕಾಮಗಾರಿಯ ಉಸ್ತುವಾರಿ ಅಭಿಯಂತರರಾದ ಶ್ರೀ ಎಸ್.ಎಲ್.ಬಾಲಚಂದ್ರ ರವರು ಹಾಜರಿರುತ್ತಾರೆ.

ಆಯುಕ್ತರು,
ಮೈ.ನ.ಪ್ರಾ., ಮೈಸೂರು.
 
Mysore Anantharama Sampath Iyengar Passes away - Condolence Press Note March 6th 2015
 
ಪತ್ರಿಕಾ ಪ್ರಕಟಣೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ.ಆರ್.ಮೋಹನ್‍ಕುಮಾರ್ ರವರ ಅಧ್ಯಕ್ಷತೆಯಲ್ಲಿ ದಿನಾಂಕ 05-03-2015 ರಂದು ಪೂರ್ವಾಹ್ನ 11.30 ಘಂಟೆಯಿಂದ 1.00 ಘಂಟೆಯ ವರೆಗೆ ಪ್ರಾಧಿಕಾರದ ಸಭಾಂಗಣದಲ್ಲಿ ನಾಗರೀಕ ಸೌಕರ್ಯ ನಿವೇಶನಗಳ ಹಂಚಿಕೆ ಉಪಸಮಿತಿ ಸಭೆಯನ್ನು (C. A. Site Sub-Committee) ನಡೆಸಲಾಯಿತು. ಈ ಸಭೆಯಲ್ಲಿ ಶಾಸಕರುಗಳಾದ ಶ್ರೀ ಜಿ.ಟಿ.ದೇವೇಗೌಡ ರವರು ಶ್ರೀ ವಾಸು ರವರು, ಶ್ರೀ ಗೋ. ಮಧುಸೂದನ ರವರು, ಪ್ರಾಧಿಕಾರದ ಆಯುಕ್ತರಾದ ಶ್ರೀ ಎಸ್.ಪಾಲಯ್ಯ ರವರು, ನಗರಯೋಜನಾ ಸದಸ್ಯರಾದ ಶ್ರೀ ಎಂ.ಸಿ.ಶಶಿಕುಮಾರ್ ರವರು ಹಾಜರಿರುತ್ತಾರೆ. ಸಿ.ಎ. ನಿವೇಶನಗಳ ಹಂಚಿಕೆ ಮಾಡಲು ಇರುವ ಎಲ್ಲಾ ನಿಯಮಾವಳಿಗಳನ್ನು ಈ ಉಪಸಮಿತಿಯ ಪ್ರಾರಂಭಿಕ ಸಭೆಯಲ್ಲಿ ಪರಿಶೀಲಿಸಲಾಯಿತು. ಸಿ.ಎ.ನಿವೇಶನಗಳನ್ನು ಕೋರಿ ಅರ್ಜಿ ಸಲ್ಲಿಸಿರುವ ಸಂಘ ಸಂಸ್ಥೆಗಳವರ ಪೂರ್ಣ ವಿವರಗಳು, ಅವರು ಕೋರಿರುವ ಸಿ.ಎ. ನಿವೇಶನಗಳ ಚೌತರ್ಪಿನೊಂದಿಗೆ ನಕ್ಷೆ ಸಮೇತ ಮಾಹಿತಿಯನ್ನು ಮುಂದಿನ ಉಪಸಮಿತಿ ಸಭೆಗೆ ಮಂಡಿಸಲು ನಿರ್ಣಯ ಕೈಗೊಳ್ಳಲಾಯಿತು.

ಅಧ್ಯಕ್ಷರ ಆಪ್ತ ಸಹಾಯಕ ಶಾಖೆ,
ಮೈ.ನ.ಪ್ರಾ., ಮೈಸೂರು.
 
ಸಂಖ್ಯೆ :ಮೈ.ನ.ಪ್ರಾ/ಆಆಸಶಾ/ಪ.ಪ್ರ/2014-14 ದಿನಾಂಕ 25.02.2015
ಪತ್ರಿಕಾ ಪ್ರಕಟಣೆ

ಶ್ರೀ.ಎಲ್.ವಿ.ನಾಗರಾಜನ್ ಅಡಿಷನಲ್ ಚೀಪ್ ಸೆಕ್ರೇಟರಿ ಹರ್ಬನ್ ಡೆವಲಪಮೆಂಟ್ ಡಿಪಾರ್ಟ್ ಮೆಂಟ್ ಮತ್ತು ಮ್ಯಾನೆಂಜಿಂಗ್ ಡೈರೆಕ್ಟರ್ ಕೆ.ಯು.ಐ.ಡಿ.ಎಫ್.ಸಿ ಇವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುತ್ತಿರುವ ಹೊರವರ್ತುಲ ರಸ್ತೆ (ರಿಂಗ್ ರೋಡ್) ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಗಿ ಪ್ರಾಧಿಕಾರದ ಆಯುಕ್ತರಾದ ಶ್ರೀ.ಎಸ್.ಪಾಲಯ್ಯನವರು , ಸೂಪರಿಡೆಂಟ್ ಇಂಜಿನಿಯರ್ (ಪ್ರಭಾರ) ಶ್ರೀ.ವೀರಭದ್ರಯ್ಯ ಹಾಗೂ ಕಾರ್ಯಪಾಲಕ ಅಭಿಯಂತರರು ಶ್ರೀ.ರವಿಕುಮಾರ್(ನರ್ಮ್), ಸಹಾಯಕ ಕಾರ್ಯಪಾಲಕ ಅಭಿಯತಂತರರಾದ ಶ್ರೀ.ಮಹೇಶ್ ಸಂಬಂಧಪಟ್ಟ ಅಭಿಯಂತರರು ಮತ್ತು ಸಂಬಂಧಪಟ್ಟ ಗುತ್ತಿಗೆದಾರರು ಹಾಜರಿದ್ದರು.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು.
 
ದಿನಾಂಕ: 24-02-2015 ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ.ಆರ್.ಮೋಹನ್ ಕುಮಾರ್ ರವರು ಈ ಕೆಳಕಂಡ ಬಡಾವಣೆಗಳನ್ನು ಸ್ಥಳಪರಿಶೀಲನೆ ಮಾಡಿರುತ್ತಾರೆ. ಸ್ಥಳಪರಿಶೀಲನಾ ಸಮಯದಲ್ಲಿ ಪ್ರಾಧಿಕಾರದ ಆಯುಕ್ತರಾದ ಶ್ರೀ ಎಸ್.ಪಾಲಯ್ಯ, ನಗರಯೋಜನಾ ಸದಸ್ಯರಾದ ಶ್ರೀ ಎಂ.ಸಿ.ಶಶಿಕುಮಾರ್, ಕಾರ್ಯಪಾಲಕ ಅಭಿಯಂತರರಾದ ಶ್ರೀ ಬಿ.ಎನ್.ಪ್ರಭಾಕರ್, ಶ್ರೀ ವೀರಭದ್ರಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಭಾಸ್ಕರ್, ಶ್ರೀ ಹೆಚ್.ಕೆ.ರಾಮಸ್ವಾಮಿ, ಶ್ರೀ ಜಿ.ಮೋಹನ್, ಶ್ರೀ ರಂಗಸ್ವಾಮಿ ಹಾಗೂ ಸಂಬಂಧಪಟ್ಟ ಸಹಾಯಕ ಅಭಿಯಂತರರುಗಳು ಹಾಜರಿರುತ್ತಾರೆ.
View PDF File
 

APMC Spot Inspection - Press Note 21/2/2015

 
Chairman Visiting Hours :: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಕೆ.ಆರ್.ಮೋಹನ್‍ಕುಮಾರ್, ರವರನ್ನು ಸಾರ್ವಜನಿಕರು ಪ್ರಾಧಿಕಾರದ ವಿಷಯಗಳಿಗೆ ಸಂಬಂಧಿಸಿದಂತೆ ಸಂಜೆ 3.30 ರಿಂದ 5.30ರ ವರೆಗೆ ಪ್ರಾಧಿಕಾರದ ಅಧ್ಯಕ್ಷರವರ ಕಛೇರಿಯಲ್ಲಿ ಭೇಟಿ ಮಾಡಬಹುದಾಗಿರುತ್ತದೆ.  - Press Note
ಸಂಖ್ಯೆ ಮೈನಪ್ರಾ/ಆಆಸಶಾ/ಪ.ಪ್ರ/2014-15 ದಿನಾಂಕ 13.02.2015.  
ಪತ್ರಿಕಾ ಪ್ರಕಟಣೆ

ದಿನಾಂಕ 13.02.2015ರ ಸಂಜೆ ಪ್ರಾಧಿಕಾರದ ಆಯುಕ್ತರು ಬೋಗಾಧಿ 2ನೇ ಹಂತ ಬಡಾವಣೆಯಲ್ಲಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗಿರುವ ಹೆಚ್.ಐ.ಜಿ, ಎಂ.ಐ.ಜಿ ಹಾಗೂ ಎಲ್.ಐ.ಜಿ ಮನೆಗಳನ್ನು ಪರಿಶೀಲಿಸಿದ್ದು, ಈ ಸಮಯದಲ್ಲಿ ಸದರಿ ಮನೆಗಳ ಪೈಕಿ 4 ಮನೆಗಳು 10 ವರ್ಷಗಳಿಂದ ಖಾಲಿಯಿದ್ದು, ಈ ರೀತಿ ಖಾಲಿ ಬಿದ್ದಿರುವ ಮನೆಗಳನ್ನು ಪಟ್ಟಿ ಮಾಡಿ ದಾಖಲಾತಿಗಳನ್ನು ಪರಿಶೀಲಿಸಿ ಹರಾಜಿಗೊಳಪಡಿಸುವ ಸಂಬಂಧ ಕ್ರಮವಹಿಸಲು ಸೂಚಿಸಲಾಗಿದೆ.

ಅದರಂತೆ ಯಾವುದೇ ಬಡಾವಣೆಗಳಲ್ಲಿ ಈ ರೀತಿ ವಾರಸುದಾರರಿಲ್ಲದೇ ಖಾಲಿ ಬಿದ್ದಿರುವ ಮನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಪ್ರಾಧಿಕಾರದ ಆಯುಕ್ತರ ಆಪ್ತ ಶಾಖೆಯ ಗಮನಕ್ಕೆ ತರಬೇಕಾಗಿ ಈ ಮೂಲಕ ಕೋರಿದೆ.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು
 
ಮೈಸೂರು ತಾಲ್ಲೂಕು ಮರಟಿಕ್ಯಾತನಹಳ್ಳಿ ಗ್ರಾಮದ ಸರ್ವೆ ನಂ.23/1, 24/1,24/2 ಮತ್ತು ಇತರೆ ಸರ್ವೆ ನಂಬರ್‍ಗಳಲ್ಲಿ ಒಟ್ಟು 38.13 ಎಕರೆ ಪ್ರದೇಶದಲ್ಲಿ ರಾಯಲ್ ಎನ್‍ಕ್ಲೇವ್ ಎಂಬ ಡೆವಲಪ್ಪರ್ ಸಂಸ್ಥೆಗೆ ನಿವೇಶನ ಬಿಡುಗಡೆ ಮಾಡಿರುವ ವಿಚಾರ.
View File in DOC Format
 
Officers Meeting
Press Note :: 06/02/2015
 
ಸಂಖ್ಯೆ ಮೈನಪ್ರಾ/ಆಆಸಶಾ/ಪ.ಪ್ರ/2014-15 05.02.2015
ಪತ್ರಿಕಾ ಪ್ರಕಟಣೆ
ಲಲಿತಾದ್ರಿಪುರ ಗ್ರಾಮದ ಸರ್ವೆ ನಂ-24/1, 2 ಮತ್ತು ಸರ್ವೆ ನಂ-8ರಲ್ಲಿ ಒಟ್ಟು 8 ಎಕರೆ 22 ಗುಂಟೆ ಪ್ರದೇಶವು ನ್ಯಾಯಾಲಯದಲ್ಲಿ ಪ್ರಾಧಿಕಾರದ ಪರವಾಗಿ ಆಗಿದ್ದು, ದಿನಾಂಕ 05.02.2014ರಂದು ಪೊಲೀಸ್ ರಕ್ಷಣೆಯೊಂದಿಗೆ ಸದರಿ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ 4 ಶೆಡ್ಡುಗಳು ಹಾಗೂ ತೆಂಗಿನತೋಟಗಳನ್ನು ನೆಲಸಮಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕಾರ್ಯಪಾಲಕ ಅಭಿಯಂತರಾದ ಬಿ.ಎನ್.ಪ್ರಭಾಕರ್, ವಲಯ ಅಧಿಕಾರಿ ಎಂ.ಆರ್.ಪಾಂಡುರಂಗ, ವಿಶೇಷ ರಾಜಸ್ವ ನಿರೀಕ್ಷಕರು, ಸರ್ವೇಯರ್‍ಗಳು ಹಾಗೂ ಇತರೆ ಸಿಬ್ಬಂದಿಗಳು ಹಾಜರಿದ್ದರು.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು
Spot Inspection :: 3/2/2015 - Press Note
 
ಸಂಖ್ಯೆ-ಮೈನಪ್ರಾ/ಆಆಸಶಾ/ಪ.ಪ್ರ/2014-15 ದಿನಾಂಕ 26.01.2015

ಪತ್ರಿಕಾ ಪ್ರಕಟಣೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 66ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಪ್ರಾಧಿಕಾರದ ಆವರಣದಲ್ಲಿ ಆಚರಿಸಲಾಯಿತು. ಪ್ರಾಧಿಕಾರದ ಆಯುಕ್ತರಾದ ಶ್ರೀ.ಕೆ.ಆರ್.ಮೋಹನ್‍ಕುಮಾರ್‍ರವರು ದ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಆಯುಕ್ತರಾದ ಎಸ್.ಪಾಲಯ್ಯ, ಅಧೀಕ್ಷಕ ಅಭಿಯಂತರಾದ ಶಿವಕುಮಾರ್, ನಗರ ಯೋಜನಾ ಸದಸ್ಯರಾದ ಶಶಿಕುಮಾರ್, ಕಾರ್ಯದರ್ಶಿ ಡಾ.ನಂಜುಂಡೇಗೌಡಕಾರ್ಯಪಾಲಕ ಅಭಿಯಂತರುಗಳಾದ ಎಸ್.ವೀರಭದ್ರಯ್ಯ ಮತ್ತು ಬಿ.ಎನ್.ಪ್ರಭಾಕರ್ ಮತ್ತು ಎಲ್ಲಾ ಸಹಾಯಕ ಕಾರ್ಯಪಾಲಕ ಅಭಿಯಂತರುಗಳು ಹಾಗೂ ಮತ್ತಿತರರು ಹಾಜರಿದ್ದರು.

ಆಯುಕ್ತರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು
 
Press Note Ballahalli -23-01-2015

21-01-2015- APMC Ring Road Inspection

Gas Subsidy Cylinder surrendered : MUDA Chairman                            Acknowledgement Bharath Gas

e - Auction MUDA/e-Auction Date :: 19/12/2014 04/2014-15 Kannada | English   Golden Chance for Site Buyers

e - Auction Notification-03/2014-15  Kannada | English

e-Auction 10/7/2014

 
Caution
  1. Application Forms are available at SPANDANA Counter at MUDA Office, Mysore on Payment of Rs. 10 / Form.
  2. Publics are requested to buy the forms only at the SPANDANA Counters.
  3. Public dealing with any outsiders in this regard the authority is not responsible
  4. Any grievances / complaints the publics are requested to contact Secretary MUDA / PRO MUDA.

 

APMC Guddali Puja - Press Note :: Jan 9th 2015
 

Nanjangud Spot Inspection :: Press Note - Jan 5th 2015
 
Press Note
 

New Year 2015 Wishes - Press Note