Muda since 1903

 
Projects
Your Property / Site Status
City Planning
Allotment of Sites
Catalog & Indexing
Notice Board
Meeting Proceedings
Notifications
Tender
Auctions
ACTS
Frequently Asked Questions
 
 

 

MUDA Preamble ಮುಡಾ ಪ್ರಸ್ತಾವನೆ

ಮೈಸೂರು ನಗರ ಯೋಜನೆ ಮತ್ತು ಅಭಿವೃದ್ಧಿ ಪ್ರಾಧಿಕಾರವು ರಾಜ್ಯ ಮಟ್ಟದ ಅಭಿವೃದ್ಧಿ ಸಂಸ್ಥೆಯಾಗಿದ್ದು, ಸರಿಯಾಗಿ ಯೋಜನೆ ಹಾಕಿದ ಮತ್ತು ಸರಿಯಾಗಿ ರೂಪಿಸಿದ ನಗರ ಯೋಜನೆ ಮಾಡಬೇಕೆಂಬ ಮೂಲ ಆಶಯದೊಂದಿಗೆ ಆರಂಭಿಸಯಿತು. ನಗರ ಮೂಲ ಸೌಕರ್ಯವನ್ನು ಸಾಮಾಜಿಕವಾಗಿ ಮತ್ತು ಪ್ರಾಕೃತಿಕವಾಗಿ ಉತ್ತಮ ಗುಣಮಟ್ಟದೊಂದಿಗೆ ನೀಡಬೇಕು, ನಗರ ಪ್ರದೇಶಗಳನ್ನು ಉತ್ತಮವಾಗಿ ರೂಪಿಸಿ, ಪ್ರಕೃತಿ ನಿರ್ಮಿತ ಮತ್ತು ಮನುಷ್ಯ ನಿರ್ಮಿತ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವುದಕ್ಕೆ ಉತ್ತೇಜನ, ಮಿತವ್ಯಯಕಾರಿ, ಪರಿಣಾಮಕಾರಿ ಇಂಧನ, ಪರಿಸರ ಸ್ನೇಹಿ ಮತ್ತು ಬಡವರಿಗೂ ಸಿಗುವಂಥ ಮನೆಗಳ ನಿರ್ಮಾಣ, ನಗರ ಅಭಿವೃದ್ಧಿಗಾಗಿ ಯೋಜಿತವಾಗಿ ಖಾಸಗಿಯವರನ್ನು ಬಳಸಿಕೊಳ್ಳುವಿಕೆ, ನಗರ ಮೂಲಸೌಕರ್ಯ ಮತ್ತು ಮನೆಗಳ ನಿರ್ಮಾಣ ಇತ್ಯಾದಿ, ಈ ಮೂಲಕ ಪ್ರಾಧಿಕಾರವು ನಿವೇಶನ ಪಡೆದುಕೊಂಡವರಿಗೆ ಮತ್ತು ಖರೀದಿದಾರರಿಗೆ ಈ ಮೂಲಕ ಪ್ರಾಧಿಕಾರವು ಸಾರ್ವಜನಿಕರಿಗೆ ನಾಗರಿಕ ಸನ್ನದು ಮಾಡಿದೆಃ

  • ಪಾರದರ್ಶಕತೆಗೆ ಒತ್ತು ನೀಡಿ ವ್ಯಕ್ತಿ ನಿಷ್ಠತೆ ಮತ್ತು ಸ್ವಜನಪಕ್ಷಪಾತ ನಿರ್ಮೂಲನೆ ಮಾಡುವ ನಿರ್ಧಾರ.
  • ನಿಗದಿತ ಕಾಲಮಿತಿಯಲ್ಲೇ ಪರಿಣಾಮಕಾರಿ ಮತ್ತು ಉತ್ತಮ ಸೇವೆ ನೀಡುವ ವಾಗ್ದಾನ.
  • ಉತ್ತಮ ಗುಣಮಟ್ಟದ ವಸ್ತುಗಳನ್ನು ಕಡಿಮೆ ದರದಲ್ಲಿ ಮತ್ತು ಸ್ಪರ್ಧಾತ್ಮಕ ಪ್ರಕ್ರಿಯೆಯಲ್ಲಿ ಸಿಗುವಂತೆ ಮಾಡುವುದು.
  • ನಗರ ಯೋಜನೆಗಳು ಮತ್ತು ಕಾರ್ಯಗಳನ್ನು ರೂಪಿಸುವಿಕೆ, ವಿನ್ಯಾಸಗೊಳಿಸುವಿಕೆ, ಕಾರ್ಯಗತಗೊಳಿಸುವಿಕೆ ಮತ್ತು ಉತ್ತಮ ಗುಣಮಟ್ಟ ರೂಪಿಸುವಲ್ಲಿ ಫಲಾನುಭವಿಗಲಿಗೂ ಅವಕಾಶ ನೀಡುವುದು.
  • ಪಾರದರ್ಶಕ ರೀತಿಯಲ್ಲಿ, ಏನನ್ನೂ ಮುಚ್ಚಿಡದೇ ಎಲ್ಲಾ ರೀತಿಯ ಮಾಹಿತಿ ನೀಡುವುದು.
  • ಯೋಜನೆಗಳು ಮತ್ತು ಕಾರ್ಯಕ್ಷಮತೆಯ ಮೇಲ್ವಿಚಾರಣೆ, ಕಾಲಕಾಲಕ್ಕೆ ಪರಿಶೀಲನೆ ಮತ್ತು ಸ್ವತಂತ್ರ ಪರಿಶೀಲನೆಗಾಗಿ ಗೃಹ ವ್ಯವಸ್ಥೆಯನ್ನು ನಿರ್ಮಿಸುವುದು.
  • ಈ ಗುರಿಗಳನ್ನು ಈಡೇರಿಸಿಲದಲ್ಲಿ ಉಳಿದವು ಕೂಡ ತನ್ನಿಂತಾನೇ ಜಾರಿಯಾಗುತ್ತವೆ.